ಸೋಮವಾರಪೇಟೆ, ಜ. ೨೫: ದೇಶದ ಹಾಕಿ ಕ್ಷೇತ್ರಕ್ಕೆ ಕೊಡಗು ಜಿಲ್ಲೆ ಅನೇಕ ಕ್ರೀಡಾಪಟುಗಳನ್ನು ನೀಡಿದ್ದು, ಇದೀಗ ಜಿಲ್ಲೆಯ ಹಾಕಿ ಯುವ ಕ್ರೀಡಾಪಟು ವಚನ್, ಜೂನಿಯರ್ ಇಂಡಿಯಾ ಹಾಕಿ ಕ್ಯಾಂಪ್ಗೆ ಆಯ್ಕೆಯಾಗುವ ಮೂಲಕ ಹಾಕಿ ಕ್ಷೇತ್ರದಲ್ಲಿ ಭರವಸೆ ಮೂಡಿಸಿದ್ದಾರೆ.
ಸೋಮವಾರಪೇಟೆಯ ಕ್ಲಬ್ರಸ್ತೆ ನಿವಾಸಿ ಹೆಚ್.ಎನ್. ಅಶೋಕ್ ಹಾಗೂ ಹೆಚ್.ಎ. ಸುಜಿನಿ ದಂಪತಿಯ ಪುತ್ರ, ಹೆಚ್.ಎ. ವಚನ್, ಜೂನಿಯರ್ ಇಂಡಿಯಾ ಹಾಕಿ ಕ್ಯಾಂಪಸ್ ಕೋರ್ ಗ್ರೂಪ್ಗೆ ಆಯ್ಕೆಯಾಗಿರುವ ಕ್ರೀಡಾಪಟು.
ಪಟ್ಟಣದ ಓಎಲ್ವಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ವಚನ್, ಪೊನ್ನಂಪೇಟೆಯ ಕ್ರೀಡಾ ವಸತಿ ಶಾಲೆಯಲ್ಲಿದ್ದುಕೊಂಡು ಸೆಂಟ್ ಅಂತೋಣಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪೂರೈಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಡಿವೈಇಎಸ್ ಕ್ರೀಡಾ ಹಾಸ್ಟೆಲ್ನಲ್ಲಿದ್ದು ಜೈನ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
೨೦೧೯-೨೦, ೨೦೨೧-೨೦೨೩ರವರೆಗೆ ಹಾಕಿ ಇಂಡಿಯಾದಿAದ ಆಯೋಜನೆಗೊಂಡಿದ್ದ ಜೂನಿಯರ್ ರಾಷ್ಟಿçÃಯ ಪಂದ್ಯಾವಳಿಯಲ್ಲಿ ಭಾಗಿಯಾಗಿರುವ ವಚನ್, ರಾಜ್ಯಮಟ್ಟದ ಅನೇಕ ಪಂದ್ಯಾವಳಿಯಲ್ಲಿ ಆಡಿದ್ದಾರೆ.
ಇದೀಗ ಜೂನಿಯರ್ ಇಂಡಿಯಾ ಹಾಕಿ ಕ್ಯಾಂಪ್ಗೆ ಆಯ್ಕೆಯಾಗುವ ಮೂಲಕ ಭವಿಷ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶದ ನಿರೀಕ್ಷೆ ಮೂಡಿಸಿದ್ದಾರೆ. ದಕ್ಷಿಣ ಭಾರತದಿಂದ ಈ ಬಾರಿ ಈರ್ವರು ಮಾತ್ರ ಕ್ಯಾಂಪ್ಗೆ ಆಯ್ಕೆಯಾಗಿದ್ದಾರೆ. ವಚನ್ ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ಆಟಗಾರರಾಗಿದ್ದಾರೆ. ತಮಿಳುನಾಡಿನಿಂದ ಆಯ್ಕೆಯಾಗಿರುವ ವೈ.ಇ. ಆನಂದ್ ಮತ್ತೋರ್ವ ಆಟಗಾರ.
ಸೋಮವಾರಪೇಟೆಯ ಹಿರಿಯ ಹಾಕಿ ಆಟಗಾರ, ಡಾಲ್ಫೀನ್ಸ್ ಸ್ಫೋರ್ಟ್ಸ್ ಕ್ಲಬ್ನ ಸ್ಥಾಪಕಾಧ್ಯಕ್ಷರೂ ಆಗಿರುವ ಹೆಚ್.ಎನ್. ಅಶೋಕ್ ಅವರ ಪುತ್ರನಾಗಿರುವ ವಚನ್, ಜೂನಿಯರ್ ಹಾಕಿ ಇಂಡಿಯಾ ಕ್ಯಾಂಪ್ನ ೪೦ ಸದಸ್ಯರ ಪಟ್ಟಿಯಲ್ಲಿ ಸ್ಥಾನ ಗಳಿಸುವ ಮೂಲಕ ಭರವಸೆ ಮೂಡಿಸಿದ್ದಾರೆ.