ವೀರಾಜಪೇಟೆ: ಧಾರ್ಮಿಕ, ಐತಿಹಾಸಿಕವಾಗಿ ಮಹತ್ವ ಪಡೆದಿರುವ ಅಯೋಧ್ಯೆ ರಾಮಮಂದಿರ ಉದ್ಘಾಟನೆಯನ್ನು ಸಾಕ್ಷೀಕರಿಸಲು ಗಡಿನಾಡಾದ ವೀರಾಜಪೇಟೆ ಜನತೆ ಕಾರಣೀಭೂತರಾದರು.
ಬೆಳಿಗ್ಗೆಯಿಂದಲೇ ನಗರದ ವಿವಿಧ ದೇವಾಲಯಗಳಲ್ಲಿ ರಾಮಜಪ, ಪೂಜೆ, ಜಪತಪ ನಡೆಯಿತು. ಹಿಂದೂಪರ ಸಂಘಟನೆಗಳು, ವಿವಿಧ ಸಂಘ-ಸAಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ದೇಗುಲಗಳಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಏರ್ಪಡಿಸಲಾಗಿತ್ತು.
ನಗರದ ಪ್ರಮುಖ ವೃತ್ತಗಳು, ಮುಖ್ಯ ರಸ್ತೆಗಳಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆಯನ್ನು ಸ್ವಾಗತಿಸುವ ಫ್ಲೆಕ್ಸ್ಗಳು ರಾರಾಜಿ ಸುವುದರ ಮೂಲಕ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.
ವೀರಾಜಪೇಟೆಯ ಪ್ರಮುಖ ದೇವಾಲಯವಾದ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನೆರೆದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಸಾವಿರಾರು ಭಕ್ತರು ಬೆಳಿಗ್ಗೆ ಯಿಂದಲೇ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ದೇವರ ದರ್ಶನ ಪಡೆದುಕೊಂಡರು. ರಾಮ ಪ್ರತಿಷ್ಠಾಪನೆ ಪ್ರಯುಕ್ತ ದೇವಾಲಯವನ್ನು ಹೂವುಗಳಿಂದ, ತಳಿರು ತೋರಣಗಳಿಂದ ಅಲಂಕರಿಸ ಲಾಗಿತ್ತು. ಗಣಪತಿ ದೇವಾಲಯ ದಲ್ಲಿ÷ಹಿಂದೂಪರ ಸಂಘಟನೆಗಳಿAದ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ಮಾಡಲಾಯಿತು.
ನಗರದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಶ್ರೀ ಬಾಲಾಂಜನೆಯ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಪುನಸ್ಕಾರ, ನಡೆದು ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ರಾತ್ರಿ ವಿಶೇಷ ಪೂಜೆ ನಡೆದ ಬಳಿಕ ಅನ್ನಸಂತರ್ಪಣೆ ಮಾಡಲಾಯಿತು.
ಆಂಜನೇಯ ದೇವಾಲಯ ಚಿಕ್ಕಪೇಟೆ, ಕಾವೇರಿ ಗಣೇಶೋತ್ಸವ ಸಮಿತಿ ಮೂರ್ನಾಡು ರಸ್ತೆ, ಅಂಗಾಳ ಪರಮೇಶ್ವರಿ ದೇವಾಲಯ, ದಕ್ಷಿಣ ಮಾರಿಯಮ್ಮ ದೇವಾಲಯ ತೆಲುಗರ ಬೀದಿ, ವಿಷ್ಣುಮೂರ್ತಿ ದುರ್ಗಿ ದೇವಾಲಯ, ಗೌರಿಕೆರೆ, ಮುತ್ತಪ್ಪ ದೇವಾಲಯ, ಕೆದಮುಳ್ಳೂರು ಮಹಾದೇವರ ದೇವಾಲಯ, ಭಗವತಿ ದೇವಸ್ಥಾನ, ಕೊಟ್ಟೋಳಿ ಧಾರಾ ಮಹೇಶ್ವರ, ದೇವಾಲಯ, ಪೆರುಂಬಾಡಿಯ ಅಯ್ಯಪ್ಪ ದೇವಸ್ಥಾನ, ಬೇಟೋಳಿ ಪುದುಪಾಡಿ ಅಯ್ಯಪ್ಪ ದೇವಸ್ಥಾನ, ಅಮ್ಮತ್ತಿ ಪುಲಿಯೇರಿ ದೇವಸ್ಥಾನ, ಅಮ್ಮತ್ತಿ ನಗರ ಸೇರಿದಂತೆ ತಾಲೂಕಿನಾದ್ಯಂತ ವಿವಿಧೆಡೆ ವಿಶೇಷ ಪೂಜೆ ನಡೆದು ಬಳಿಕ ಪ್ರಸಾದ ವಿತರಣೆ ಮಾಡಲಾಯಿತು.
ನಗರದ ಕಾರು ನಿಲ್ದಾಣದಲ್ಲಿ ಹಿಂದೂಪರ ಸಂಘಟನೆಗಳ ವತಿಯಿಂದ ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ವನ್ನು ಎಲ್ಇಡಿ ಪರದೆ ಮೂಲಕ ನೇರ ವೀಕ್ಷಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿತ್ತು.
ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯುವ ಸಂದರ್ಭದಲ್ಲಿ ಶ್ರೀ ಕಾವೇರಿ ಆಶ್ರಮ ಪ್ರಕಾಶ್ ಕುಠೀರದ ಮಹಾವಿಷ್ಣು ದೇವಾಲಯ ದಲ್ಲಿ ಶ್ರೀ ರಾಮನಾಮ ತಾರಕ ಯಜ್ಞ ನೆರವೇರಿತು. ಪ್ರಸಿದ್ಧ ಗಣಪತಿ ದೇವಾಲಯದ ಪ್ರಧಾನ ಅರ್ಚಕ ಪ್ರಮೋದ್ ಭಟ್ ನೇತೃತ್ವದಲ್ಲಿ ಸುಮಾರು ೮ ಮಂದಿ ಅರ್ಚಕ ವೃಂದದವರು ಸೇರಿ ಯಜ್ಞ ಕಾರ್ಯ ನೆರವೇರಿಸಿದರು. ಇದೇ ಸಂದರ್ಭ ಬೇಟೋಳಿ ಪುದುಪಾಡಿ ಅಯ್ಯಪ್ಪ ದೇವಸ್ಥಾನದಲ್ಲಿ ನೂತನವಾಗಿ ಆರಂಭವಾದ ಮಹಿಳಾ ಚಂಡೆಮೇಳ ರುದ್ರಂ ತಂಡ ಚಂಡೆವಾದ್ಯ ನಡೆಸಿಕೊಟ್ಟರು.
ಸ್ವರಾರ್ಣವ ಸಂಗೀತ ಶಾಲೆಯ ವಿದ್ವಾನ್ ದಿಲಿಕುಮಾರ್ ಹಾಗೂ ಮಹಿಳಾ ಭಜನಾ ತಂಡದವರು ದೇವರ ನಾಮ ಸ್ತುತಿಸಿದರು. ಯಜ್ಞ ಹಾಗೂ ವಿಶೇಷ ಮಹಾಪೂಜೆ ನಡೆದ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಕಾರ್ಯ ನಡೆಯಿತು.ಮುಳ್ಳೂರು: ಅಯೋಧ್ಯೆಯ ಶ್ರೀ ಬಾಲರಾಮ ಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಶನಿವಾರಸಂತೆ ಸೇರಿದಂತೆ ವಿವಿಧ ಕಡೆಗಳ ದೇವಸ್ಥಾನ ಗುಡಿ ದೇಗುಲಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಹೋಮ ಹವನ ಮುಂತಾದ ಪೂಜಾ ವಿಧಿವಿಧಾನವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಎಲ್ಲೆಡೆಯಲ್ಲಿ ಶ್ರೀರಾಮನ ಸ್ತುತಿ ಮೊಳಗಿತ್ತು. ಪ್ರತಿಯೊಂದು ದೇವಸ್ಥಾನ ಸಮಿತಿ ವತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಶನಿವಾರಸಂತೆ ಪಟ್ಟಣದಲ್ಲಿರುವ ಶ್ರೀ ಗಣಪತಿ, ಶ್ರೀ ರಾಮ ಮಂದಿರ, ಬನ್ನಿಮಂಟಪದಲ್ಲಿ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶನಿವಾರ ಸಂತೆ ವಿವಿಧ ಹಿಂದೂಪರ ಸಂಘಟನೆ ವತಿಯಿಂದ ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀ ವಿಜಯ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ ಹವನ ಮುಂತಾದ ಪೂಜಾ ವಿಧಾನವನ್ನು ನೆರವೇರಿಸಲಾಯಿತು.
ಅಯೋಧ್ಯೆಯಲ್ಲಿ ಶ್ರೀ ಬಾಲರಾಮ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ರೀ ಬಾಲರಾಮನ ಪ್ರಾಣಪ್ರತಿಷ್ಠಾಪನೆಯ ಪೂಜೆ ನೆರವೇರಿಸುತ್ತಿದ್ದ ದೃಶ್ಯವನ್ನು ಎಲ್ಇಡಿ ಮೂಲಕ ಭಕ್ತಾದಿಗಳಿಗೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಶ್ರೀ ಬಾಲರಾಮನ ಪ್ರತಿಷ್ಠಾಪನೆ ಕಾರ್ಯ ನೆರವೇರಿಸುತ್ತಿದ್ದ ಸಂದರ್ಭದಲ್ಲಿ ಭಕ್ತಾದಿಗಳು ಎದ್ದುನಿಂತು ಕೈಮುಗಿದು ಶ್ರದ್ಧಾಭಕ್ತಿಯಿಂದ ಜೈ ಶ್ರೀರಾಮ್ ಎಂದು ಜೋರಾಗಿ ಘೋಷಣೆ ಮೊಳಗಿಸಿದರು. ದೇವಸ್ಥಾನದ ಮುಂಭಾಗದಲ್ಲಿ ಮಹಿಳೆಯರಿಂದ ಶ್ರೀ ರಾಮನ ಭಜನೆ ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಭಕ್ತಾದಿಗಳಿಗೆ ಪಾನಕ ವಿತರಣೆ ಮಾಡಲಾಯಿತು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿಸ ಲಾಯಿತು. ಈ ಸಂದರ್ಭ ವಿವಿಧ ಹಿಂದೂಪರ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು, ದೇವಸ್ಥಾನ ಸಮಿತಿ ಪ್ರಮುಖರು, ಸದಸ್ಯರು ಪ್ರಮುಖರು ಪಾಲ್ಗೊಂಡಿದ್ದರು.
ಮುಳ್ಳೂರು ಸಮೀಪದ ಕಾರ್ಗೋಡು ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ ಹವನ ಪೂಜಾ ಕೈಂಕರ್ಯ ವನ್ನು ನೆರವೇರಿಸಲಾಯಿತು.
ಗ್ರಾಮ ಮತ್ತು ಅಕ್ಕಪಕ್ಕದ ಗ್ರಾಮಗಳಿಂದ ನೂರಾರು ಭಕ್ತರು ಪಾಲ್ಗೊಂಡಿದ್ದರು. ದೇವಸ್ಥಾನ ಸಮಿತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಇದೇ ಸಮಯದಲ್ಲಿ ಮಾಲಂಬಿ ಗ್ರಾಮದ ಶ್ರೀ ಕನ್ನಂಬಾಡಿ ಅಮ್ಮನವರ ದೇವಸ್ಥಾನ, ಆಲೂರು-ಸಿದ್ದಾಪುರದ ಶ್ರೀ ಬಸವೇಶ್ವರ ದೇವಸ್ಥಾನ ಮತ್ತು ಬಂಡಿಯಮ್ಮನ ದೇವಸ್ಥಾನ, ಕಂತೆಬಸವನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ, ಹಿತ್ಲುಗದ್ದೆ ಗ್ರಾಮದ ಶ್ರೀ ಮೃತ್ಯುಂಜಯ ದೇವಸ್ಥಾನ, ದೊಡ್ಡಳ್ಳಿಯ ಶ್ರೀ ಗಣಪತಿ ದೇವಸ್ಥಾನ, ಹೊಸಗುತ್ತಿಯ ಶ್ರೀ ಬಸವೇಶ್ವರ ದೇವಸ್ಥಾನ, ಬಡಬನ ಹಳ್ಳಿಯ ಶ್ರೀಮಾರಿಯಮ್ಮ ದೇವಸ್ಥಾನ ಇನ್ನು ಮುಂತಾದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಎಲ್ಲಾ ದೇವಸ್ಥಾನಗಳಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಅನ್ನದಾನ ಮಾಡಲಾಯಿತು.
ಶ್ರೀ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಸಮೀಪದ ನೀರಗುಂದ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಶ್ರೀರಾಮನ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಬಾಲಕಿ ಎನ್.ಎ. ರಶ್ಮಿಕ ಶ್ರೀ ಬಾಲರಾಮನ ವೇಷ ಭೂಷಣತೊಟ್ಟು ಪೂಜೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಸುಂಟಿಕೊಪ್ಪ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಲೋಕಾರ್ಪಣೆಯೊಂದಿಗೆ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ಹಿನ್ನೆಲೆ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ದೇವಾಲಯಗಳಲ್ಲಿ ವಿಶೇಷ ಪೂಜೆ ಸಹಿತ ಅನ್ನಸಂತರ್ಪಣೆಯೊAದಿಗೆ ಸಹಸ್ರಾರು ಭಕ್ತರು ಪಾಲ್ಗೊಂಡು ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಿದರು.
ಹೆಚ್ಚಿನ ದೇವಾಲಯಗಳಲ್ಲಿ ಬೃಹತ್ ಪರದೆ ಅಳವಡಿಸುವ ಮೂಲಕ ಭಕ್ತಾದಿಗಳು ಪೂಜೆಯೊಂದಿಗೆ ಅಯೋಧ್ಯೆಯ ನೇರ ಕಾರ್ಯಕ್ರಮವನ್ನು ಕಣ್ತುಂಬಿಕೊAಡರು.
ಸುAಟಿಕೊಪ್ಪದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ವಿಶೇಷ ಪೂಜೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಪ್ರಾರಂಭವಾಗಿ ರಾಮತಾರಕ ಹೋಮವನ್ನು ನಡೆಸಲಾಯಿತು. ಪೂಜಾ ಕೈಂಕರ್ಯಗಳನ್ನು ಪ್ರಧಾನ ಅರ್ಚಕ ದರ್ಶನ್ ಭಟ್, ಮನೋಜ್ ಭಟ್, ವೆಂಕಟರಮಣ ಭಟ್ ನೇರವೇರಿಸಿದರು. ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ದೇವಾಲಯದ ಬೆಳವಣಿಗೆಗೆ ಸಹಕಾರ ನೀಡುತ್ತಿರುವ ಡಿ. ಆನಂದ ಬಸಪ್ಪ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಕೊಡಗರಹಳ್ಳಿಯ ಶ್ರೀ ಬೈತೂರಪ್ಪ ಪೊವ್ವೆದಿ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಭಜನೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಶ್ರೀ ಬೈತೂರಪ್ಪ ಭಜನಾ ಮಂಡಳಿಯವರು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ೭ನೇ ಹೊಸಕೋಟೆಯ ಶ್ರೀ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಅನ್ನಸಂತರ್ಪಣಾ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರು ಪಾಲ್ಗೊಂಡಿದ್ದರು. ಇಲ್ಲಿಗೆ ಸಮೀಪದ ಮಾರುತಿನಗರದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಅನ್ನ ಸಂತರ್ಪಣೆ ನಡೆಯಿತು.
ಕಂಬಿಬಾಣೆಯ ಶ್ರೀರಾಮ ಮತ್ತು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಂಗವಾಗಿ ಗಣಪತಿ ಹೋಮ ಮತ್ತು ರಾಮತಾರಕ ಹೋಮವನ್ನು ದೇವಾಲಯದ ಪ್ರಧಾನ ಆರ್ಚಕರಾದ ಪ್ರಭಾಕರ ಕುದ್ದಣ್ಣಾಯ್ಯ ಮತ್ತು ಪ್ರಜಲ್ವ ಕುದ್ದಣ್ಣಾಯ್ಯ ನಡೆಸಿಕೊಟ್ಟರು.
ನೇಗಳ್ಳೆ ಕರ್ಕಳ್ಳಿಯಲ್ಲಿ ಕರಸೇವಕರಿಗೆ ಸನ್ಮಾನನಾಪೋಕ್ಲು: ಅಯೋಧ್ಯೆಯ ಶ್ರೀ ರಾಮ ಜನ್ಮಸ್ಥಾನದಲ್ಲಿ ಶ್ರೀ ರಾಮ ಲಲ್ಲಾನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೊಂಡ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿಯ ಸುತ್ತಮುತ್ತಲಿನ ವಿವಿಧ ದೇವಾಲಯಗಳಲ್ಲಿ ಪೂಜೆ, ರಾಮತಾರಕ ಹೋಮ, ಹವನ, ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಇಲ್ಲಿನ ಶ್ರೀರಾಮ ಮಂದಿರದಲ್ಲಿ ಬೆಳಿಗ್ಗೆ ೧೧ ಗಂಟೆಯಿAದ ಭಜನೆ, ರಾಮತಾರಕ ಹೋಮ, ಕರಸೇವಕರಿಗೆ ಹಾಗೂ ಅಂದು ಆಂದೋಲನದಲ್ಲಿ ಪಾಲ್ಗೊಂಡ ಹಿರಿಯರಿಗೆ ಗೌರವ ಅರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದ ನೇರ ವೀಕ್ಷಣೆಗೆ ಎಲ್ಇಡಿ ಪರದೆ ಅಳವಡಿಸಲಾಗಿತ್ತು. ಐನೂರಕ್ಕೂ ಅಧಿಕ ಭಕ್ತರು ಭಜನೆ, ರಾಮತಾರಕ ಮಂತ್ರ ಪಠಿಸಿದರು. ಈ ಸಂದರ್ಭ ಭಕ್ತಾದಿಗಳು ರಾಮ ಮಂದಿರ ಹಾಗೂ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜಾ ವಿಧಿವಿಧಾನ ಅರ್ಪಿಸಿದರು. ಹೋಮ ಮಹಾಪೂಜೆ ಭಕ್ತಾದಿಗಳಿಗೆ ತೀರ್ಥ-ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆಯನ್ನು ನೆರವೇರಿಸಲಾಯಿತು.
ಸಮೀಪದ ಬೆಟ್ಟಗೇರಿ ಶ್ರೀ ಭಗವತಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು. ಬಕ್ಕದಲ್ಲಿರುವ ಶ್ರೀ ಕೃಷ್ಣ, ಸಂಕ್ರಾAತಿ, ಸಾಗರ ಸ್ವಸಹಾಯ ಸಂಘ, ಗಜಾನನ ಭಕ್ತ ಮಂಡಳಿ ಇವರ ಸಹಯೋಗದಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠಾಪನೆಯ ಅಂಗವಾಗಿ ವಿಶೇಷ ಪೂಜಾ ವಿಧಿ ವಿಧಾನಗಳು ಹಾಗೂ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಬಲಮುರಿಯ ಅಗಸ್ತೆö್ಯÃಶ್ವರ ದೇವಾಲಯದಲ್ಲಿ ಅಯೋಧ್ಯೆಯ ಶ್ರೀ ರಾಮ ಜನ್ಮಸ್ಥಾನದಲ್ಲಿ ಶ್ರೀ ರಾಮಲಲ್ಲಾನ ನೂತನ ವಿಗ್ರಹದ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಎಲ್ಇಡಿ ಪರದೆ ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಪಾಲೂರಿನ ಶ್ರೀ ಮಹಾ ಲಿಂಗೇಶ್ವರ ದೇವಾಲಯ, ಕಕ್ಕಬೆಯ ಗಣಪತಿ ಗುಡಿ, ಕಕ್ಕುಂದಕಾಡು ಶ್ರೀ ವೆಂಕಟೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಕರಿಕೆ: ಅಯೋಧ್ಯೆಯ ಪವಿತ್ರ ಶ್ರೀ ರಾಮ ಜನ್ಮಭೂಮಿಯಲ್ಲಿ ಶ್ರೀ ಬಾಲರಾಮನ ಪ್ರಾಣಪ್ರತಿಷ್ಠೆ ಅಂಗವಾಗಿ ಕರಿಕೆಯಲ್ಲಿ ರಾಮ ಭಜನೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಇಲ್ಲಿನ ಚೆತ್ತುಕಾಯ ವನಶಾಸ್ತಾವು ದೇವಸ್ಥಾನದ ಆವರಣದ ಅಯ್ಯಪ್ಪ ಭಜನಾ ಮಂದಿರದಲ್ಲಿ ಬೆಳಿಗ್ಗೆಯಿಂದ ಭಕ್ತಾದಿಗಳು ರಾಮ ಭಜನೆ, ಹನುಮಾನ್ ಚಾಲಿಸ, ರಾಮ ತಾರಕ ಯಜ್ಞದಲ್ಲಿ ಪಾಲ್ಗೊಂಡು ನಂತರ ಶ್ರೀ ರಾಮ ಪ್ರಾಣಪ್ರತಿಷ್ಠೆಯ ನೇರ ಪ್ರಸಾರವನ್ನು ವೀಕ್ಷಣೆ ಮಾಡಿದರು.
ನೂರಾರು ಭಕ್ತರು ಶ್ರದ್ಧೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ರಾಮನ ಭಾವಚಿತ್ರಕ್ಕೆ ಪುಷ್ಪಾಕ್ಷತೆ ಹಾಕಿದರು. ಕೆ.ಜಿ. ಹೊನ್ನಪ್ಪ ಹಾಗೂ ತಂಡದವರು ಭಜನೆ ನೆರವೇರಿಸಿದರು. ಊರಿನ ದಾನಿಗಳ ನೆರವಿನಿಂದ ಭಕ್ತರಿಗೆ ಅನ್ನದಾನ ಮಾಡಲಾಯಿತು. ಮಧುಕರ ಆಚಾರ್ ಮಧ್ಯಾಹ್ನದ ಪೂಜಾ ಕಾರ್ಯವನ್ನು ನೆರವೇರಿಸಿ ಕೊಟ್ಟರು.
ಅಯೋಧ್ಯಾ ಕರಸೇವೆಯಲ್ಲಿ ಪಾಲ್ಗೊಂಡ ಕರಿಕೆಯ ಕರಸೇವಕ ರಾಘವ ಸರಳಾಯ ಅವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಷ್ಟಿçÃಯ ಸ್ವಯಂಸೇವಕ ಸಂಘದ ಪ್ರಮುಖರಾದ ಹೊದ್ದೆಟ್ಟಿ ಸುಧೀರ್ ಕುಮಾರ್, ಅಜಯ್ ಕಟ್ಟಕೊಡಿ, ಗಣೇಶ್ ಕುದುಪಜೆ, ಶಿವಪ್ಪ ಕೆ.ಎ., ಜಯಾನಂದ ಕೆ.ವಿ., ಶೇಷಪ್ಪ, ಮುತ್ತಣ್ಣ, ಬಾಬು, ಗಣೇಶ್ ಬಿ.ಎ. ದಯಾನಂದ ಬಿ.ಕೆ., ವಿಶ್ವ ಹಿಂದು ಪರಿಷತ್ತಿನ ಪ್ರಮುಖರಾದ ಪ್ರಕಾಶ್ ಗುಡ್ಡೆಮನೆ, ಜಯಂತ್ ಪಿ.ಆರ್., ಭಾರ್ಗವ್ ಜಯಪ್ರಕಾಶ್ ಕೋಡಿ, ರಕ್ಷಿತ್ ಕಂಡಿಗೆ, ಜಯಪ್ರಕಾಶ್, ದೇವಾಲಯದ ಅಧ್ಯಕ್ಷ ನಾರಾಯಣ ಕೆ.ಎ., ಉಪಾಧ್ಯಕ್ಷ ಬಾಲಕೃಷ್ಣ ಕೆ.ಡಿ., ರಮೇಶ್ ಬಿಕೆ., ಕವಿತಾ ಪ್ರಭಾಕರ್, ಕೋಡಿ ಪೊನ್ನಪ್ಪ, ಹೊಸಮನೆ ಹರೀಶ್ ಸೇರಿದಂತೆ ಇತರೆ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.ಸೋಮವಾರಪೇಟೆ: ಅಯೋಧ್ಯೆ ಕರಸೇವೆಯಲ್ಲಿ ಭಾಗಿಯಾಗಿದ್ದ ಪಟ್ಟಣ ವ್ಯಾಪ್ತಿಯ ಕರಸೇವಕರನ್ನು ನೇರ್ಗಳ್ಳೆ ಕರ್ಕಳ್ಳಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯ ಸಮಿತಿ ಹಾಗೂ ಭಜರಂಗದಳದ ವತಿಯಿಂದ ಸನ್ಮಾನಿಸಲಾಯಿತು.
ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರಿದ ಬಳಿಕ, ದೇವಾಲಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರಸೇವಕರಾದ ಮಸಗೋಡು ಸುರೇಶ್, ಬಸವೇಶ್ವರ ರಸ್ತೆಯ ಅನಿಲ್, ನೇರ್ಗಳ್ಳೆ ಕರ್ಕಳ್ಳಿ ಗ್ರಾಮದ ಸೂರ್ಯಕುಮಾರ್ ಕುಟುಂಬದ ಭಗತ್ ಅವರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಸುರೇಂದ್ರ, ಕಾರ್ಯರ್ಶಿ ಜೀವನ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ಭಜರಂಗದಳದ ಕಾರ್ಯಕರ್ತರು ಉಪಸ್ಥಿತರಿದ್ದರು.ಗೋಣಿಕೊಪ್ಪ ಆಟೋ ಚಾಲಕರ ಸಂಘ
*ಗೋಣಿಕೊಪ್ಪ: ಗೋಣಿಕೊಪ್ಪದಲ್ಲಿ ಹಿಂದೂಪರ ಸಂಘಟನೆ ವತಿಯಿಂದ ಅನ್ನದಾನ ನಡೆಯಿತು. ಆಟೋ ಚಾಲಕರು ಮತ್ತು ಮಾಲೀಕರ ಸಂಘದಿAದ ಪಾನಕ ವಿತರಣೆ ನಡೆಯಿತು. ಆಟೋಗಳಲ್ಲಿ ಹನುಮ ಮತ್ತು ರಾಮನ ಚಿತ್ರದ ಬಾವುಟಗಳು ರಾರಾಜಿಸಿದವು.
ಪಂಚೆ ಬಿಳಿಯ ಶರ್ಟಿನಲ್ಲಿ ಸಾಂಪ್ರದಾಯಿಕ ಉಡುಪುತೊಟ್ಟು ಪ್ರತಿಷ್ಠಾಪನಾ ಗಳಿಗೆಯನ್ನು ಶ್ರದ್ಧಾಭಕ್ತಿಯಿಂದ ಹಬ್ಬವನ್ನಾಗಿ ಆಚರಿಸಿದರು.
ಬಸ್ ನಿಲ್ದಾಣದಲ್ಲಿ, ಉಮಾಮಹೇಶ್ವರಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಪೂಜೆ ಪುರಸ್ಕಾರಗಳ ಜೊತೆಗೆ ಅನ್ನದಾನವನ್ನು ಏರ್ಪಡಿಸಲಾಗಿತ್ತು.ಸಿದ್ದಾಪುರ: ಅಯೋಧ್ಯೆ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಅಂಗವಾಗಿ ಸಿದ್ದಾಪುರದ ಸುತ್ತಮುತ್ತಲ ಗ್ರಾಮಗಳ ವಿವಿಧ ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳು ನಡೆದವು.
ಸಿದ್ದಾಪುರದ ಶ್ರೀ ರಾಮಮಂದಿರ ಗಣೇಶ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ನಂತರ ಬಸ್ ನಿಲ್ದಾಣದಲ್ಲಿ ಬೃಹತ್ ಗಾತ್ರದ ಶ್ರೀ ರಾಮನ ಬ್ಯಾನರ್ಅನ್ನು ಅನಾ ವರಣಗೊಳಿಸಿ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಈ ಸಂದರ್ಭ ಸಿದ್ದಾಪುರದ ಶ್ರೀ ರಾಮಮಂದಿರ ದೇವಾಲಯದ ಸಿದ್ದಾಪುರ: ಅಯೋಧ್ಯೆ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಅಂಗವಾಗಿ ಸಿದ್ದಾಪುರದ ಸುತ್ತಮುತ್ತಲ ಗ್ರಾಮಗಳ ವಿವಿಧ ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳು ನಡೆದವು.
ಸಿದ್ದಾಪುರದ ಶ್ರೀ ರಾಮಮಂದಿರ ಗಣೇಶ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ನಂತರ ಬಸ್ ನಿಲ್ದಾಣದಲ್ಲಿ ಬೃಹತ್ ಗಾತ್ರದ ಶ್ರೀ ರಾಮನ ಬ್ಯಾನರ್ಅನ್ನು ಅನಾ ವರಣಗೊಳಿಸಿ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಈ ಸಂದರ್ಭ ಸಿದ್ದಾಪುರದ ಶ್ರೀ ರಾಮಮಂದಿರ ದೇವಾಲಯದ ಅನ್ನಸಂತರ್ಪಣೆ ನಡೆಯಿತು.
ಅಮ್ಮತ್ತಿ-ಪಾಲಿಬೆಟ್ಟ ಹಾಗೂ ಮಾಲ್ದಾರೆಯ ಶ್ರೀ ಮುತ್ತಪ್ಪ ದೇವಾಲ ಯದ ಆವರಣದಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣಪ್ರತಿಷ್ಠೆಯ ನೇರ ಪ್ರಸಾರವನ್ನು ಪರದೆ ಮೂಲಕ ಸಾರ್ವಜನಿಕರು ವೀಕ್ಷಿಸಿ ಸಂತಸಪಟ್ಟರು. ನೆಲ್ಲಿಹುದಿಕೇರಿ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಪೂಜಾ ಕಾರ್ಯಗಳು ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಿದ್ದಾಪುರದ ಠಾಣಾಧಿಕಾರಿ ಉತ್ತಯ್ಯ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ವೀರಾಜಪೇಟೆ: ಚಿಕ್ಕಪೇಟೆಯ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ವಿಶೇಷ ಪೂಜೆಗಳು ಜರುಗಿದವು. ಶ್ರೀ ರಾಮ ಚಂದ್ರರ ಗೀತೋಪ ದೇಶದ ಗೀತ ಪಾರಾಯಣ, ರಾಮ ಭಜನೆ ನಡೆಯಿತು.
ದೇಗುಲದ ಪ್ರಮುಖ ದೈವ ಶ್ರೀ ಆಂಜನೇಯ ಸ್ವಾಮಿಗೆ ಮಹಾಪೂಜೆ ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಈ ಸಂದರ್ಭ ದೇಗುಲದ ಆಡಳಿತ ಮಂಡಳಿಯ ಪದಾಧಿಕಾರಿಗಳು, ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.ಕುಶಾಲನಗರ: ಇಲ್ಲಿನ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಮಿತಿಯ ವತಿಯಿಂದ ಸಮುದಾಯದ ಕರಸೇವಕರನ್ನು ಕುಶಾಲನಗರ ರಥ ಬೀದಿಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಕೆ.ಎಸ್. ರಾಜಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.*ಸಿದ್ದಾಪುರ: ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಮಾಲ್ದಾರೆಯ ಶ್ರೀಮುತ್ತಪ್ಪ ದೇವಾಲಯದಲ್ಲಿ ಶ್ರೀ ರಾಮ ನಾಮ ಸ್ಮರಣೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಶ್ರೀ ರಾಮನ ಮಾದರಿ ಗುಡಿ ನಿರ್ಮಿಸಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಅಯೋಧ್ಯೆಯಿಂದ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರವನ್ನು ಪ್ರದರ್ಶಿಸಲಾಯಿತು. ಮಾಲ್ದಾರೆ, ಮಠ, ಕಲ್ಲಳ್ಳ, ಮುಡ್ಲೂರು ಸೇರಿದಂತೆ ಸುತ್ತಮುತ್ತಲ ಗ್ರಾಮದ ಐನೂರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಸರ್ವರಿಗೂ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಗ್ರಾಮಸ್ಥರೇ ಒಗ್ಗೂಡಿ ಎಲ್ಲಾ ಪೂಜೆ ವಿಧಿ ವಿಧಾನಗಳನ್ನು ಆಯೋಜಿಸಿದ್ದು ವಿಶೇಷವಾಗಿತ್ತು.