ಮಡಿಕೇರಿ, ಜ. ೨೭ : ಕೊಡಗಿಗೆ ಜನವರಿ ೨೭ರ ಶನಿವಾರ ಐತಿಹಾಸಿಕ ದಿನ. ರಾಷ್ಟçದ ಹೆಮ್ಮೆಯ ಟೆನ್ನಿಸ್ ತಾರೆ ಕಾವೇರಿ ತವರು ಕೊಡಗಿನವರಾದ ಮಾದಾಪುರ ಗ್ರಾಮದ ಎಂ. ಜಿ ಬೋಪಣ್ಣ - ಮಲ್ಲಿಕಾ ದಂಪತಿಯ ಪುತ್ರ ಪದ್ಮಶ್ರೀ ಮಚ್ಚಂಡ ರೋಹನ್ ಬೋಪಣ್ಣ - ಆಸ್ಟೆçÃಲಿಯಾದ ಮ್ಯಾಥಿವ್ ಎಬ್ಡೆನ್ ಜೋಡಿ ಪ್ರತಿಷ್ಠಿತ ಗ್ರಾಂಡ್ ಸ್ಲಾಮ್ ಆಸ್ಟೆçÃಲಿಯನ್ ಓಪನ್ ಪುರುಷರ ಡಬಲ್ಸ್ ಟೆನ್ನಿಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ಕ್ಷಣ ಇಡೀ ಭಾರತದೊಂದಿಗೆ ರೋಹನ್ ತವರಾದ ಕ್ರೀಡಾ ಜಿಲ್ಲೆ ಖ್ಯಾತಿಯ ಕೊಡಗಿನ ಪಾಲಿಗೂ ಹಾಗೂ ಕರ್ನಾಟಕ ರಾಜ್ಯದ ಪಾಲಿಗೂ ಅತ್ಯಂತ ಹೆಮ್ಮೆಯ ವಿಚಾರ. ಆಸ್ಟೆçÃಲಿಯಾದ ಮೆಲ್ಬೋರ್ನ್ನಲ್ಲಿ ನಡೆದ ಗ್ರಾಂಡ್ ಸ್ಲಾಮ್ ಆಸ್ಟೆçÃಲಿಯನ್ ಓಪನ್ ಪುರುಷರ ಡಬಲ್ಸ್ ಫೈನಲ್ಸ್ನಲ್ಲಿ ಕೋಟ್ಯಂತರ ಭಾರತೀಯರ ಕನಸ್ಸನ್ನು ರೋಹನ್ ಹಾಗೂ ಎಬ್ಡೆನ್ ಜೋಡಿ ನನಸಾಗಿಸಿತು. ರೋಚಕ ಪಂದ್ಯದಲ್ಲಿ ೨-೦ ನೇರ ಸೆಟ್ನಿಂದ (ಮೊದಲ ಸೆಟ್ನಲ್ಲಿ ೬-೬ ಗೇಮ್ ಸಮಬಲದ ಬಳಿಕ ಟೈ ಬ್ರೇಕರ್ನಲ್ಲಿ ೭-೦ ಹಾಗೂ ೨ನೇ ಸೆಟ್ನಲ್ಲಿ ೭-೫) ಇಟಲಿಯ ಬೊಲೆಲ್ಲಿ - ವವಸೊರಿ ಜೋಡಿ ವಿರುದ್ಧ ಜಯ ಸಾಧಿಸುವುದರೊಂದಿಗೆ ಹೊಸ ಇತಿಹಾಸವೊಂದು ಸೃಷ್ಠಿಯಾಗಿದೆ. ೪೩ರ ಪ್ರಾಯದ ಹಿರಿಯ ಟೆನ್ನಿಸ್ ಪಟು, ವಿಶ್ವ ನಂಬರ್ ೧ ಆಗುವುದರೊಂದಿಗೆ ನಿನ್ನೆಯಷ್ಟೆ ದೊರಕಿದ ಪದ್ಮಶ್ರೀ ಬಿರುದು ಈ ಸಾಧನೆಯಿಂದಾಗಿ ಸಾರ್ಥಕ್ಯ ಕಂಡAತಾಗಿದೆ.
ವಯಸ್ಸು ೪೩ ಅಲ್ಲ, ಲೆವೆಲ್ ೪೩ - ಗೆದ್ದ ಬಳಿಕ ರೋಹನ್ ಅಭಿಮತ
ಅತ್ಯಂತ ಹಿರಿಯ ವಿಶ್ವ ನಂಬರ್ ೧, ಅತ್ಯಂತ ಹಿರಿಯ ಗ್ರಾಂಡ್ ಸ್ಲಾಮ್ ವಿಜೇತ ಎಂಬುದಾಗಿಯೇ ಗುರುತಿಸಲ್ಪಡುತ್ತಿರುವ ರೋಹನ್ ಅವರು ಪಂದ್ಯ ವಿಜೇತರಾದ ಬಳಿಕ ‘ನನ್ನ ವಯಸ್ಸು ೪೩ ಎಂದು ನಾನು ಭಾವಿಸುವುದಿಲ್ಲ, ಬದಲಿಗೆ ನನ್ನ ‘ಲೆವೆಲ್' ೪೩ ಎಂದು ಭಾವಿಸುತ್ತೇನೆ. ಕೆಲ ವರ್ಷಗಳ ಹಿಂದೆ ೫ ತಿಂಗಳು ಸತತವಾಗಿ ಯಾವುದೇ ಒಂದು ಪಂದ್ಯ ಗೆಲ್ಲಲು ಅಸಾಧ್ಯವಾಗಿ, ಟೆನ್ನಿಸ್ ವೃತ್ತಿ ಜೀವನಕ್ಕೆ ಅಂತ್ಯ ಹಾಡುವಂತಾಗಿತ್ತು. ಆದರೆ ಛಲ, ಪರಿಶ್ರಮದಿಂದ ಶ್ರಮಪಟ್ಟು ಧೃತಿಗೆಡದೆ ಇದ್ದ ಕಾರಣ ಇಂದು ಈ ಹಂತ ತಲುಪಿದ್ದೇನೆ. ನನಗೆ ಸಹಕಾರ ನೀಡಿದ ತರಬೇತುದಾರರು, ಗೆಳೆಯರು ಹಾಗೂ ಕುಟುಂಬಕ್ಕೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ನುಡಿದರು. ಪಂದ್ಯಾಟ ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸಿದ್ದ ರೋಹನ್ ಅವರ ಪತ್ನಿ ಸುಪ್ರಿಯಾ, ಪುತ್ರಿ ತ್ರಿದ ಹಾಗೂ ಸುಪ್ರಿಯ ಅವರ ಪೋಷಕರು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
ಪ್ರಧಾನಿ, ಸಿಎಂ ರಿಂದ ಪ್ರಶಂಸೆ : ರೋಹನ್ ಸಾಧನೆ ಗುರುತಿಸಿ ಹಲವಾರು ಪ್ರಮುಖರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಶಂಸೆಗೂ ರೋಹನ್ ಅವರು ಪಾತ್ರರಾದರು.