ನಾಪೋಕ್ಲು: ಅಯೋಧ್ಯೆಯ ಶ್ರೀ ರಾಮ ಜನ್ಮಸ್ಥಾನದಲ್ಲಿ ಶ್ರೀ ರಾಮಲಲ್ಲಾನ ನೂತನ ವಿಗ್ರಹದ ಪ್ರಾಣಪ್ರತಿಷ್ಠಾಪನೆಗೊಂಡ ಹಿನ್ನೆಲೆಯಲ್ಲಿ ಸಮೀಪದ ದೊಡ್ಡಪುಲಿಕೋಟು ಕೋಟೆ ಭಗವತಿ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಭಾಗಮಂಡಲದ ರಾಜೇಶ ಪ್ರವಚನ ನೀಡಿದರು. ಸೋಮವಾರ ಸಂಜೆ ನಾಪೋಕ್ಲು-ಭಾಗಮಂಡಲ ರಸ್ತೆಯ ಸೇತುವೆಯಲ್ಲಿ ನೂರಾರು ದೀಪಗಳನ್ನು ಬೆಳಗಿಸಿ ಸಂಭ್ರಮಿಸ ಲಾಯಿತು. ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಪಾಲಿಬೆಟ್ಟ: ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಠೆಯ ಸಂದರ್ಭ ಪಾಲಿಬೆಟ್ಟ ಶ್ರೀ ಗಣಪತಿ ದೇವಸ್ಥಾನದಲ್ಲಿ ಬೆಳಿಗ್ಗೆ ೯.೩೦ ಗಂಟೆಗೆ ಗಣಪತಿ ಹೋಮವನ್ನು ನಡೆಸಿ ರಾಮನ ವಿಶೇಷ ಪ್ರಸಾದವಾದ ಪಾನಕ, ಕೋಸಂಬರಿ ಮತ್ತು ಪಂಚಕಜ್ಜಾಯ ಪ್ರಸಾದವನ್ನು ವಿತರಿಸಲಾಯಿತು. ಬೆಳಿಗ್ಗೆ ೧೦.೩೦ ಗಂಟೆಯಿAದ ೧೨ ಗಂಟೆಯವರೆಗೆ ರೋಶಿ ಚಿಣ್ಣಪ್ಪ ಅವರ ತಂಡದಿAದ ಭಜನಾ ಕಾರ್ಯಕ್ರಮ ನಡೆಯಿತು.

ಸುಮಾರು ೧೫೦೦ಕ್ಕೂ ಹೆಚ್ಚು ಭಕ್ತಾದಿಗಳು ೧೨.೨೯ ಗಂಟೆಗೆ ದೊಡ್ಡದಾದ ಪರದೆಯಲ್ಲಿ ಸಾಮೂ ಹಿಕವಾಗಿ ಪ್ರಾಣ ಪ್ರತಿಷ್ಠಾಪನೆಯನ್ನು ವೀಕ್ಷಿಸಿ ಕಣ್ತುಂಬಿಕೊAಡರು. ತದನಂತರ ಭಕ್ತಾದಿಗಳು ಅನ್ನದಾನದಲ್ಲಿ ಪಾಲ್ಗೊಂಡರು. ಒಂದು ವಾರದ ಹಿಂದೆಯೇ ಪಾಲಿಬೆಟ್ಟ ಪಟ್ಟಣ ಹಾಗೂ ಗಣಪತಿ ದೇವಸ್ಥಾನದ ಆವರಣವು ಕೇಸರಿಮಯವಾಗಿತ್ತು. ಬಂಟಿAಗ್ಸ್, ರಾಮನ ಚಿತ್ರವಿರುವ ಬಾವುಟಗಳು ಪಟ್ಟಣವಿಡೀ ರಾರಾಜಿಸುತ್ತಿತ್ತು. ರಾಮನ ದೊಡ್ಡ ದೊಡ್ಡ ಕಟೌಟ್‌ಗಳು ಪಾಲಿಬೆಟ್ಟ ತುಂಬಾ ನಿಲ್ಲಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ. ಎ.ಸಿ. ಗಣಪತಿ, ಪುಲಿಯಂಡ ಬೋಪಣ್ಣ, ಕೂತಂಡ ಬೋಜಮ್ಮ, ಭಾರತಿ ಉತ್ತಯ್ಯ, ಶೋಭಾ ಕುಟ್ಟಪ್ಪ, ಶಶಿಕಲಾ, ಬಿ.ಪಿ. ಗಣಪತಿ, ಕುಟ್ಟಂಡ ವಸಂತ್, ಮಾಳೇಟಿರ ಪವಿತ್ರ, ಕುಪ್ಪಂಡ ಚಿಣ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಜವಾಬ್ದಾರಿ ಯನ್ನು ಕುಟ್ಟಂಡ ಅಜಿತ್ ಕರುಂಬಯ್ಯ, ಪುತ್ತಂ ಪ್ರದೀಪ್, ಕೆ.ಟಿ. ಆನಂದ್, ಸುಮಾ ರವಿ, ಪ್ರಮೀಳಾ ಮತ್ತು ಚೇತನ್ ಆಚಾರ್ಯ ಅವರು ವಹಿಸಿದ್ದರು.ಮಡಿಕೇರಿ: ಮರಗೋಡು ಪಂಚಾಯಿತಿ ಹೊಸ್ಕೇರಿ ಗ್ರಾಮದ ಬೊಳ್ಳೂರು ಕುಟುಂಬಸ್ಥರಿAದ ಕರಸೇವಕ ಬಿ.ಬಿ. ಶ್ರೀನಿವಾಸ್ ಅವರನ್ನು ಸಂಕಲ್ಪ ಸ್ವ-ಸಹಾಯ ಸಂಘ, ಕುಟ್ಟಿಚಾತ ದೇವಾಲಯದ ಅರ್ಚಕವೃಂದದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಬೊಳ್ಳೂರು ಕುಟುಂಬದ ಮನೆಯಲ್ಲಿ ಕಾರ್ಯಕ್ರಮ ನಡೆಯಿತು.

ಬೈಚನಹಳ್ಳಿ ಅಂತರ್ಘಟ್ಟಮ್ಮ ದೇವಾಲಯಕುಶಾಲನಗರ: ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ, ಕುಶಾಲನಗರ ಶ್ರೀ ಗಣಪತಿ ದೇವಾಲಯದಲ್ಲಿ ಸಂಜೆ ವೇಳೆ ದೀಪಾರಾಧನೆ ಕಾರ್ಯಕ್ರಮ ನಡೆಯಿತು. ದೇವಾಲಯದ ಆಡಳಿತ ಮಂಡಳಿ ಪ್ರಮುಖರು ಮತ್ತು ಭಕ್ತಾದಿಗಳು ಈ ಸಂದರ್ಭ ಉಪಸ್ಥಿತರಿದ್ದರು.

ಕತ್ತಲೆಕಾಡಿನಲ್ಲಿ ದೀಪೋತ್ಸವಕುಶಾಲನಗರ: ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ, ಕುಶಾಲನಗರ ಶ್ರೀ ಗಣಪತಿ ದೇವಾಲಯದಲ್ಲಿ ಸಂಜೆ ವೇಳೆ ದೀಪಾರಾಧನೆ ಕಾರ್ಯಕ್ರಮ ನಡೆಯಿತು. ದೇವಾಲಯದ ಆಡಳಿತ ಮಂಡಳಿ ಪ್ರಮುಖರು ಮತ್ತು ಭಕ್ತಾದಿಗಳು ಈ ಸಂದರ್ಭ ಉಪಸ್ಥಿತರಿದ್ದರು.

ಕತ್ತಲೆಕಾಡಿನಲ್ಲಿ ದೀಪೋತ್ಸವ ವೀರಾಜಪೇಟೆ: ವೀರಾಜಪೇಟೆಯ ಗಣಪತಿ ದೇವಾಲಯ, ಶ್ರೀ ಬಾಲಾಂಜನೇಯ ದೇವಾಲಯ, ಶ್ರೀ ಮಹಾವಿಷ್ಣು ದೇವಾಲಯ, ಶ್ರೀ ಆಂಜನೇಯ ದೇವಾಲಯ, ಬೇಟೋಳಿ ಪುದುಪಾಡಿ ಅಯ್ಯಪ್ಪ ದೇವಸ್ಥಾನ, ಪೆರುಂಬಾಡಿ ಅಯ್ಯಪ್ಪ ದೇವಸ್ಥಾನ, ಕೆದಮುಳ್ಳೂರು ಮಹಾದೇವರ ದೇವಸ್ಥಾನ, ತೋರದ ತೋಮರತಪ್ಪ ದೇವಸ್ಥಾನ, ಭಗವತಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಸಾವಿರಾರು ದೀಪಗಳನ್ನು ಬೆಳಗಿ ದೀಪೋತ್ಸವ ಆಚರಿಸಲಾಯಿತು.

ಐತಿಹಾಸಿಕ ಹಿನ್ನೆಲೆ ಹೊಂದಿರುವ ವೀರಾಜಪೇಟೆಯ ಗೌರಿಕೆರೆಯ ಸುತ್ತಲೂ ಸಾವಿರಾರು ದೀಪಗಳನ್ನು ಬೆಳಗಿಸಲಾಯಿತು. ದೀಪ ಬೆಳಗಿರುವುದನ್ನು ನೂರಾರು ಸಂಖ್ಯೆಯಲ್ಲಿ ಭಕ್ತರು ವೀಕ್ಷಿಸಿ ಸಂಭ್ರಮಿಸಿದರು.

ಸುAಟಿಕೊಪ್ಪ ಚಾಮುಂಡೇಶ್ವರಿ ದೇವಾಲಯಕುಶಾಲನಗರ: ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಕುಶಾಲನಗರ ಬೈಚನಹಳ್ಳಿ ಗ್ರಾಮದ ಶ್ರೀ ಆದಿಶಕ್ತಿ ಅಂತರ್ಘಟ್ಟಮ್ಮ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ಬೆಳಗಿನಿಂದ ದೇವಾಲಯದಲ್ಲಿ ಕಾರ್ಯಕ್ರಮ ಅಭಿಷೇಕ ನಂತರ ಮಹಾಮಂಗಳಾರತಿ ಪ್ರಸಾದ ವಿತರಣೆ ಮಾಡಲಾಯಿತು. ಅಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮದ ನೇರ ಆನ್‌ಲೈನ್ ಪ್ರಸಾರವನ್ನು ಭಕ್ತಾದಿಗಳಿಗೆ ನೋಡುವ ಅವಕಾಶವನ್ನು ದೇವಾಲಯದಲ್ಲಿ ಕಲ್ಪಿಸಿಕೊಡಲಾಗಿತ್ತು.

ಸಂಜೆ ದೇವಾಲಯದಲ್ಲಿ ದೀಪಾರಾಧನೆ ಕಾರ್ಯಕ್ರಮ ಜರುಗಿತು.

ಇದೇ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಪರವಾಗಿ ಕಾವೇರಿ ಮಹಾ ಆರತಿ ಬಳಗದ ಪ್ರಮುಖರಾದ ಚಂದ್ರಮೋಹನ್ ದಂಪತಿಯನ್ನು ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ವಿ. ಗಿರೀಶ್, ಉಪಾಧ್ಯಕ್ಷ ಗಣೇಶ್ ಬಿ.ಎಸ್., ಕಾರ್ಯದರ್ಶಿ ಬಿ.ಎಂ. ಜಗದೀಶ್, ಖಜಾಂಚಿ ಬಿ.ಡಿ. ಜಗದೀಶ್, ಸಂಚಾಲಕ ಬಿ.ಎಸ್. ಗೋಪಿ, ಪ್ರಮುಖರಾದ ಬಿ.ಎಸ್. ರವಿಕುಮಾರ್, ಬಿ.ಎಸ್. ಪರಮೇಶ್ ಮತ್ತಿತರರು ಇದ್ದರು.

ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದೀಪೋತ್ಸವ ಮಡಿಕೇರಿ: ರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ಕತ್ತಲೆಕಾಡು, ಜೇನುಕೊಲ್ಲಿ ವಿನಾಯಕ ಸೇವಾ ಸಮಿತಿ ವತಿಯಿಂದ ದೀಪೋತ್ಸವ ಹಾಗೂ ಭಜನಾ ಕಾರ್ಯಕ್ರಮ ಜರುಗಿತು.

ಸಮಿತಿ ಆವರಣದಲ್ಲಿ ಸೋಮವಾರ ಸಂಜೆ ನಡೆದ ಗ್ರಾಮದ ಸಾರ್ವಜನಿಕರು ಹಣತೆಗಳನ್ನು ಬೆಳಗಿದರು. ಬಳಿಕ ಸುಭಾಷ್ ಮತ್ತು ಸ್ಥಳೀಯ ಮಕ್ಕಳು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಕತ್ತಲೆಕಾಡು, ಜೇನುಕೊಲ್ಲಿ, ಕ್ಲೋಸ್‌ಬರ್ನ್ ಭಾಗದ ಸಾರ್ವಜನಿಕರು ಪಾಲ್ಗೊಂಡಿದ್ದರು.

ಸಮಿತಿ ಅಧ್ಯಕ್ಷ ಎಂ.ಎಸ್. ಅಶೋಕ್, ಕಾರ್ಯದರ್ಶಿ ಬ್ರಿಜೇಶ್ ರೈ, ಖಜಾಂಚಿ ಸತೀಶ್ ರೈ, ಮಾಜಿ ಅಧ್ಯಕ್ಷ ಹೊನ್ನಪ್ಪ ಆಚಾರ್ಯ, ಮಹಿಳಾ ಘಟಕದ ಪ್ರತಿಭಾ, ರಮಣಿ ಶೇಷಪ್ಪ, ವಿದ್ಯಾರ್ಥಿ ಘಟಕದ ಸದಸ್ಯರು, ಸಾರ್ವಜನಿಕರು ಈ ಸಂದರ್ಭ ಇದ್ದರು.

ಹನುಮ ಸೇನಾ ಸಮಿತಿಕಣಿವೆ: ಕುಶಾಲನಗರ ಸಮೀಪದ ಗುಮ್ಮನಕೊಲ್ಲಿ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಅಯೋಧ್ಯೆಯ ಶ್ರೀ ರಾಮನ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ವಿಶೇಷ ಪೂಜೆ, ಹೋಮ ಹವನಗಳು ಜರುಗಿದವು.

ಈ ಸಂದರ್ಭ ದೇವಾಲಯ ಅಭಿವೃದ್ಧಿ ಸಮಿತಿಯ ಕೆ.ಪಿ. ಚಂದ್ರಕಲಾ, ಲೋಕೇಶ್, ಗಣೇಶ್ ಮತ್ತಿತರರಿದ್ದರು.ಕಣಿವೆ: ಕುಶಾಲನಗರ ಸಮೀಪದ ಗುಮ್ಮನಕೊಲ್ಲಿ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಅಯೋಧ್ಯೆಯ ಶ್ರೀ ರಾಮನ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ವಿಶೇಷ ಪೂಜೆ, ಹೋಮ ಹವನಗಳು ಜರುಗಿದವು.

ಈ ಸಂದರ್ಭ ದೇವಾಲಯ ಅಭಿವೃದ್ಧಿ ಸಮಿತಿಯ ಕೆ.ಪಿ. ಚಂದ್ರಕಲಾ, ಲೋಕೇಶ್, ಗಣೇಶ್ ಮತ್ತಿತರರಿದ್ದರು.ವೀರಾಜಪೇಟೆ: ಸಮೀಪದ ಬೇಟೋಳಿ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮೊದಲಿಗೆ ಶ್ರೀ ಗಣಪತಿ ಹೋಮವನ್ನು ನೆರವೇರಿಸಲಾಯಿತು. ತದನಂತರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ನಡೆಯಿತು.

ವೀಣಾ ಶಶಿಧರ್ ಮತ್ತು ತಂಡದವರಿAದ ಭಜನೆ ಹಾಗೂ ಶ್ರೀ ರಾಮರಕ್ಷಾ ಸ್ತೋತ್ರ ಪಠಣ ನಡೆಯಿತು. ಶ್ರೀ ವಿನಾಯಕ ಭಜನಾ ಮಂಡಳಿ ಭಜನಾ ಕಾರ್ಯದಲ್ಲಿ ಪಾಲ್ಗೊಂಡಿತ್ತು. ರುದ್ರಂ ಮಹಿಳಾ ಚಂಡೆ ಬಳಗದಿಂದ ಚಂಡೆ ಸೇವೆ ನಡೆಯಿತು.

ಬಳಿಕ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣಾ ಕಾರ್ಯಗಳು ನಡೆದವು. ಈ ಸಂದರ್ಭದಲ್ಲಿ ಭಕ್ತಾದಿಗಳು ಹಾಗೂ ಸಮೀಪದ ಸರ್ಕಾರಿ ಪ್ರಾಥಮಿಕ ಶಾಲೆ ಹೆಗ್ಗಳದ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು. ಮತ್ತು ದೇವಸ್ಥಾನದ ಆವರಣದಲ್ಲಿ ಬೃಹತ್ ಎಲ್.ಈ.ಡಿ ಪರದೆ ಅಳವಡಿಕೆಯ ಮೂಲಕ ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ನಡೆಯುತ್ತಿರುವ ಪ್ರಾಣ ಪ್ರತಿಷ್ಠಾಪನೆಯನ್ನು ಭಕ್ತಾದಿಗಳಿಗೆ ಪ್ರದರ್ಶಿಸಲಾಯಿತು.ಕುಶಾಲನಗರ: ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಅಂಗವಾಗಿ ಕುಶಾಲನಗರ ಕಾವೇರಿ ಮಹಾ ಆರತಿ ಬಳಗದ ವತಿಯಿಂದ ಗಡಿಭಾಗದ ಕಾವೇರಿ ನದಿ ಸೇತುವೆ ಮೇಲೆ ದೀಪಾರಾಧನೆ ಕಾರ್ಯಕ್ರಮ ಆಯೋಜಿಸಲಾಯಿತು. ಕುಶಾಲನಗರ-ಕೊಪ್ಪ ಕಾವೇರಿ ನದಿ ಸೇತುವೆ ಉದ್ದಕ್ಕೂ ಸಂಜೆ ವೇಳೆ ದೀಪಗಳ ಆರಾಧನೆ ಕಾರ್ಯಕ್ರಮ ನಡೆಯಿತು.

ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ಕೊಡಗು ಜಿಲ್ಲಾ ದೇವಾಲಯಗಳ ಸಮಿತಿ ಸಂಚಾಲಕ ಬಳಪಂಡ ಪೊನ್ನು ಮತ್ತು ಬಳಗದ ಸದಸ್ಯರು ಇದ್ದರು.