*ಗೋಣಿಕೊಪ್ಪ, ಜ. ೨೯: ಜಿಲ್ಲಾ ದಲಿತ ಸಂಘರ್ಷ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಗೋಣಿಕೊಪ್ಪ ದಲಿತ ಸಂಘರ್ಷ ಸಮಿತಿ ಕಚೇರಿಯಲ್ಲಿ ನಡೆಯಿತು.

ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾಗಿ ಹರೀಶ್ ಹೆಚ್.ಎನ್., ರವಿ ಹೆಚ್.ಎಂ. ಮತ್ತು ಪೊನ್ನಂಪೇಟೆ ತಾಲೂಕು ಸಂಚಾಲಕರಾಗಿ ಜೆ.ಕೆ. ವಿಜಯ, ಸಂಘಟನಾ ಸಂಚಾಲಕರಾಗಿ ಚೆಲುವ, ಮಂಜು, ಅಪ್ಪಚ್ಚು, ಜಾಫ್ರಿ, ವೀರಾಜಪೇಟೆ ತಾಲೂಕು ಸಂಚಾಲಕರಾಗಿ ಕುಮಾರ್, ಮಡಿಕೇರಿ ತಾಲೂಕು ಮಹಿಳಾ ಸಂಚಾಲಕರಾಗಿ ಹೆಚ್.ಹೆಚ್. ಪುಷ್ಪ, ಪೊನ್ನಂಪೇಟೆ ತಾಲೂಕು ಮಹಿಳಾ ಸಂಚಾಲಕರಾಗಿ ಹೆಚ್.ಪಿ. ಶೀಲಾ ಮತ್ತು ಸಂಘಟನಾ ಸಂಚಾಲಕರಾಗಿ ಲಕ್ಷಿö್ಮ, ಗೋಣಿಕೊಪ್ಪ ಗ್ರ‍್ರಾಮ ಸಂಚಾಲಕರಾಗಿ ಚಂದ್ರಮೋಹನ್, ಆಂತರಿಕ ಶಿಸ್ತು ಸಮಿತಿ ಸಂಚಾಲಕರಾಗಿ ಹೆಚ್. ರಾಜೇಶ್, ಸಂಘಟನಾ ಸಂಚಾಲಕರಾಗಿ ವಿಶ್ವನಾಥ್, ಪೊನ್ನಂಪೇಟೆ ಗ್ರಾಮ ಸಂಚಾಲಕರಾಗಿ ಹೆಚ್. ಸಂತೋಷ್, ಪಾಲಿಬೆಟ್ಟ ಗ್ರಾಮ ಸಂಚಾಲಕರಾಗಿ ನಾಸಿರ್ ಎಂ.ಬಿ., ತಿತಿಮತಿ ಗ್ರಾಮ ಸಂಚಾಲಕರಾಗಿ ಹೆಚ್.ಸಿ. ಲೋಕೇಶ್, ನಿಟ್ಟೂರು ಗ್ರಾಮ ಸಂಚಾಲಕರಾಗಿ ಕಾಳ, ಆಂತರಿಕ ಶಿಸ್ತು ಸಂಚಾಲಕರಾಗಿ ಪೊನ್ನ ಅವರುಗಳನ್ನು ಆಯ್ಕೆ ಮಾಡಲಾಯಿತು.