ಕರಿಕೆ, ಜ. ೨೭: ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ನೆನಪು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಸಾಹಿತ್ಯ ಪರಿಷತ್ತು, ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್, ಕರಿಕೆ ಗಡಿ ಸಾಂಸ್ಕೃತಿಕೋತ್ಸವ ಆಚರಣಾ ಸಮಿತಿ, ಕರಿಕೆ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಗಡಿ ಉತ್ಸವ ಎಳ್ಳುಕೊಚ್ಚಿ ಬೇಕಲ್ ಉಗ್ಗಪ್ಪ ಮೈದಾನದಲ್ಲಿ ಸಂಭ್ರಮದಿAದ ನಡೆಯಿತು. ಕಾಟೂರು ನಾರಾಯಣ ನಂಬಿಯಾರ್ ಸ್ಮಾರಕ ಶಾಲೆಯಿಂದ ಎಳ್ಳುಕೊಚ್ಚಿ ಸಭಾಂಗಣದವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಕರಿಕೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕರಿಕೆ, ಜ. ೨೭: ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ನೆನಪು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಸಾಹಿತ್ಯ ಪರಿಷತ್ತು, ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್, ಕರಿಕೆ ಗಡಿ ಸಾಂಸ್ಕೃತಿಕೋತ್ಸವ ಆಚರಣಾ ಸಮಿತಿ, ಕರಿಕೆ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಗಡಿ ಉತ್ಸವ ಎಳ್ಳುಕೊಚ್ಚಿ ಬೇಕಲ್ ಉಗ್ಗಪ್ಪ ಮೈದಾನದಲ್ಲಿ ಸಂಭ್ರಮದಿAದ ನಡೆಯಿತು. ಕಾಟೂರು ನಾರಾಯಣ ನಂಬಿಯಾರ್ ಸ್ಮಾರಕ ಶಾಲೆಯಿಂದ ಎಳ್ಳುಕೊಚ್ಚಿ ಸಭಾಂಗಣದವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಕರಿಕೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಎ.ಎಸ್. ಪೊನ್ನಣ್ಣ, ಭಾಗಮಂಡಲ- ಕರಿಕೆ ಮಾರ್ಗದ ರಸ್ತೆ ಅಭಿವೃದ್ಧಿಗೆ ರಾಜ್ಯ ರಸ್ತೆ ಅಭಿವೃದ್ಧಿ ಯೋಜನೆಯಡಿ ೧೨ ಕೋಟಿ ರೂ. ಅನುಮೋದನೆ ದೊರೆತಿದ್ದು, ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಭವನ, ಆಟದ ಮೈದಾನ ಸೇರಿದಂತೆ ಕರಿಕೆ ಗ್ರಾಮದ ವಿವಿಧ ಅಭಿವೃದ್ಧಿ ಯೋಜನೆಗಳ ಬೇಡಿಕೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಿಲ್ಲೆಯ ಗಡಿ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ.
ಕರಿಕೆ ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ರಾಜ್ಯ ಹೆದ್ದಾರಿ ಜೊತೆಗೆ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸ ಲಾಗುವುದು ಎಂದು ನುಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯು ನಡೆದಿದ್ದು, ನ್ಯಾಯಾಲಯದಲ್ಲಿ ಬಗೆಹರಿದ ನಂತರ ಖಾಯಂ ಶಿಕ್ಷಕರ ನೇಮಕಾತಿ ಮಾಡಲಾಗುವುದು. ಕರಿಕೆ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲಾಗುವುದು. ೨೫ ಕೋಟಿ ರೂ. ಅನುದಾನದಡಿಯಲ್ಲಿ ಶೇಕಡ ೫೦ ರಷ್ಟು ರಸ್ತೆ ಅಭಿವೃದ್ಧಿಗಾಗಿ ಕಾಯ್ದಿರಿಸಲಾಗಿದೆ ಎಂದು ಪೊನ್ನಣ್ಣ ತಿಳಿಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರು ಹಾಗೂ ಗಡಿ ಸಾಂಸ್ಕೃತಿಕ ಆಚರಣೆ ಸ್ವಾಗತ ಸಮಿತಿ ಮಹಾಪೋಷಕರಾದ ಟಿ.ಪಿ. ರಮೇಶ್ ಮಾತನಾಡಿ, ಕನ್ನಡ ಭಾಷಾ ಏಕೀಕರಣಕ್ಕೆ ಹಲವರು ಹೋರಾಟ ಮಾಡಿದ್ದಾರೆ.
ಗಡಿ ಭಾಗದಲ್ಲಿ ಇತರ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಪ್ರತಿಯೊಬ್ಬರೂ ಕನ್ನಡ ಭಾಷೆ ಮಾತನಾಡುವಂತಾಗಬೇಕು ಎಲ್ಲರೂ ಸಹಬಾಳ್ವೆ ಮತ್ತು ಭ್ರಾತೃತ್ವದಿಂದ ಬದುಕಬೇಕು, ಭಾಷಾ ಸೌಹಾರ್ದತೆ ಬೆಳೆಯಬೇಕು. ಗಡಿ ಪ್ರದೇಶದಲ್ಲಿ ಕನ್ನಡೇತರರರಿಗೆ ಕನ್ನಡ ಕಲಿಸುವಂತಾಗಬೇಕು.
ಕರಿಕೆ ಗ್ರಾಮದಲ್ಲಿ ಕನ್ನಡ ಸಾಂಸ್ಕೃತಿಕ ಭವನ ನಿರ್ಮಾಣ ಮಾಡುವಂತಾಗಬೇಕು ಎಂದು ಕೋರಿದರು. ಗಡಿ ಭಾಗದಲ್ಲಿ ಕನ್ನಡ ಭಾಷಾ ನಾಮಫಲಕಕ್ಕೆ ಹೆಚ್ಚಿನ ಒತ್ತು ನೀಡಬೇಕು ಮತ್ತು ಅಳವಡಿಸಬೇಕು. ಕನ್ನಡ ಭಾಷೆಯಲ್ಲಿ ಕನ್ನಡ ಪತ್ರ ವ್ಯವಹಾರ
(ಮೊದಲ ಪುಟದಿಂದ) ಹಾಗೂ ಆಡಳಿತದಲ್ಲಿ ಕನ್ನಡ ವಾತಾವರಣ ನಿರ್ಮಾಣ ವಾಗಬೇಕು. ಗಡಿಭಾಗದ ಜನರ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ವಿಶೇಷ ಅನುದಾನ ಒದಗಿಸಬೇಕು ಎಂದು ಕೋರಿದರು.
ಗಡಿ ಉತ್ಸವ ಪ್ರಧಾನ ಕಾರ್ಯದರ್ಶಿ ಬೇಕಲ್ ರಮಾನಾಥ್ ಮಾತನಾಡಿ, ಕರಿಕೆ ಭಾಗಮಂಡಲ ರಸ್ತೆ ಅಭಿವೃದ್ಧಿಯಾಗಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಬೇಕು. ಸಮುದಾಯ ಭವನ, ಆಟದ ಮೈದಾನ ಹಾಗೂ ಅತಿಥಿ ಗೃಹ ನಿರ್ಮಾಣವಾಗಬೇಕು ಎಂದು ಕೋರಿದರು. ಸ್ಥಳೀಯ ಬಡ ಜನರಿಗೆ ಹಕ್ಕು ಪತ್ರ ಮಂಜೂರಾತಿ ಮಾಡಬೇಕು. ಖಾಲಿ ಇರುವ ಶಿಕ್ಷಕರ ನೇಮಕಾತಿ ಭರ್ತಿ ಮಾಡಬೇಕು, ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭ ಗ್ರಾಮದ ಹಿರಿಯರಾದ ಕೋಡಿ ಪೊನ್ನಪ್ಪ ಮಾತನಾಡಿ ಸರ್ಕಾರಿ ಶಾಲೆ ಜಾಗವನ್ನು ಒತ್ತುವರಿ ಮಾಡಿದ್ದು, ತೆರವುಗೊಳಿಸಬೇಕು ಎಂದು ಮನವಿ ಮಾಡಿದರು. ಪಟ್ಟಿ ಮತ್ತು ತೊಡಿಕಾನ ರಸ್ತೆಯನ್ನು ಸರಿಪಡಿಸಿ ಕಂದಾಯ ಗ್ರಾಮವನ್ನಾಗಿ ಪ್ರಕಟಿಸಬೇಕು ಎಂದು ಕೋರಿದರು. ಇಲ್ಲಿನ ಜನರು ಕುಗ್ರಾಮದಲ್ಲಿ ವಾಸ ಮಾಡುತ್ತಿದ್ದು ರಸ್ತೆ ಅಭಿವೃದ್ಧಿಪಡಿಸಬೇಕು. ಸರ್ಕಾರಿ ಶಾಲೆಗೆ ಆರ್ಟಿಸಿ ಒದಗಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಸರ್ಕಾರಿ ಶಾಲೆ ಜಾಗ ಒತ್ತುವರಿ ಮಾಡಿದ್ದಲ್ಲಿ ನಿಯಮಾನುಸಾರ ತೆರವುಗೊಳಿಸಲಾಗುವುದು. ಕರಿಕೆ ಗ್ರಾಮದ ಅಭಿವೃದ್ಧಿಗೆ ಸಂಬAಧಿಸಿದAತೆ ಬೇಡಿಕೆಗಳನ್ನು ಈಡೇರಿಸಲಾಗುವುದು.
ಕನ್ನಡ ಭಾಷೆಯಲ್ಲಿ ನಾಮಫಲಕ ಅಳವಡಿಸಬೇಕು. ಆ ನಿಟ್ಟಿನಲ್ಲಿ ಸರ್ಕಾರದ ನಿಯಮ ಪಾಲಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಿಇಒ ವರ್ಣಿತ್ ನೇಗಿ ಮಾತನಾಡಿ, ಕರಿಕೆ ಗ್ರಾಮದ ಅಭಿವೃದ್ಧಿಗೆ ಸಂಬAಧಿಸಿದAತೆ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಕೈಗೊಂಡು ಅಭಿವೃದ್ಧಿ ಕೆಲಸ ಮಾಡಬಹುದಾಗಿದೆ ಎಂದು ತಿಳಿಸಿದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಕೆ.ಎನ್. ಮುಸ್ತಫ ಮಾತನಾಡಿ, ಗಡಿನಾಡು ಹಾಗೂ ಹೊರನಾಡು ಎಂದು ಬೇಲಿ ಹಾಕಿಕೊಳ್ಳಬಾರದು. ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡ ಬಾಂಧವ್ಯ ಬೆಳೆಯಲು ಗಡಿ ಉತ್ಸವ ಸಹಕಾರಿಯಾಗಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮುನಿರ್ ಅಹಮದ್, ರೇವತಿ ರಮೇಶ್, ಗೌರವ ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕೆÀ್ಷ ಕಡ್ಲೇರ ತುಳಸಿ ಮೋಹನ್, ಕಸಾಪ ಭಾಗಮಂಡಲ ಹೋಬಳಿ ಅಧ್ಯಕ್ಷ ಸುನಿಲ್ ಪತ್ರಾವೋ, ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೇಕಲ್ ದೇವರಾಜ್, ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್, ಸರ್ಕಾರಿ ವಕೀಲರಾದ ಶ್ರೀಧರ ನಾಯರ್ ಇತರರು ಇದ್ದರು.
ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕೋಡಿ ಕೆ. ಪೊನ್ನಪ್ಪ, ಬೇಕಲ್ ಲೀಲಾವತಿ ರಮಾನಾಥ್, ಎನ್.ಸಿ. ಗಂಗಾಧರ್, ಬೇಕಲ್ ದಮಯಂತಿ ಕೃಷ್ಣಪ್ಪ, ರಾಧ ಕೃಷ್ಣ ನಂಬಿಯಾರ್, ಕೆ.ಎ. ಬೋಜಮ್ಮ, ಕೇಶವ ಮಡೆಕಾನ, ಟಿ.ಟಿ. ರಾಜೇಂದ್ರ, ನಂದಿತಾ ಬಿ.ಡಿ., ನಿನ್ನುಮೋಳ್, ಜೋತ್ಸಾö್ನ, ತನಿಷ್ಕಾ ಮುರುಳಿ, ಮನೋಹರ್ ಜಿ.ಬಿ, ಅಶೋಕ, ಕೆ.ಎಸ್., ನಿಂಗಪ್ಪ ಹನುಮಣ್ಣನವರ್, ಚಂದ್ರಶೇಖರ ದಾಮ್ಲೆ, ಪ್ರವೀಣ್ ಕುಮಾರ್, ಸನತ್ ಕುಮಾರ್ ಬೊಳ್ಳೂರು, ಕಾರ್ಚಿ, ಜಾನಕಿ. ಕೆ.ಎ.ಎಂ.ಆರ್. ದೂಮನಾಯ್ಕ್, ರೋಯ್ ಜೋಸೆಫ್, ಜೋಷಿ ಜಾರ್ಜ್, ಇಮಾನ್ಯವಲ್ ಆನೆಪಾರೆ, ದೇವಂಗೋಡಿ ಸರಸ್ವತಿ, ಕೆ.ಜಾನಕಿ, ಲವೀನ್ ಇವರುಗಳನ್ನು ಸನ್ಮಾನಿಸಲಾಯಿತು.