*ಗೋಣಿಕೊಪ್ಪ, ಜ. ೨೯: ಜಾನಪದ ನೃತ್ಯ, ಬುಡಕಟ್ಟು ಗೀತೆಗಳಿಗೆ, ಸಿನಿಮಾ ಹಾಡುಗಳ ನೃತ್ಯಗಳಿಗೆ ಹೆಜ್ಜೆಗಳನ್ನು ಹಾಕುವ ಮೂಲಕ ಶಾಲಾ ವಾರ್ಷಿಕೋತ್ಸವವನ್ನು ಗೋಣಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಂಭ್ರಮಿಸಿದರು.
ಎಲ್.ಕೆ.ಜಿ, ಯು.ಕೆ.ಜಿ, ಒಂದನೇ ತರಗತಿಯಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳು ನೃತ್ಯಗಳಲ್ಲಿ ಭಾಗವಹಿಸಿ ಗಮನಸೆಳೆದರು. ಖಾಸಗಿ ಶಾಲೆಗೂ ಮೀರಿಸುವಂತೆ ವಿದ್ಯುತ್ ಅಲಂಕಾರದಿAದ ಶಾಲೆಯ ಆವರಣ ಕಳೆಗಟ್ಟಿತು. ಸೆಲ್ಫಿ ಸ್ಪಾಟ್ ಗಮನ ಸೆಳೆಯಿತು. ಪೋಷಕರು, ವಿದ್ಯಾರ್ಥಿಗಳು, ಅತಿಥಿಗಳು ಸೆಲ್ಫಿ ಸ್ಪಾಟ್ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಸಂಭ್ರಮಿಸಿದರು.
ತಮ್ಮ ಮಕ್ಕಳ ಪ್ರತಿಭೆ ಅನಾವರಣಕ್ಕೆ ಬೆರಗುಗೊಂಡ ಪೋಷಕರು ಚಪ್ಪಾಳೆ ತಟ್ಟುವ ಮೂಲಕ ಮಕ್ಕಳ ನೃತ್ಯ ಕಲೆಗೆ ಪ್ರೋತ್ಸಾಹ ನೀಡಿದರು. ಸುಮಾರು ಮೂರು ಗಂಟೆಗಳ ಕಾಲ ನಡೆದ ವಾರ್ಷಿಕೋತ್ಸವದ ಸಡಗರಕ್ಕೆ ೧೮ಕ್ಕೂ ಹೆಚ್ಚು ನೃತ್ಯಗಳ ಪ್ರದರ್ಶನಗಳೊಂದಿಗೆ ಹುಮ್ಮಸ್ಸು ತುಂಬಿತ್ತು.
ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರನ್ನು ಶಾಲು ಹೊದಿಸಿ ಸನ್ಮಾನಿಸುವುದರ ಜತೆಗೆ ಪ್ರೀತಿಯ ಎಲ್ಲಾ ಶಿಕ್ಷಕರಿಗೂ ವಿದ್ಯಾರ್ಥಿಗಳು ಗುಲಾಬಿಯನ್ನು ನೀಡುವ ಮೂಲಕ ವಿದ್ಯಾರ್ಥಿ ವಿನಯತೆಯನ್ನ ತೋರಿದರು. ಕರಟೆ ಪ್ರದರ್ಶನ, ವಿಜ್ಞಾನ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, ಡಂಬಲ್ಸ್, ಕ್ರೀಡಾಕೂಟಗಳು ನಡೆದವು.
ಶಿಕ್ಷಣ, ಕಲೆ, ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರ ಬಹುಮಾನವನ್ನು ನೀಡಲಾಯಿತು. ಜೊತೆಗೆ ಗಣರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ತಿಳಿಸಲಾಯಿತು. ಮತ್ತು ಮಕ್ಕಳಿಗೆ ಸಿಹಿಯನ್ನು ಹಂಚಲಾಯಿತು.
ಶಾಸಕ ಎ.ಎಸ್. ಪೊನ್ನಣ್ಣ ಭಾಗವಹಿಸಿ ಶಾಲಾ ವಾರ್ಷಿಕೋತ್ಸವಕ್ಕೆ ಶುಭ ಕೋರಿದರು. ವಿದ್ಯಾರ್ಥಿಗಳು ಪ್ರತಿಭೆಗಳ ಅನಾವರಣಗೊಳಿಸಿಕೊಳ್ಳಲು ಈ ವೇದಿಕೆ ಅತ್ಯಾಮೂಲ್ಯವಾಗಿದೆ. ಶಿಕ್ಷಕರು ತಾವು ಕಲಿತ ವಿದ್ಯೆಯನ್ನ ವಿದ್ಯಾರ್ಥಿಗಳಿಗೆ ದಾಟಿಸುವ ಮೂಲಕ ತಮ್ಮ ಜ್ಞಾನವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಶಿಕ್ಷಕ ಹೆಚ್.ಕೆ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸೌಮ್ಯ ಬಾಲು, ಉಪಾಧ್ಯಕ್ಷೆ ಸವಿತ, ಸದಸ್ಯರುಗಳಾದ ಬಿ.ಎನ್. ಪ್ರಕಾಶ್, ಪ್ರಮೋದ್ ಗಣಪತಿ, ಮಂಜುಳ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ, ರೋಟರಿ ಸಂಸ್ಥೆಯ ಪಾರುವಂಗಡ ದಿಲನ್ ಚಂಗಪ್ಪ, ತೀತಮಾಡ ಮೋಹನ್, ಎಂ.ಜಿ ಮೋಹನ್, ಕಾಡ್ಯಮಾಡ ನವೀನ್ ಸೇರಿದಂತೆ ಶಾಲೆಯ ಚಿತ್ರಕಲಾ ಶಿಕ್ಷಕ ಬಿ ಆರ್ ಸತೀಶ್, ದೈಹಿಕ ಶಿಕ್ಷಣ ಶಿಕ್ಷಕ ರಮಾನಂದ, ಶಿಕ್ಷಕರುಗಳಾದ ಕೆ.ಎ ಸರಸ್ವತಿ, ಬಿ.ಎಂ ನಿರ್ಮಲ, ಎಂ ಪಿ ಜೋಸ್ನಿಯ, ಎಸ್.ಕೆ ಜಯಶ್ರೀ, ಎಂ.ಎನ್. ಇಂದಿರಾ, ಹೆಚ್.ಈ. ಅನಿತಾ ಕುಮಾರಿ, ಎ.ಎಸ್. ದಮಯಂತಿ, ಕೆ.ಎಂ. ತ್ರಿವೇಣಿ, ಕೆ.ಎನ್. ಶಾರದ, ಸಿದ್ದರಾಜು ಎಸ್, ಸ್ನೇಹ ಕಾವೇರಮ್ಮ, ನಾಗರಾಜು ಮತ್ತು ವಿದ್ಯಾರ್ಥಿಗಳು ಪೋಷಕರು, ಎಸ್ಡಿಎಂಸಿ ಸದಸ್ಯರುಗಳು ಇದ್ದರು.