ಮಡಿಕೇರಿ, ಜ. ೨೭: ಸಮಾಜದಲ್ಲಿ ಮಹಿಳೆಯರು ಸಂಕಷ್ಟಕ್ಕೀಡಾಗುವ ಸಂದರ್ಭದಲ್ಲಿ ತಮ್ಮ ರಕ್ಷಣೆಯನ್ನು ಜಾಣ್ಮೆಯೊಂದಿಗೆ ತಾವೇ ಮಾಡಿಕೊಳ್ಳಬೇಕೆಂದು ಸಾಹಿತಿ, ಸೊಮವಾರಪೇಟೆ ತಾಲೂಕು ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಕುದುಕುಳಿ ಮಿಲನಾ ಭರತ್ ಹೇಳಿದರು.
ಮಡಿಕೇರಿಯ ವಿಜಯನಗರ, ಕಾವೇರಿ ಬಡಾವಣೆ, ಟಿ.ಜಾನ್ ಬಡಾವಣೆ, ಕನ್ನಿಕಾ ಬಡಾವಣೆ, ಡೈರಿ ಫಾರಂ, ಪ್ರಕೃತಿ ಬಡಾವಣೆ, ರಾಣಿಪೇಟೆಯನ್ನೊಳಗೊಂಡ ಶ್ರಿ ವಿಜಯ ವಿನಾಯಕ ಗೌಡ ಒಕ್ಕೂಟದ ೯ನೇ ವರ್ಷದ ಸಂತೋಷಕೂಟ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ತೊಂದರೆಗಳು ಎದುರಾಗುವ ಸಂದರ್ಭ ಜಾಣ್ಮೆಯನ್ನು ಪ್ರದರ್ಶಿಸುವದರ ಮೂಲಕ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕೆಂದು ಉದಾಹರಣೆಯೊಂದಿಗೆ ಹೇಳಿದರು. ಅರೆಭಾಷೆ ಗೌಡ ಜನಾಂಗದವರು ಎಲ್ಲಿಂದ ಬಂದವರೆAಬ ಪ್ರಶ್ನೆ ಕೇಳಿಬರುತ್ತಿದೆ. ಇತಿಹಾಸವನ್ನು ಅವಲೋಕಿಸಿದಾಗ ಇದಕ್ಕೆ ಉತ್ತರ ದೊರಕುತ್ತದೆ. ಅನಾದಿ ಕಾಲದಿಂದಲೂ ಗೌಡರ ಇರುವಿಕೆ ಬಗ್ಗೆ ದಾಖಲೆಗಳಿವೆ. ಹಾಗಾಗಿ ನಮ್ಮ ಭಾಷೆ, ಸಂಸ್ಕೃತಿ, ಪದ್ಧತಿಯನ್ನು ಅಳಿಯಗೊಡದೆ ಉಳಿಸಿ, ಬೆಳೆಸುವ ಕಾರ್ಯವಾಗಬೇಕಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಪರಸ್ಪರ ನಮ್ಮ ಭಾಷೆಯಲ್ಲಿಯೇ ಮಾತನಾಡುವಂತಾಗಬೇಕು, ಯಾವದೇ ಕಾರಣಕ್ಕೂ ಸ್ವಾರ್ಥಕ್ಕೆ ಬಳಸಿಕೊಳ್ಳಬಾರದು. ಇಂತಹ ಕಾರ್ಯಕ್ರಮಗಳು ಆಗಾಗ್ಗೆ ನಡೆಯುವದರೊಂದಿಗೆ ಜನಾಂಗದ ಒಗ್ಗಟ್ಟಿಗೆ ಬುನಾದಿಯಾಗಬೇಕಿದೆ ಎಂದು ಹೇಳಿದರು. ಸಾಂಪ್ರದಾಯಿಕ ಉಡುಗೆ, ಹಾಗೂ ಅರೆಭಾಷೆಯೊಂದಿಗೆ ಕಾರ್ಯಕ್ರಮ ಆಯೋಜಿಸಲ್ಪಟ್ಟಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೂಟದ ಅಧ್ಯಕ್ಷ ಕುರಿಕಡ ಆನಂದ ಮಾತನಾಡಿ; ಅರೆಭಾಷೆ ಜನಾಂಗದವರು ಸಾಧ್ಯವಾದಷ್ಟು ಮಟ್ಟಿಗೆ ಅರೆಭಾಷೆಯಲ್ಲಿಯೇ ಮಾತನಾಡಬೇಕು, ಕಾರ್ಯಕ್ರಮ ಮಾಡುವಾಗ ಎಲ್ಲರೂ ಕೈಜೋಡಿಸುವದರೊಂದಿಗೆ ಭಾಗಿಯಾಗಬೇಕು. ಸಂಘಟನೆ ಮಾಡಲು ಮುಂದೆ ಬರಬೇಕು, ಮಕ್ಕಳಲ್ಲಿ ಮೊಬೈಲ್ ಗೀಳನ್ನು ಕಡಿಮೆ ಮಾಡಿಸಿ ನಮ್ಮ ಸಂಸ್ಕೃತಿಯ ಅರಿವು ಮೂಡಿಸಬೇಕೆಂದು ಹೇಳಿದರು.
ಸನ್ಮಾನ
ಇದೇ ಸಂದರ್ಭದಲ್ಲಿ ಸಾಹಿತಿ ಮಿಲನಾ ಭರತ್, ರಾಷ್ಟç ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದ ಕುಡೆಕಲ್ ನಿಹಾಲ್ ಸಂತೋಷ್, ರಾಷ್ಟಿçÃಯ ಫುಟ್ಬಾಲ್ ಕ್ರೀಡೆಯಲ್ಲಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿರುವ ಕೋಡಿ ವಿದಿತ ನಾಗರಜ್, ಬಿಎಸ್ಸಿ ಪದವಿಯಲ್ಲಿ ಚಿನ್ನದ ಪದಕ ಗಳಿಸಿದ ಮಂದ್ರಿರ ಮೋನಿಷಾ ಜಯಪ್ರಕಾಶ್ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಆಟೋಟಗಳು
ಸಂತೋಷ ಕೂಟದ ಅಂಗವಾಗಿ ಕೂಟದ ಸದಸ್ಯರು ಹಾಗೂ ಮಕ್ಕಳಿಗೆ ಆಟೋಟ ಸ್ಪರ್ಧೆ ಹಾಗೂ ಮನರಂಜನಾ ಕ್ರೀಡೆ ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ವೇದಿಕೆಯಲ್ಲಿ ಕೂಟದ ಉಪಾಧ್ಯಕ್ಷ ಪರ್ಲಕೋಟಿ ಬಾಲಕೃಷ್ಣ, ನಿರ್ದೇಶಕರುಗಳಾದ ಕಲ್ಲೆಂಬಿ ವೆಂಕಪ್ಪ, ಮತ್ತಾರಿ ರಮೇಶ್, ಕೋಳಿಬೈಲು ಹರಿಣಾಕ್ಷಿ ಸುಬ್ರಮಣಿ, ಕರ್ಣಯ್ಯನ ಗುಲಾಬಿ ಪೂಣಚ್ಚ ಇದ್ದರು. ಮಂದ್ರಿರ ಸುಗಿತ ಪ್ರಾರ್ಥಿಸಿದರೆ, ನಿರ್ದೇಶಕ ಕುಡೆಕಲ್ ಸಂತೋಷ್ ಸ್ವಾಗತಿಸಿದರು. ಬಾಕಿಲನ ನಿರ್ಮಲ ಹಾಗೂ ಬಾರಿಕೆ ರತ್ನಶೀಲ ಹಾಗೂ ಕೋಡಿ ಸೌಮ್ಯ ನಾಗರಾಜ್ ನಿರೂಪಿಸಿದರೆ, ನಿರ್ದೇಶಕ ಕೋಡಿ ಗುರುರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಹಾಗೂ ಖಜಾಂಚಿ ಕಾನೆಹಿತ್ಲು ಮೊಣ್ಣಪ್ಪ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಬಳಿಕ ಕೂಟದ ಸದಸ್ಯರು ಹಾಗೂ ಮಕ್ಕಳಿಂದ ಮೂಡಿಬಂದ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಜಿಸಿದವು.