ಸಿದ್ದಾಪುರ, ಜ. ೨೭: ಹಳೇ ವೈಷಮ್ಯ ಹಾಗೂ ಕ್ಷÄಲ್ಲಕ ಕಾರಣಕ್ಕೆ ಆಟೋ ಚಾಲಕರ ನಡುವೆ ಕಲಹ ನಡೆದು ಓರ್ವನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಆರೋಪದಡಿಯಲ್ಲಿ ನಾಲ್ವರನ್ನು ಸಿದ್ದಾಪುರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಪಾಲಿಬೆಟ್ಟ ಪಟ್ಟಣದಲ್ಲಿ ತಾ.೨೬ ರಂದು ರಾತ್ರಿ ಕ್ಷÄಲ್ಲಕ ವಿಚಾರಕ್ಕೆ ಆಟೋ ಚಾಲಕರ ನಡುವೆ ಮಾತಿನ ಚಕಮಕಿ ನಡೆದು ಕಲಹ ನಡೆದಿದೆ ಎನ್ನಲಾಗಿದೆ.
(ಮೊದಲ ಪುಟದಿಂದ) ಈ ಸಂದರ್ಭ ಆಟೋ ಚಾಲಕ ವಿನೋದ್ (ವಿನು) ಎಂಬಾತನಿಗೆ ಪಾಲಿಬೆಟ್ಟದಲ್ಲಿ ಆಟೋ ಚಾಲಕರಾಗಿರುವ ಹುಂಡಿಯ ಬಾಡಗ ಬಾಣಂಗಾಲ ಗ್ರಾಮದ ನಿವಾಸಿ ಸಂದೇಶ್ ಹೆಚ್.ಎಸ್. (೨೭), ಪಾಲಿಬೆಟ್ಟದ ಎಮ್ಮೆಗುಂಡಿ ಎಸ್ಟೇಟ್ನ ನಿವಾಸಿಯಾಗಿರುವ ಆಟೋ ಚಾಲಕ ಮಂಜು (೩೨), ಪಾಲಿಬೆಟ್ಟದ ಎಮ್ಮೆಗುಂಡಿ ಎಸ್ಟೇಟ್ನ ನಿವಾಸಿ ಆಟೋ ಚಾಲಕ ಧರ್ಮರಾಜ್ (೪೦), ಮೇಕೂರು ಹೊಸ್ಕೇರಿ ಗ್ರಾಮದ ನಿವಾಸಿಯಾಗಿರುವ ಪಾಲಿಬೆಟ್ಟ ಆಟೋಚಾಲಕ ದರ್ಶನ್ (೨೧) ಎಂಬ ನಾಲ್ವರು ಸೇರಿ ಮರದ ದೊಣ್ಣೆ ಹಾಗೂ ಹಾಕಿ ಸ್ಟಿಕ್ನಿಂದ ಹಲ್ಲೆ ನಡೆಸಿದ ಪರಿಣಾಮ ವಿನೋದ್ನ ಎಡಭಾಗದ ಕಣ್ಣಿಗೆ ಗಂಭೀರ ಗಾಯವಾಗಿ ಗಾಯಾಳುವಿಗೆ ಪಾಲಿಬೆಟ್ಟ ಹಾಗೂ ಮಡಿಕೇರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧಿತರನ್ನು ೧೫ ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕೃತ್ಯಕ್ಕೆ ಬಳಸಿದ ಏಂ-೧೨ ಃ-೯೯೩೫ ಮತ್ತು ಏಂ-೧೨ ಅ-೧೪೩೬ ಈ ಎರಡು ಆಟೋರಿಕ್ಷಾಗಳನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.