*ಗೋಣಿಕೊಪ್ಪ, ಜ. ೨೭: ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆಯ ಲಾಂಛನವನ್ನು ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅನಾವರಣಗೊಳಿಸಿದರು.
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲೆಯ ಕಲಾ ಶಿಕ್ಷಕ ಬಿ.ಆರ್. ಸತೀಶ್ ರಚಿಸಿದ ಲಾಂಛನವನ್ನು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ ಬಾಲು, ಉಪಾಧ್ಯಕ್ಷೆ ಸವಿತ, ಸದಸ್ಯರುಗಳಾದ ಬಿ.ಎನ್. ಪ್ರಕಾಶ್, ಪ್ರಮೋದ್ ಗಣಪತಿ, ಮಂಜುಳ, ಇವರುಗಳ ಉಪಸ್ಥಿತಿಯಲ್ಲಿ ಶಾಸಕರು ಬಿಡುಗಡೆಗೊಳಿಸಿದರು.
ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಶಾಲೆಗೆ ಬೇಕಾದ ಅನುಕೂಲಗಳನ್ನು ಕಲ್ಪಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್ ಮಾತನಾಡಿ, ಶಾಲೆ ಶತಮಾನೋತ್ಸವವನ್ನು ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದು, ಇದಕ್ಕೆ ಸಾಕಷ್ಟು ಅನುದಾನದ ಅವಶ್ಯಕತೆ ಇದೆ. ಸರ್ಕಾರ ಒಂದಷ್ಟು ಅನುದಾನವನ್ನು ಒದಗಿಸಿಕೊಟ್ಟರೆ ಆಚರಣೆಗೆ ಅನುಕೂಲವಾಗಲಿದೆ. ಶಾಲೆಗಳಲ್ಲಿ ಗ್ರೀನ್ ಬೋರ್ಡ್ಗಳನ್ನು ಅಳವಡಿಸಲಾಗುತ್ತಿದೆ. ಕಂಪ್ಯೂಟರ್ ಕೊಠಡಿ, ಲ್ಯಾಬ್ಗಳ ಅವಶ್ಯಕತೆ ಇದೆ. ವಿಜ್ಞಾನ ಪ್ರದರ್ಶನ ಒಂದು ಕೊಠಡಿಯ ಅವಶ್ಯಕತೆ ಇದೆ. ಶತಮಾನೋತ್ಸವ ಆಚರಣೆಯ ಸಂದರ್ಭ ಎಲ್ಲಾ ವ್ಯವಸ್ಥೆಗಳನ್ನು ಒದಗಿಸಲು ಸಹಕರಿಸುವಂತೆ ಶಾಸಕರಿಗೆ ಮನವಿ ಮಾಡಿದರು.
ಗೋಣಿಕೊಪ್ಪ ರೋಟರಿ ಸಂಸ್ಥೆಯಿAದ ಎರಡು ಗ್ರೀನ್ ಬೋರ್ಡ್ಗಳನ್ನು ವಿತರಿಸಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸುರೇಂದ್ರ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ಜಿ. ಮೋಹನ್, ರೋಟರಿ ಸಂಸ್ಥೆಯ ಪಾರುವಂಗಡ ದಿಲನ್ ಚಂಗಪ್ಪ, ತೀತಮಾಡ ಮೋಹನ್, ಕಾಡ್ಯಮಾಡ ನೆವೀನ್ ಸೇರಿದಂತೆ ಶಾಲೆಯ ಶಿಕ್ಷಕರುಗಳು ವಿದ್ಯಾರ್ಥಿಗಳು ಪೋಷಕರು, ಎಸ್ಡಿಎಂಸಿ ಸದಸ್ಯರುಗಳು ಇದ್ದರು.