ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ
ಮಡಿಕೇರಿ, ಜ. ೩೦: ಕರ್ನಾಟಕ ರಾಜ್ಯದಲ್ಲಿನ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಇಲ್ಲದ ಎಲ್ಲಾ ಚಾರಣ ತಾಣ (ಟ್ರೆಕ್ಕಿಂಗ್ ಪಾಯಿಂಟ್)ಗಳಲ್ಲಿ ತಾತ್ಕಾಲಿಕವಾಗಿ ಚಾರಣವನ್ನು ನಿರ್ಬಂಧಿಸುವAತೆ ರಾಜ್ಯ ಅರಣ್ಯ ಸಚಿವ ಈಶ್ವರ್ ಕುಮಾರ್ ಖಂಡ್ರೆ ಸೂಚಿಸಿದ್ದಾರೆ. ಕಳೆದ ವಾರಾಂತ್ಯ ಪುಷ್ಪಗಿರಿ ವನ್ಯಜೀವಿ ವ್ಯಾಪ್ತಿಯ ಕುಮಾರ ಪರ್ವತದಲ್ಲಿ ಸಹಸ್ರ ಸಂಖ್ಯೆಯಲ್ಲಿ ಜಮಾಯಿಸಿದ್ದ ಚಾರಣಿಗರ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇದನ್ನು ಗಮನಿಸಿದ ಸಚಿವರು, ಅಧಿಕ ಸಂಖ್ಯೆಯ ಚಾರಣಿಗರಿಂದ ಪ್ರಕೃತಿಯ ಮೇಲೆ ಆಗಿರಬಹುದಾದ ಹಾನಿ ಬಗ್ಗೆ ವರದಿ ನೀಡಲು ಮಡಿಕೇರಿ ಡಿ.ಸಿ.ಎಫ್ ಅವರಿಗೆ ಸೂಚಿಸಿದ್ದರು. ಈ ನಡುವೆ ಕುಮಾರ ಪರ್ವತದಲ್ಲಿ ಚಾರಣಿಗರ ಸಂಖ್ಯೆಯನ್ನು ನಿಯಂತ್ರಿಸಲು ವನ್ಯಜೀವಿ ವಿಭಾಗದ ವಾರ್ಡನ್ ಸಮ್ಮುಖದಲ್ಲಿ ಸಭೆ ನಡೆದು ಕುಮಾರ ಪರ್ವತದಲ್ಲಿ ಆನ್ ಲೈನ್ ಬುಕ್ಕಿಂಗ್ ಮೂಲಕ ಚಾರಣಿಗರಿಗೆ ಪ್ರವೇಶ ನೀಡುವಂತೆ ಸಭೆಯಲ್ಲಿ ಅಭಿಮತ ವ್ಯಕ್ತವಾಗಿತ್ತು.
ಇದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಸಚಿವರು, ಕುಮಾರ ಪರ್ವತಕ್ಕೆ ಸಾವಿರಾರು ಚಾರಣಿಗರು ಆಗಮಿಸಿದ್ದು ಕೆಲವರು ಟೆಂಟ್ ಹಾಕಿ ರಾತ್ರಿ ಪರ್ವತದಲ್ಲಿ ಉಳಿಯುತ್ತಾರೆ ಎನ್ನಲಾಗಿದೆ. ಪರಿಸರ ತಜ್ಞರು ಅರಣ್ಯ ಉಳಿವಿನ ಬಗ್ಗೆ ತಮ್ಮ ಕಳಕಳಿ, ಆತಂಕ ವ್ಯಕ್ತಪಡಿಸಿದ್ದಾರೆ. ಹೀಗೆ ಸಾವಿರಾರು ಸಂಖ್ಯೆಯಲ್ಲಿ ಚಾರಣಕ್ಕೆ ಜನರು ದಟ್ಟ ಅರಣ್ಯವಿರುವ ಗಿರಿ ಪ್ರದೇಶಗಳಿಗೆ, ಪಶ್ಚಿಮಘಟ್ಟಕ್ಕೆ ಪ್ರತಿವಾರವೂ ಆಗಮಿಸಿದರೆ ನಿಯಂತ್ರಿಸುವುದು ಮತ್ತು ಅವರ ತಪಾಸಣೆ ಮಾಡಿ ಬಿಡುವುದು ಅರಣ್ಯ ಇಲಾಖೆಯ ಸಿಬ್ಬಂದಿಗೂ ದೊಡ್ಡ ಸವಾಲಾಗುತ್ತದೆ. ಇದರಿಂದ ಪರಿಸರಕ್ಕೂ ಹಾನಿಯಾಗುತ್ತದೆ ಮತ್ತು ಜಲ ಮೂಲಗಳೂ ಕಲುಷಿತಗೊಳ್ಳುವ ಅಪಾಯ ಇದೆ. ಈ ಕಾರಣ ದಿಂದಾಗಿ ಚಾರಣ ಸಂಬAಧ ಕಾರ್ಯ ವಿಧಾನ (SಔP) ರೂಪಿಸುವವರೆಗೆ ಆನ್ಲೈನ್ ಬುಕ್ಕಿಂಗ್ ಇಲ್ಲದ ಎಲ್ಲಾ ಚಾರಣ ತಾಣಗಳಲ್ಲಿ ಚಾರಣವನ್ನು ತಾತ್ಕಾಲಿಕವಾಗಿ ನಿಷೇಧಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.