ಗೋಣಿಕೊಪ್ಪ ವರದಿ, ಜ. ೨೯: ಶಿಕ್ಷಣದೊಂದಿಗೆ ಆಚಾರವನ್ನು ಬೆಳೆಸಿಕೊಳ್ಳಬೇಕು ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು. ಕ್ಯಾಲ್ಸ್ ಶಾಲೆಯಲ್ಲಿ ಆಯೋಜಿಸಿದ್ದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಶಿಕ್ಷಣದೊಂದಿಗೆ ಸಂಸ್ಕೃತಿ ಮತ್ತು ಪರಂಪರೆಯನ್ನು ಮರೆಯಬಾರದು. ಶಿಕ್ಷಣದೊಂದಿಗೆ ಸಮಾಜಕ್ಕೆ ಒಳಿತಾಗುವಂತೆ ನಡೆದುಕೊಳ್ಳುವ ಆಚಾರವನ್ನು ಬೆಳೆಸಿಕೊಳ್ಳಬೇಕು. ರಾಜವಂಶದವರು ಅರಮನೆ ಪದ್ಧತಿ ಪಾಲಿಸುವಂತೆ, ಭಾರತೀಯರು ಭಾರತೀಯ ಸಂಸ್ಕೃತಿಯನ್ನು ಪಾಲಿಸಬೇಕು ಎಂದು ಹೇಳಿದರು.

೧೦ ನೇ ತರಗತಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಸಾಧನೆಗೆ ಶಿಕ್ಷಕರು ಶಾಲೆಯಲ್ಲಿ ನೀಡುವ ಉತ್ತಮ ಅಡಿಪಾಯ ಹಾಗೂ ಪೋಷಕರ ಪಾತ್ರ ಮಹತ್ವದಾಗಿದೆ ಎಂದರು. ಕೊಡವ ಸಂಸ್ಕೃತಿ ಹಾಗೂ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸಾಂಪ್ರದಾಯಿಕ ಉಡುಪು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಶ್ವಿನಿ ಫೌಂಡೇಷನ್ ನಿರ್ದೇಶಕಿ ಅಶ್ವಿನಿ ನಾಚಪ್ಪ, ಶಾಲೆ ಮುಖ್ಯಸ್ಥ ಮನೆಯಪಂಡ ದತ್ತ ಕರುಂಬಯ್ಯ, ಪ್ರಾಂಶುಪಾಲ ಗೌರಮ್ಮ ನಂಜಪ್ಪ ಇದ್ದರು.