ಪೊನ್ನಂಪೇಟೆ. ಜ.೨೯: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ತಾ.೩೦ ರಂದು (ಇಂದು) ನಡೆಯಲಿದೆ. ಒಟ್ಟು ೨೦ ಸದಸ್ಯ ಬಲವನ್ನು ಹೊಂದಿರುವ ಪಂಚಾಯಿತಿಯಲ್ಲಿ ಬೆಜೆಪಿ ಬೆಂಬಲಿತ ೧೧ ಸದಸ್ಯರು ಮತ್ತು ಕಾಂಗ್ರೆಸ್ ಬೆಂಬಲಿತ ೮ ಸದಸ್ಯರು ಹಾಗೂ ಒಬ್ಬರು ಸ್ವತಂತ್ರ ಸದಸ್ಯ ಇದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ (ಎ) ಮೀಸಲಾತಿ ನಿಗದಿಯಾಗಿದ್ದು ಬೆಜೆಪಿಯಿಂದ ಬೊಟ್ಟಂಗಡ ದಶಮಿ ದೇಚಮ್ಮ, ಮತ್ತು ಅಡ್ಡಂಡ ನಿಲನ್ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್‌ನಿAದ ಅಣ್ಣಿರ ಹರೀಶ್ ಕಣದಲ್ಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎಂ (ಬಿ) ಮೀಸಲಾತಿ ನಿಗದಿಯಾಗಿದ್ದು ಬಿಜೆಪಿಯಿಂದ ಆಲಿರ ಅಬ್ದುಲ್ ಅಜೀಜ್, ಅಮ್ಮತ್ತೀರ ಆರತಿ ಸುರೇಶ್, ಕಾಂಗ್ರೆಸ್‌ನಿAದ ಆಲಿರ ರಶೀದ್ ಮತ್ತು ಜುನೈದ್ ಹಾಗೂ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ವಿಜಯ್ ಕುಮಾರ್ ಆಕಾಂಕ್ಷಿಯಾಗಿದ್ದಾರೆ.