ಮಡಿಕೇರಿ, ಜ. ೨೬: ಕಣ್ಣಿಗೆ ಆನಂದ ನೀಡುವ ಬಗೆಬಗೆಯ ಹೂಗಳು, ಪುಷ್ಪರಾಶಿಯಲ್ಲಿ ಅರಳಿದ ಮನಮೋಹಕ ಕಲಾಕೃತಿಗಳು, ಅವುಗಳನ್ನು ಕಣ್ತುಂಬಿಕೊAಡ ಜನತೆ..
ಹೌದು..ಈ ದೃಶ್ಯಾವಳಿಗಳು ಕಂಡುಬAದಿದ್ದು ಮಡಿಕೇರಿಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ರಾಜಾಸೀಟ್ನಲ್ಲಿ ತನ್ನ ಸುಂದರ ವಾತಾವರಣಕ್ಕೆ ಪ್ರಖ್ಯಾತಿ ಗಳಿಸಿರುವ ಈ ಸ್ಥಳದಲ್ಲಿ ಇಂದು ಪುಷ್ಪಲೋಕ ಅನಾವರಣ ಗೊಂಡಿತ್ತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ೩ ದಿನಗಳ ಕಾಲದ ಫಲಪುಷ್ಪ ಪ್ರದರ್ಶನದಲ್ಲಿ ಬಗೆಬಗೆಯ ಹೂಗಳು ಆನಂದ ನೀಡಿದರೆ, ಹೂವಿನಿಂದ ರಚನೆಯಾಗಿದ್ದ ಕಲಾಕೃತಿಗಳು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದವು.
ಪಾಡಿ ಇಗ್ಗುತ್ತಪ್ಪ ಸನ್ನಿಧಿ ವಿಶೇಷ
ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಪಾಡಿ ಇಗ್ಗುತ್ತಪ್ಪ ಸನ್ನಿಧಿಯನ್ನು ಸೃಷ್ಟಿಸಲಾಗಿದೆ. ಕಕ್ಕಬ್ಬೆಯಲ್ಲಿರುವ ಈ ಪೌರಾಣಿಕ ದೇವಾಲಯದ ಮರುಸೃಷ್ಟಿ ಜನರನ್ನು ತನ್ನತ್ತ ಸೆಳೆಯುತ್ತಿದೆ. ಕೆಂಪು ಗುಲಾಬಿ, ಸೇವಂತಿಗೆ, ಆಸ್ಟರ್ ಸೇರಿದಂತೆ ಇನ್ನಿತರ ಜಾತಿ ಹೂ ಸೇರಿ ಒಟ್ಟು ೫ ಲಕ್ಷ ಹೂಗಳನ್ನು ಬಳಸಿಕೊಂಡು ೧೫ ಅಡಿ ಎತ್ತರ, ೪೮ ಅಡಿ ಉದ್ದ, ೨೮ ಅಡಿ ಅಗಲದಲ್ಲಿ ದೇವಾಲಯವನ್ನು ಹೂಗಳಿಂದ ನಿರ್ಮಿಸಲಾಗಿದೆ. ದೇವಾಲಯ ಒಳಭಾಗದಲ್ಲಿ ಶಿವನ ಕಲಾಕೃತಿಯನ್ನು ಹೂವಿನಿಂದಲೇ ಮಾಡಲಾಗಿದೆ.
ಇದರೊಂದಿಗೆ ಗಣರಾಜ್ಯೋತ್ಸವ ಅಂಗವಾಗಿ ಹೂಗಳಲ್ಲಿ ಫಿರಂಗಿ, ತ್ರಿವರ್ಣ ಧ್ವಜ, ಕಾಳುಗಳಲ್ಲಿ ಯೋಧ ಸೇರಿದಂತೆ ಚಿಟ್ಟೆ, ಅಣಬೆ, ಬಲೂನ್, ಕಾರ್ಟೂನ್ ಪಾತ್ರಗಳಾದ ಚೋಟಭೀಮ್, ಸ್ಪೆöÊಡರ್ ಮ್ಯಾನ್, ಬಾರ್ಬಿ ಡಾಲ್, ಬ್ಯಾಟ್ ಮೆನ್ ಕಲಾಕೃತಿಗಳು ಆಕರ್ಷಕವಾಗಿ ಮೂಡಿ ಬಂದಿವೆೆ. ಹೂಗಳಿಂದ ತಯಾರದ ಫೋಟೋ ಗ್ಯಾಲರಿಯಲ್ಲಿ ಜನರು ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಅನುಭವಿಸುತ್ತಿದ್ದಾರೆ.
ಕೆತ್ತನೆಗಳಲ್ಲಿ ಮೂಡಿದ ಮಹಾನ್ ವ್ಯಕ್ತಿಗಳು
ಹೂಗಳಿಂದ ಮೂಡಿದ ಕಲಾಕೃತಿಯೊಂದಿಗೆ ಕಲ್ಲಂಗಡಿ ಹಾಗೂ ತರಕಾರಿಗಳಿಂದ ಕೆತ್ತನೆಯೂ ಆಕರ್ಷಕವಾಗಿತ್ತು. ದೇಶದ ಮಹಾನ್ ವ್ಯಕ್ತಿಗಳನ್ನು ಹಣ್ಣು, ತರಕಾರಿಯಲ್ಲಿ ಕೆತ್ತನೆ ಮಾಡಲಾಗಿತ್ತು.
ಗಾಂಧಿ, ಸುಭಾಷ್ ಚಂದ್ರ ಬೋಸ್, ಸ್ವಾಮಿ ವಿವೇಕಾನಂದ, ಸರ್ದಾರ್ ವಲ್ಲಭಬಾಯ್ ಪಾಟೇಲ್, ಜನರಲ್ ತಿಮ್ಮಯ್ಯ, ಕುವೆಂಪು, ಎ.ಪಿ.ಜೆ. ಅಬ್ದುಲ್ ಕಲಾಂ, ಡಾ. ರಾಜ್ಕುಮಾರ್, ವಿಷ್ಣುವಧÀðನ್.. ಹೀಗೆ ಅನೇಕರ ಕೆತ್ತನೆ ಕಲ್ಲಂಗಡಿ ಹಣ್ಣಿನಿಂದ ಮೂಡಿತ್ತು.
(ಮೊದಲ ಪುಟದಿಂದ) ಜೊತೆಗೆ ತರಕಾರಿಯಿಂದ ನವಿಲು ರಚನೆ ಮಾಡಲಾಗಿತ್ತು.
ಫಲಪುಷ್ಪ ಪ್ರದರ್ಶನ ಹಾಗೂ ಗಾಂಧಿ ಮೈದಾನದಲ್ಲಿ ವಿವಿಧ ಇಲಾಖೆಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನು ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಉದ್ಘಾಟಿಸಿದರು. ಈ ಸಂದರ್ಭ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ, ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿ ವೀಣಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಉಪ ವಿಭಾಗಧಿಕಾರಿ ವಿನಾಯಕ ನರ್ವಾಡೆ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಯೋಗೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು. ಫ್ಲವರ್ ಶೋ ನೋಡಿ ಖುಷಿಯಾಗಿದೆ. ನಮ್ಮೂರಿನ ಪಾಡಿ ಇಗ್ಗುತ್ತಪ್ಪ ಸನ್ನಿಧಿ ನಿರ್ಮಾಣ ಮಾಡಿರುವುದು ಹೆಮ್ಮೆ ತಂದಿದೆ. ಕಳೆದ ಕೆಲವು ವರ್ಷದಿಂದ ಈ ಸಂದರ್ಭ ರಾಜಾಸೀಟ್ಗೆ ಬರುತ್ತೇನೆ. ಹೂವುಗಳಿಂದ ಮಾಡಿದ ಕಲಾಕೃತಿ ಹಾಗೂ ವಿಶೇಷ ಹೂಗಳ ಪ್ರದರ್ಶನ ಹೊಸ ಅನುಭವ ನೀಡುತ್ತದೆ.
- ಸವಿತಾ, ಕಕ್ಕಬ್ಬೆ
ಫಲಪುಷ್ಪ ಪ್ರದರ್ಶನ ಚೆನ್ನಾಗಿದೆ. ಕಲಾಕೃತಿಗಳು ಸುಂದರವಾಗಿ ನಿರ್ಮಾಣ ಮಾಡಲಾಗಿದೆ. ಹೂವಿನಿಂದ ಮಾಡಿದ ದೇವಾಲಯವಂತೂ ಚೆಂದವಾಗಿದೆ. ಇನ್ನಷ್ಟೂ ಕಲಾಕೃತಿಗಳು ಇದಿದೆÉ ಮತ್ತಷ್ಟು ಸುಂದರವಾಗಿರುತಿತ್ತು.
- ಚೈತ್ರಾಶ್ರೀ, ಕುಶಾಲನಗರ