ಕೂಡಿಗೆ, ಜ. ೨೯: ಹುದುಗೂರು, ಮಾವಿನಹಳ್ಳ , ಕಾಳಿದೇವನ ಹೊಸೂರು ವ್ಯಾಪ್ತಿಯ ರೈತ ಸಂಘದ ಮುಖಂಡರು, ಗ್ರಾಮಸ್ಥರು ಹಾರಂಗಿಯಲ್ಲಿರುವ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿಗೆ ತೆರಳಿ ತಾ. ೩೧ ರಂದು ಹಾರಂಗಿಯ ಕಚೇರಿಯಲ್ಲಿ ನೀರಾವರಿ ಇಲಾಖೆಯ ಅಭಿಯಂತರರು ಮತ್ತು ಸಹಾಯಕ ಅಭಿಯಂತರರು ಮತ್ತು ಕುಶಾಲನಗರದಲ್ಲಿರುವ ನೀರಾವರಿ ಇಲಾಖೆಗೆ ಸಂಬAಧಿಸಿದ ಅಧಿಕಾರಿಗಳೊಂದಿಗೆ ರೈತರ ಸಭೆಯನ್ನು ನಡೆಸುವಂತೆ ಮನವಿ ಸಲ್ಲಿಸಿದರು.

ಹಾರಂಗಿಯ ಅಣೆಕಟ್ಟೆ ಸಮೀಪದ ಮುಖ್ಯ ನಾಲೆಯ ಕಾಮಗಾರಿ ಆರಂಭಗೊAಡು ೯ ತಿಂಗಳುಗಳು ಕಳೆದರೂ ಇದುವರೆಗೂ ಸಮರ್ಪಕವಾಗಿ ನಾಲೆಗಳ ಮೇಲಿನ ನಾಲೆಯ ಅಂಚಿನಲ್ಲಿರುವ ಬೃಹತ್ ಗಾತ್ರದ ಮರಗಳ ತೆರವು ನಡೆದಿಲ್ಲ ಎಂಬಿತ್ಯಾದಿ ಸಭೆಯನ್ನು ಕರೆಯುವಂತೆ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಹುದುಗೂರು ವಿಭಾಗ ಸದಸ್ಯರಾದ ಹೆಚ್. ಎಸ್. ರವಿ, ರತ್ನಮ್ಮ, ರಾಮೇಶ್ವರ ನೀರು ಬಳಕೆದಾರ ಸಂಘದ ಮಾಜಿ ಅಧ್ಯಕ್ಷ ಐ.ಎಸ್. ಗಣೇಶ್, ಉಮಾಮಹೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಟಿ. ಎಂ. ಚಾಮಿ ರೈತ ಮುಖಂಡರಾದ ಎಂ.ಅಶೋಕ್, ಬೋಪಯ್ಯ, ರುದ್ರಪ್ಪ, ಜೋಯಪ್ಪ, ರಘು, ಜನಾರ್ಧನ್, ಚೆಂಗಪ್ಪ ಸೇರಿದಂತೆ ಹಲವು ರೈತರು ಹಾಜರಿದ್ದರು. ಈ ವಿಷಯಕ್ಕೆ ಸಂಬAಧಿಸಿದAತೆ ಶಾಸಕರಾದ ಡಾ. ಮಂಥರ್ ಗೌಡ ಹಾಗೂ ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಲಾಗಿದೆ ಎಂದು ರೈತರ ಮುಖಂಡರು ತಿಳಿಸಿದ್ದಾರೆ.