¨ ಟೆಂಡರ್ ಪ್ರತಿಕ್ರಿಯೆ ಆರಂಭ

¨ ರೂ. ೭೨.೨೪ ಕೋಟಿ ಯೋಜನೆ

ಕೂಡಿಗೆ, ಜ. ೨೮: ಹಾರಂಗಿ ಮುಖ್ಯ ನಾಲೆ ಸೇರಿದಂತೆ ಕೊಡಗಿನ ಗಡಿ ಭಾಗದವರೆಗೆ ಇರುವ ೧೪ ನೇ ತೂಬಿನವರೆಗೆ ನಾಲೆಯ ದುರಸ್ತಿ ಮತ್ತು ಕಿರು ಸೇತುವೆಗಳ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯಮಟ್ಟದಲ್ಲಿ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆಯು ನಡೆದು ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ತಿಳಿಸಿದ್ದಾರೆ.

ಅವರು ಕೂಡಿಗೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಈಗಾಗಲೇ ಹಾರಂಗಿ ಅಣೆಕಟ್ಟೆಯ ಸಮೀಪದಿಂದ ೭ನೇ ತೂಬಿನವರೆಗೆ ಎರಡು ಕಡೆಗಳಲ್ಲಿ ನಾಲೆಗೆ ಕಾಂಕ್ರೀಟೀಕರಣ, ಸಣ್ಣ ಸೇತುವೆಗಳ ನಿರ್ಮಾಣ ಸೇರಿದಂತೆ ಅತಿ ತಗ್ಗು ಪ್ರದೇಶದ ಮೂಲಕ ನಾಲೆ ಹೋಗಿರುವ ಜಾಗದಲ್ಲಿ ಒಳ ನಾಲೆಯ ನಿರ್ಮಾಣಕ್ಕೆ ಮೇಲ್ಛಾವಣಿಯ ಅಳವಡಿಕೆ, ನಾಲೆ ಮೇಲೆ ರಸ್ತೆಯ ಅಗಲಿಕರಣ ಸೇರಿದಂತೆ ನೂತನ ಮಾದರಿಯಲ್ಲಿ ನಾಲೆಯ ಕಾಮಗಾರಿಯನ್ನು ನಿರ್ಮಿಸುವ ಯೋಜನೆಯು ೪೯ ಕೋಟಿ ವೆಚ್ಚದ ಕಾಮಗಾರಿಯು ಹಾರಂಗಿಯಿAದ ಆರಂಭಗೊAಡಿದೆ.

ಅದೇ ಮಾದರಿಯಲ್ಲಿ ನೂತನವಾಗಿ ಕಾವೇರಿ ನೀರಾವರಿ ನಿಗಮದ ಮೂಲಕ ಪ್ರಸ್ತಾವನೆಯ ಅನುಗುಣವಾಗಿ ಸರಕಾರವು ಅನುಮೋದನೆ ನೀಡಿರುವ ಹಿನ್ನೆಲೆ ಯಲ್ಲಿ ೭೨.೨೪, ಕೋಟಿ ಹಣವು ಬಿಡುಗಡೆ ಗೊಂಡಿದ್ದು, ಕಾವೇರಿ ನೀರಾವರಿ ನಿಗಮದ ಮೂಲಕ ಕ್ರಿಯಾ ಯೋಜನೆ ಅನುಗುಣವಾಗಿ ರಾಜ್ಯ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಕೊಡಗಿನ ಗಡಿ ಭಾಗದವರೆಗೆ ಹಾರಂಗಿಯ ಮುಖ್ಯ ನಾಲೆಯ ಕೆಲ ಭಾಗ ಮತ್ತು ಭುವನಗರಿಯಿಂದ ಶಿರಂಗಾಲದವರೆಗೆ ಇರುವ ಎಡ ದಂಡೆಯ ನಾಲೆ ಕಾಮಗಾರಿಯು ಸದ್ಯದಲ್ಲಿ ಆರಂಭ ಗೊಳ್ಳುವ ಪ್ರಕ್ರಿಯೆಗಳು ಇಲಾಖೆ ಮೂಲಕ ನಡೆಯುತ್ತಿವೆ ಎಂದು ಶಾಸಕ ಡಾ. ಮಂಥರ್ ಗೌಡ ತಿಳಿಸಿದ್ದಾರೆ.

-ಕೆ.ಕೆ. ನಾಗರಾಜಶೆಟ್ಟಿ