ಮಡಿಕೇರಿ/ ಗೋಣಿಕೊಪ್ಪ ವರದಿ, ಜ. ೨೬: ಅಂತರರಾಷ್ಟಿçÃಯ ಟೆನ್ನಿಸ್ ಡಬಲ್ಸ್ ವಿಭಾಗದಲ್ಲಿ ವಿಶ್ವ ನಂಬರ್-೧ ಸ್ಥಾನವನ್ನು ಇತ್ತೀಚೆಗಷ್ಟೆ ಗಿಟ್ಟಿಸಿಕೊಂಡ ಕೊಡಗಿನ ಮಾದಾಪುರ ಗರಗಂದೂರು ಗ್ರಾಮದ ಮಚ್ಚಂಡ ರೋಹನ್ ಬೋಪಣ್ಣ ಹಾಗೂ ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ರಾಷ್ಟಿçÃಯ ಪ್ರತಿಷ್ಠಿತ ಖೇಲೋ ಇಂಡಿಯಾ ಯೂತ್ ಗೇಮ್ಸ್ನಲ್ಲಿ ಕ್ರೀಡಾ ಜ್ಯೋತಿ ಬೆಳಗಿಸಿದ್ದ ಕಾಮನ್ವೆಲ್ತ್ ಚಿನ್ನ ಪದಕ ವಿಜೇತೆ ಅಂತರರಾಷ್ಟಿçÃಯ ಸ್ಕಾ÷್ವಶ್ ಆಟಗಾರ್ತಿ ಕುಟ್ಟಂಡ ಜೋಶ್ನಾ ಚಿನ್ನಪ್ಪ ಅವರುಗಳು ರಾಷ್ಟçದ ೪ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ಪದ್ಮಶ್ರೀಗೆ ಪುರಸ್ಕೃತರಾಗಿದ್ದಾರೆ.
ರಾಷ್ಟçಪತಿ ದ್ರೌಪದಿ ಮುರ್ಮು ಅವರು ಈ ಸಾಲಿನ ಪದ್ಮ ಪ್ರಶಸ್ತಿಗಳನ್ನು ನಿನ್ನೆ ಪ್ರಕಟಿಸಿದ್ದು, ೫ ಮಂದಿಗೆ ಪದ್ಮವಿಭೂಷಣ, ೧೭ ಮಂದಿಗೆ ಪದ್ಮ ಭೂಷಣ ಹಾಗೂ ೧೧೦ ಮಂದಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಿದ್ದಾರೆ. ಈ ಪೈಕಿ ೭ ಮಂದಿ ದೇಶದ ಕ್ರೀಡಾಪಟುಗಳು ಪದ್ಮಶ್ರೀ ಪಡೆದಿದ್ದು, ಇದರಲ್ಲಿ ಇಬ್ಬರು ಕೊಡಗು ಜಿಲ್ಲೆಯವರಾಗಿರುವುದು ವಿಶೇಷವಾಗಿದೆ.
ಮಾದಾಪುರ ಬಳಿಯ ಗರಗಂದೂರು ಗ್ರಾಮದವರಾದ ಮಚ್ಚಂಡ ಜಿ. ಬೋಪಣ್ಣ - ಮಲ್ಲಿಕಾ ದಂಪತಿಯ ಪುತ್ರನಾಗಿರುವ ಮಚ್ಚಂಡ ರೋಹನ್ ಬೋಪಣ್ಣ, ಅಂತರರಾಷ್ಟಿçÃಯ ಪುರುಷರ ಡಬಲ್ಸ್
(ಮೊದಲ ಪುಟದಿಂದ) ವಿಭಾಗದಲ್ಲಿ ಇತ್ತೀಚೆಗೆ ಅತ್ಯುನ್ನತ ಪ್ರದರ್ಶನ ನೀಡುವ ಮೂಲಕ ವಿಶ್ವ ಕ್ರಮಾಂಕ ಒಂದಕ್ಕೆ ಏರಿದ್ದರು. ನಿನ್ನೆ ಆಸ್ಟೆçÃಲಿಯಾದ ಮೆಲ್ಬೋರ್ನ್ನಲ್ಲಿ ಜರುಗಿದ ವಿಶ್ವವಿಖ್ಯಾತ ಗ್ರಾಂಡ್ ಸ್ಲಾಮ್ ಆಸ್ಟೆçÃಲಿಯನ್ ಓಪನ್ ಸೆಮಿಯಲ್ಲಿ ಜಯಿಸಿ ತಾವು ಹಾಗೂ ತಮ್ಮ ಜೊತೆ-ಆಟಗಾರ ಮ್ಯಾಥಿವ್ ಎಬ್ಡನ್ ಫೈನಲ್ ಪ್ರವೇಶಿಸಿದರು. ತಾ.೨೭ ರಂದು (ಇಂದು) ಫೈನಲ್ ಜರುಗಲಿದೆ. ಮಿಕ್ಸ್ಡ್ ಡಬಲ್ಸ್ನಲ್ಲಿ ೨೦೧೭ ರಲ್ಲಿ ಗ್ರಾಂಡ್ ಸ್ಲಾಮ್ ಬಿರುದನ್ನು ಪಡೆದಿದ್ದ ರೋಹನ್, ಇಂದಿನ ಫೈನಲ್ನಲ್ಲಿ ಜಯಸಿದರೆ ಪುರುಷರ ಡಬಲ್ಸ್ನಲ್ಲಿ ಮೊದಲ ಗ್ರಾಂಡ್ ಸ್ಲಾಮ್ ಬಿರುದನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.
ರೋಹನ್ಗೆ ಪದ್ಮಶ್ರೀ ದೊರಕಿರುವ ಬಗ್ಗೆ ಪ್ರತಿಕ್ರಿಯಿಸಿದ ರೋಹನ್ ಅವರ ತಂದೆ ಮಚ್ಚಂಡ ಜಿ.ಬೋಪಣ್ಣ, ರೋಹನ್ ಟೆನ್ನಿಸ್ ರಂಗದಲ್ಲಿ ಸಾಧನೆಯ ವಿವಿಧ ಹಂತಗಳ ಮೂಲಕ ಶ್ರೇಷ್ಠ ಆಟಗಾರನಾಗಿ ವಿಶ್ವಮಟ್ಟದಲ್ಲಿ ಹೊರಹೊಮ್ಮಿದ್ದಾನೆ. ಇದಕ್ಕಾಗಿ ರೋಹನ್ ಪಟ್ಟಿರುವ ಶ್ರಮ ಊಹೆಗೂ ನಿಲುಕದ್ದಾಗಿದೆ. ಪದ್ಮಶ್ರೀ ಗೌರವದಂಥ ಶ್ರೇಷ್ಠ ಫಲ ಕುಟುಂಬಕ್ಕೆ ದೊರಕಿದೆ. ಇದಕ್ಕಾಗಿ ಕೇಂದ್ರ ಸರಕಾರಕ್ಕೆ ಧನ್ಯವಾದ ಸಲ್ಲಿಸುತ್ತಿದ್ದೇನೆ ಎಂದರು.
ಮಾದಾಪುರದ ಶ್ರೀಮತಿ ಡಿ.ಚೆನ್ನಮ್ಮ ಕಾಲೇಜಿನ ಪಕ್ಕದಲ್ಲಿರುವ ಟೆನ್ನಿಸ್ ಕ್ರೀಡಾಂಗಣದಲ್ಲಿ ಪ್ರಾಥಮಿಕವಾಗಿ ಟೆನ್ನಿಸ್ ಆಟವಾಡಿದ್ದ ರೋಹನ್, ಬಾಲ್ಯದಲ್ಲಿ ಫುಟ್ಬಾಲ್ , ಹಾಕಿ ಆಟದತ್ತ ಆಕರ್ಷಿತರಾಗಿದ್ದರು. ಆದರೆ ಮನೆ ಬಳಿಯೇ ಇದ್ದ ಟೆನ್ನಿಸ್ ಕೋರ್ಟ್ ರೋಹನ್ನನ್ನು ಟೆನ್ನಿಸ್ ಆಟದತ್ತ ಸೆಳೆಯಿತು. ಪ್ರಾರಂಭಿಕ ಹಂತದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿ ಆರ್ಥಿಕವಾಗಿಯೂ ಸಂಕಷ್ಟ ಎದುರಿಸಿದ್ದ ರೋಹನ್ ಬೋಪಣ್ಣ, ಈಗ ತಮ್ಮ ೪೩ ನೇ ವಯಸ್ಸಿನಲ್ಲಿ ಜಗತ್ತೇ ಮೆಚ್ಚುವಂಥ ಸಾಧನೆಗೈದಿದ್ದಾರೆ.
೨೦೧೦ ರಲ್ಲಿ ಚಾಂಪಿಯನ್ ಆಫ್ ಪೀಸ್, ೨೦೦೫ ರಲ್ಲಿ ಕರ್ನಾಟಕ ಕ್ರೀಡಾ ಇಲಾಖೆಯ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಯೂ ರೋಹನ್ಗೆ ಲಭಿಸಿತ್ತು. ಇದೀಗ ಭಾರತದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ರೋಹನ್ಗೆ ಲಭಿಸಿದೆ.
ಮೂಲತಃ ಪಾಲಿಬೆಟ್ಟದವರಾದ ಕುಟ್ಟಂಡ ಅಂಜನ್ ಚಿಣ್ಣಪ್ಪ-ಸುನಿತಾ(ತಾಮನೆ ಪೆಮ್ಮಂಡ) ದಂಪತಿಯ ಪುತ್ರಿಯಾಗಿರುವ ಕುಟ್ಟಂಡ ಜೋಶ್ನಾ ಚಿಣ್ಣಪ್ಪ ಅವರು ಅಂತರರಾಷ್ಟಿçÃಯ ಸ್ಕಾ÷್ವಶ್ ಕ್ರೀಡೆಯಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ವರ್ಲ್ಡ್ ಡಬಲ್ಸ್ ಚಾಂಪಿಯನ್ಶಿಪ್, ಸೌತ್ ಏಷಿಯನ್ ಗೇಮ್ಸ್, ಏಷಿಯನ್ ಇಂಡಿವಿಶುವಲ್ ಚಾಂಪಿಯನ್ಶಿಪ್ಗಳಲ್ಲಿ ಹಾಗೂ ಪ್ರಖ್ಯಾತ ಕಾಮನ್ವೆಲ್ತ್ ಕ್ರೀಡೆಯಲ್ಲಿಯೂ ೨೦೧೬ರಲ್ಲಿ ಚಿನ್ನದ ಪದಕದ ಸಾಧನೆಗೈದಿದ್ದಾರೆ. ತಮಿಳುನಾಡಿನಲ್ಲಿ ನೆಲೆಸಿರುವ ಇವರು, ಇತ್ತೀಚೆಗೆ ಚೆನ್ನೆöÊನಲ್ಲಿ ನಡೆದ ರಾಷ್ಟಿçÃಯಮಟ್ಟದ ಖೇಲೋ ಇಂಡಿಯಾ ಯೂತ್ ಗೇಮ್ಸ್ನ ಕ್ರೀಡಾ ಜ್ಯೋತಿ ಬೆಳಗಿಸಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
ಇಂದು ಗೋಣಿಕೊಪ್ಪ ಲಯನ್ಸ್ ಶಾಲೆಯಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಧಕರಿಗೆ ಬಹುಮಾನ ವಿತರಿಸಿ, ಮಾಧ್ಯಮದೊಂದಿಗೆ ಅಭಿಪ್ರಾಯ ಹಂಚಿಕೊAಡ ಜೋಶ್ನಾ ಅವರು, ನನ್ನ ಪೋಷಕರ ಪ್ರೋತ್ಸಾಹದಿಂದ ಸ್ಕಾ÷್ವಶ್ ಆಟ ಆರಂಭಿಸಿದ್ದು, ಚಿಕ್ಕ ವಯಸ್ಸಿನಲ್ಲಿ ದೊರೆತ ಬೆಂಬಲ ಈ ಮಟ್ಟದ ಸಾಧನೆ ಮಾಡಲು ಸಹಕಾರಿಯಾಯಿತು. ಕಿರಿಯ ವಯಸ್ಸಿನಲ್ಲಿ ಹೆಚ್ಚು ಪ್ರಶಸ್ತಿಗಳನ್ನು ಗೆಲ್ಲುವ ಕನಸ್ಸು ಕಂಡಿದ್ದೆ. ದೇಶಕ್ಕಾಗಿ ಆಡುವುದೇ ಗೌರವ. ಇದರೊಂದಿಗೆ ಪದ್ಮಶ್ರೀ ಗೌರವ ಪಡೆಯುವುದು ಹೆಮ್ಮೆಯ ವಿಚಾರ. ಪ್ರಶಸ್ತಿಯನ್ನು ವಿನಮ್ರದಿಂದ ಸ್ವಾಗತಿಸಿಕೊಳ್ಳುತ್ತಿದ್ದೇನೆ. ನನ್ನೊಂದಿಗೆ ರೋಹನ್ ಬೋಪಣ್ಣ ಕೂಡ ಗೌರವಕ್ಕೆ ಪಾತ್ರರಾಗಿರುವುದು ಸಂತೋಷ. ಪಾಲಕರು, ಸರ್ಕಾರ, ನನ್ನ ತರಬೇತುದಾರರು, ನನ್ನ ತಂಡ, ಇಲ್ಲಿಯವರೆಗೂ ಬೆಂಬಲ ನೀಡಿದ ಸಂಸ್ಥೆಗಳಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಜೋಶ್ನಾ ಚಿಣ್ಣಪ್ಪ ಅವರ ತಂದೆ ಅಂಜನ್ ಚಿಣ್ಣಪ್ಪ ಮಾತನಾಡಿ, ಕ್ರೀಡೆ ಆರಂಭಿಸುವ ಮುನ್ನ ಪದವಿ ಶಿಕ್ಷಣ ಮುಖ್ಯ ಎಂಬುವುದನ್ನು ತಿಳಿಸಿದ್ದೆ. ಕ್ರೀಡೆಯಲ್ಲಿ ಮುಂದುವರಿಯುವಾಗ ಶ್ರದ್ಧೆ ಮುಖ್ಯ. ಇದರಿಂದಾಗಿ ಕ್ರೀಡೆಗೆ ಒತ್ತು ನೀಡಲು ಸಲಹೆ ನೀಡಿದ್ದೆ. ಯಾವುದೇ ಹುದ್ದೆ ದೊರೆತರೂ ಶಿಕ್ಷಣ ಮುಖ್ಯ ಎಂಬುವುದನ್ನು ಮನದಟ್ಟು ಮಾಡಿದ್ದ ಕಾರಣ, ಶಿಕ್ಷಣ ಕೂಡ ದೊರಕಿದೆ. ಇದು ಸಂಭ್ರಮದ ಕ್ಷಣ ಎಂದರು.
ತಮ್ಮ ೧೪ನೆ ವಯಸ್ಸಿನಲ್ಲಿಯೇ ರಾಷ್ಟಿçÃಯ ಸ್ವಾ÷್ಕಶ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಖ್ಯಾತಿಗೆ ಒಳಪಟ್ಟ ಜೋಶ್ನಾ ಅವರು, ೧೭ನೆ ವಯಸ್ಸಿನಲ್ಲಿ ಪ್ರತಿಷ್ಠಿತ ಬ್ರಿಟಿಶ್ ಜೂನಿಯರ್ ಓಪನ್ ನಲ್ಲಿ ಚಾಂಪಿಯನ್ ಆಗುವ ಮೂಲಕ ಗಣನೀಯ ಸಾಧನೆಗೈದರು. ತಮ್ಮ ೨೦ ವರ್ಷಕ್ಕೂ ಹೆಚ್ಚಿನ ಅವಧಿಯ ಕ್ರೀಡಾ ವೃತ್ತಿಯಲ್ಲಿನ ಸಾಧನೆಗೆ ಇದೀಗ ಇವರಿಗೆ ಪದ್ಮಶ್ರೀ ಒದಗಿದೆ.