ಐಗೂರು: ಐಗೂರು ವ್ಯಾಪ್ತಿಯ ಹೊಸತೋಟದ ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ, ಹೋಮ ಹವನ ನಡೆಸಲಾಯಿತು. ಶ್ರೀ ಚಾಮುಂಡೇಶ್ವರಿ ಯುವಕ ಸಂಘದಿAದ ಅಯೋಧ್ಯೆಗೆ ಕರಸೇವಕರಾಗಿ ತೆರಳಿದ್ದ ಐಗೂರಿನ ಎಂ.ಎ. ಪ್ರಭಾಕರ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಅಯೋಧ್ಯೆಗೆ ಕರ ಸೇವಕರಾಗಿ ತೆರಳಿದ್ದ ದಿವಂಗತ ಜಯ ಕಾಂತರವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.ಶನಿವಾರಸಂತೆ: ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ರಾಮ, ಸೀತೆ, ಲಕ್ಷö್ಮಣ, ಹನುಮಂತ, ವಾನರ ಸೈನ್ಯ, ರಾವಣ, ಶಬರಿ, ಮಂಥರೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಬೆರಗಾಗಿ ನೋಡುತ್ತಾ ನಿಂತರು. ಅಯೋಧ್ಯೆಯಲ್ಲಿ ನಡೆಯುತ್ತಿದ್ದ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ಹೋಗಬೇಕಾದ ವರೆಲ್ಲ ಶಾಲೆಗೇಕೆ ಬಂದರು ಎಂದು ಯೋಚಿಸುವಂತಾಗಿತ್ತು.
ಆ ಪುಟ್ಟಪುಟ್ಟ ರಾಮ, ಸೀತೆ, ಲಕ್ಷ್ಮಣ ಹನುಮಂತ, ವಾನರ ಸೈನ್ಯ, ರಾವಣ, ಶಬರಿ, ಮಂಥರೆಯರೆಲ್ಲ ಆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೇ. ಬಂದ ಪಾತ್ರಧಾರಿಗಳು ರಾಮಾಯಣದ ವಿವಿಧ ಕಥಾ ಪ್ರಸಂಗಗಳನ್ನು ಅಭಿನಯಿಸುವ ಮೂಲಕ ರಾಮಾಯಣದ ಕಥಾ ಪ್ರಸಂಗಗಳನ್ನು ಎಳೆಎಳೆಯಾಗಿ ತೆರೆದಿಟ್ಟರು.
ಹೀಗೆ ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡುವ ದಿನಕ್ಕೆ ಅನ್ವರ್ಥವಾಗುವಂತೆ ಪುಟ್ಟ ವಿದ್ಯಾರ್ಥಿಗಳು ರಾಮಾಯಣದ ಪ್ರಸಂಗಗಳನ್ನು ಅಭಿನಯಿಸುವಂತೆ ಮಾಡಿದವರು ಆ ಶಾಲೆಯ ಕ್ರಿಯಾಶೀಲ ಮುಖ್ಯ ಶಿಕ್ಷಕ ಸಿ.ಎಸ್. ಸತೀಶ್. “ಮಕ್ಕಳು ಚಿಕ್ಕವರಾಗಿರು ವಾಗಲೇ ರಾಮಾಯಣದ ಕಥೆಯನ್ನು ತಿಳಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಮೌಲ್ಯದ ಅರಿವು ಮೂಡಿಸಿ ನೈತಿಕತೆ ಬೆಳೆಸಬೇಕು ಪಾತ್ರಧಾರಿಗಳು ರಾಮಾಯಣದ ವಿವಿಧ ಕಥಾ ಪ್ರಸಂಗಗಳನ್ನು ಅಭಿನಯಿಸುವ ಮೂಲಕ ರಾಮಾಯಣದ ಕಥಾ ಪ್ರಸಂಗಗಳನ್ನು ಎಳೆಎಳೆಯಾಗಿ ತೆರೆದಿಟ್ಟರು.
ಹೀಗೆ ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡುವ ದಿನಕ್ಕೆ ಅನ್ವರ್ಥವಾಗುವಂತೆ ಪುಟ್ಟ ವಿದ್ಯಾರ್ಥಿಗಳು ರಾಮಾಯಣದ ಪ್ರಸಂಗಗಳನ್ನು ಅಭಿನಯಿಸುವಂತೆ ಮಾಡಿದವರು ಆ ಶಾಲೆಯ ಕ್ರಿಯಾಶೀಲ ಮುಖ್ಯ ಶಿಕ್ಷಕ ಸಿ.ಎಸ್. ಸತೀಶ್. “ಮಕ್ಕಳು ಚಿಕ್ಕವರಾಗಿರು ವಾಗಲೇ ರಾಮಾಯಣದ ಕಥೆಯನ್ನು ತಿಳಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಮೌಲ್ಯದ ಅರಿವು ಮೂಡಿಸಿ ನೈತಿಕತೆ ಬೆಳೆಸಬೇಕು ಪೊನ್ನಂಪೇಟೆ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಅಂಗವಾಗಿ ಪೊನ್ನಂಪೇಟೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಅಭಿಷೇಕ ನಡೆಸಲಾಯಿತು.
ಬೆಳಿಗ್ಗೆ ೧೦ ಗಂಟೆಯಿAದ ೧೧.೩೦ ರವರೆಗೆ ಸ್ಥಳೀಯ ಗಾಯಕರುಗಳು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಶ್ರೀ ಬಸವೇಶ್ವರ ದೇವರಿಗೆ ರುದ್ರಾಭಿಷೇಕ, ಮಹಾ ಮಂಗಳಾರತಿ ನಡೆಯಿತು. ಭಕ್ತಾದಿಗಳಿಗೆ ಸಾರ್ವಜನಿಕರ ಸಹಾಯದೊಂದಿಗೆ ಮಧ್ಯಾಹ್ನ ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಜೆ ಮಂಗಳಾರತಿ ನಂತರ, ದೀಪ ಬೆಳಗಿಸುವ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭ ೧೯೯೨ ಅಯೋಧ್ಯೆಯಲ್ಲಿ ಕರಸೇವೆಯಲ್ಲಿ ಪಾಲ್ಗೊಂಡಿದ್ದ ಕೃಷ್ಣ ನಗರ ನಿವಾಸಿ ಪಿ.ಆರ್. ಮೋಹನ್ ಬಾಬು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳು, ಹಿಂದೂ ಕಾರ್ಯಕರ್ತರು ಹಾಗೂ ಭಕ್ತಾದಿಗಳು ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿದರು.ಕೂಡಿಗೆ: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಕೂಡಿಗೆ ಸೇರಿದಂತೆ ಕುಶಾಲನಗರ ತಾಲೂಕು ವ್ಯಾಪ್ತಿಯ ಗ್ರಾಮಾಂತರ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ಹವನ ಕಾರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿತು.
ಕೂಡಿಗೆ, ಕೂಡುಮಂಗಳೂರು ಹನುಮ ಸೇನಾ ಸಮಿತಿಯ ವತಿಯಿಂದ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಕೂಡ್ಲೂರು ಶ್ರೀ ಬಸವೇಶ್ವರ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಹೆಬ್ಬಾಲೆ, ತೊರೆನೂರು ಶಿರಂಗಾಲ ಗ್ರಾಮ ಪಂಚಾಯಿತಿ ಗ್ರಾಮಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಗುಮ್ಮನಕೊಲ್ಲಿ ಗ್ರಾಮಸ್ಥರು, ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಬಸವೇಶ್ವರ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮ. ಪ್ರಸಾದ ವಿನಿಯೋಗ, ಸಂಜೆ ಅನ್ನಸಂತರ್ಪಣೆ ನಡೆಯಿತು. ಗುಮ್ಮನಕೊಲ್ಲಿ, ಮುಳ್ಳುಸೋಗೆ ಕೂಡ್ಲೂರು ಗ್ರಾಮವು ಸೇರಿದಂತೆ ಹಾಸನ ಹೆದ್ದಾರಿ ರಸ್ತೆಯು ಕೇಸರಿ ಧ್ವಜದಿಂದ ಶೃಂಗಾರಗೊAಡಿತ್ತು. ದೇವಾಲಯಗಳಲ್ಲಿ ವಿವಿಧ ಭಜನಾ ಮಂಡಳಿಯಿAದ ಭಜನಾ ಕಾರ್ಯಕ್ರಮಗಳು ನಡೆದವು.ಶನಿವಾರಸಂತೆ: ಪಟ್ಟಣದ ಶ್ರೀರಾಮ ಮಂದಿರ, ಶ್ರೀ ಗಣಪತಿ-ಪಾರ್ವತಿ-ಚಂದ್ರಮೌಳೇಶ್ವರ ದೇವಾಲಯ ಹಾಗೂ ತ್ಯಾಗರಾಜ ಕಾಲೋನಿಯ ವಿಜಯ ವಿನಾಯಕ ದೇವಾಲಯಗಳಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾನ ಪ್ರಯುಕ್ತ ಹೋಮ-ಹವನ, ಯಜ್ಞ, ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.
ಶ್ರೀರಾಮ ಮಂದಿರದಲ್ಲಿ ಬೆಳಿಗ್ಗೆ ಪ್ರಧಾನ ಅರ್ಚಕ ಪ್ರಸನ್ನ ರಾವ್, ಅರ್ಚಕ ಸುದರ್ಶನ ಭಟ್ ಹಾಗೂ ಪ್ರಭಾಕರ್ ಭಟ್ ಅವರು ಶ್ರೀರಾಮ, ಸೀತಾ, ಲಕ್ಷ್ಮಣ, ಆಂಜನೇಯ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ ಮಾಡಿ ಬಗೆಬಗೆಯ ಹೂಗಳಿಂದ ಅಲಂಕರಿಸಿದ್ದರು. ಶ್ರೀರಾಮ ತಾರಕ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಮಾಡಿ ತೀರ್ಥ-ಪ್ರಸಾದ ವಿನಿಯೋಗ ನಡೆಯಿತು.
ಸಂಜೆ ದೀಪೋತ್ಸವ ಹಾಗೂ ಸಿಡಿಮದ್ದಿನ ಪ್ರದರ್ಶನ ನಡೆದು ಭಕ್ತವೃಂದದವರ ಕಣ್ಮನ ತಣಿಸಿತು. ಶ್ರೀ ಗಣಪತಿ-ಪಾರ್ವತಿ-ಚಂದ್ರಮೌಳೇಶ್ವರ ದೇವಾಲಯದಲ್ಲಿ ಪ್ರಧಾನ ಅರ್ಚಕ ಮಾಲತೇಶ್ ಭಟ್ ಹಾಗೂ ಅರ್ಚಕ ಸುಹಾಸ್ ಭಟ್ ಅವರು ಹೋಮ-ಹವನ, ಪೂಜಾ ವಿಧಿಗಳನ್ನು ನೆರವೇರಿಸಿದರು. ದೇವಾಲಯ ಪ್ರಾಂಗಣದಲ್ಲಿ ದೀಪಗಳನ್ನು ಬೆಳಗಿಸಿ ಅಲಂಕರಿಸಲಾಗಿತ್ತು. ತ್ಯಾಗರಾಜ ಕಾಲೋನಿಯ ವಿಜಯ ವಿನಾಯಕ ದೇವಾಲಯದಲ್ಲಿ ಅರ್ಚಕ ಮಂಜುನಾಥ ಶರ್ಮ ಅವರು ರಾಮ ತಾರಕ ಹೋಮ-ಹವನ, ವಿಶೇಷ ಪೂಜಾ ವಿಧಿಗಳನ್ನು ನೆರವೇರಿಸಿದರು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ದೇವಾಲಯ ಮುಂಭಾಗ ಎಲ್.ಇ.ಡಿ. ಪರದೆಯ ಮೇಲೆ ಶ್ರೀ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರದರ್ಶನ ಏರ್ಪಡಿಸಲಾಗಿತ್ತು. ಶನಿವಾರಸಂತೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಪೂಜಾ ಕಾರ್ಯಕ್ರಮಗಳಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಮೂರು ದೇವಾಲಯಗಳ ಸೇವಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.ವೀರಾಜಪೇಟೆ: ಕೆದಮುಳ್ಳೂರು ಗ್ರಾಮದ ತೋರದ ತೋಮರತಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಮಹಾಪೂಜೆ, ಮಹಾ ಮಂಗಳಾರತಿ ನಡೆದು ನೆರೆದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಈ ಸಂದರ್ಭ ಗ್ರಾಮಸ್ಥರಾದ ಪರಮೇಶ್ವರ, ಗೌಡುದಾರೆ ಚೋಟು ಬಿದ್ದಪ್ಪ, ಕಿರಣ್ ಪೂಜಾರಿ, ಹೇಮಂತ್, ಮಾಳೇಟಿರ ಸನ್ನಿ, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.ಪೊನ್ನಂಪೇಟೆ: ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
ಇಲ್ಲಿನ ತಕ್ಕಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಚಮ್ಮಟೀರ ಸುಗುಣ ಮುತ್ತಣ್ಣ ನೇತೃತ್ವದಲ್ಲಿ ಅರ್ಚಕ ಸುಬ್ರಮಣ್ಯ ಕೇಕುನ್ನಾಯ ಶ್ರೀ ರಾಮನಿಗೆ ವಿಶೇಷ ಪೂಜೆ ನೆರವೇರಿಸಿದರು.
ಭದ್ರಕಾಳಿ ದೇವಿಗೆ ಮಹಾಮಂಗಳಾರತಿ ಸೇರಿದಂತೆ ಶ್ರೀ ರಾಮ ಸ್ತೋತ್ರ ಪಠಣ ಮಾಡುವ ಮೂಲಕ ವಿವಿಧ ಪೂಜಾವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಪ್ರಸಾದ ವಿನಿಯೋಗದ ಬಳಿಕ ನೆರೆದ ಭಕ್ತಾದಿಗಳಿಗೆ ಸಾಮೂಹಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭ ದೇವಸ್ಥಾನದ ಮಾಜಿ ಅಧ್ಯಕ್ಷ ಚಮ್ಮಟೀರ ಡಿಕ್ಕಿ ಕುಶಾಲಪ್ಪ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಹಾಗೂ ಊರಿನವರು ಉಪಸ್ಥಿತರಿದ್ದರು.ಗೋಣಿಕೊಪ್ಪಲು: ಗೋಣಿಕೊಪ್ಪಲುವಿನ ಉಮಾಮಹೇಶ್ವರಿ ದೇವಾಲಯದಲ್ಲಿ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಅಂಗವಾಗಿ ಹೋಮ, ಹವನ ನಡೆಯಿತು.
ಉಮಾಮಹೇಶ್ವರಿ ದೇವಾಲಯ ಸಮಿತಿಯ ವತಿಯಿಂದ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಹಿಂದೂಪರ ಸಂಘಟನೆಯ ಬಹುತೇಕ ಪದಾಧಿಕಾರಿಗಳು ಪೂಜಾ ಕಾರ್ಯದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.
ಮಧ್ಯಾಹ್ನದ ವೇಳೆ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಕಾರ್ಮಿಕರ ಹಾಗೂ ಚಾಲಕರ ಸಂಘ, ಹಿಂದೂಪರ ಸಂಘಟನೆಯ ವತಿಯಿಂದ ಅನ್ನದಾನ ಕಾರ್ಯಕ್ರಮ ಜರುಗಿತು. ನಗರದ ಆಟೋ ಚಾಲಕ ಹಾಗೂ ಮಾಲೀಕರ ಸಂಘದ ವತಿಯಿಂದ ಪಾನಕವನ್ನು ಅಧ್ಯಕ್ಷ ಜಪ್ಪು ಸುಬ್ಬಯ್ಯ ಮುಂದಾಳತ್ವದಲ್ಲಿ ವಿತರಿಸಲಾಯಿತು. ಖಾಸಗಿ ಬಸ್ ಸೇರಿದಂತೆ ಆಟೋ ರಿಕ್ಷಾ ಇತರ ವಾಹನಗಳಲ್ಲಿ ರಾಮನ ಬಾವುಟಗಳು ಅಳವಡಿಸಲಾಗಿತ್ತು. ಗೋಣಿಕೊಪ್ಪಲುವಿನ ಹಿಂದೂಪರ ಸಂಘಟನೆ ಪ್ರಮುಖರಾದ ಸುರೇಶ್ ರೈ, ಕೆ. ರಾಜೇಶ್, ಸುಬ್ರಮಣಿ ಸೇರಿದಂತೆ ನೂರಾರು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕಡAಗ: ಕಡಂಗ ಮುಖ್ಯ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಶ್ರೀ ರಾಮತಾರಕ ಹೋಮ ನಡೆಸಲಾಯಿತು. ಮಧ್ಯಾಹ್ನ ೧೨ ಗಂಟೆಗೆ ಅರಪಟ್ಟು ಭಗವತಿ ದೇವಸ್ಥಾನದಲ್ಲಿ ಅಲಂಕಾರ ಪೂಜಾ ಕಾರ್ಯವನ್ನು ನಡೆಸಲಾಯಿತು
ಪೂಜಾ ಕಾರ್ಯಕ್ರಮದ ನೇತೃತ್ವವನ್ನು ಅರ್ಚಕರಾದ ಕೀರ್ತಿಶ್ ವಹಿಸಿದ್ದರು. ಕಾರ್ಯಕ್ರಮಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಸಾಕ್ಷಿಯಾದರು. ಈ ಸಂದರ್ಭದಲ್ಲಿ ಭಗವತಿ ದೇವಸ್ಥಾನದ ಅಧ್ಯಕ್ಷ ನೆರ್ಪಂಡ ಚಿತ್ರ ಬೆಳ್ಳಿಯಪ್ಪ, ಕಾರ್ಯದರ್ಶಿ ಕಣಿಯಂಡ ಪ್ರಕಾಶ್, ಕೋಡಿರ ಪ್ರಸನ್ನ, ಕೋಡಿರ ರಾಬಿನ್, ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಕುಲ್ಲಚಂಡ ಕರುಂಬಯ್ಯ, ಕಾರ್ಯದರ್ಶಿ ಗಿರೀಶ್ ಕುಲ್ಲಚಂಡ, ರಸಿ ಪೂವಯ್ಯ, ಗಿರೀಶ್, ಜಾಯ್ ಕಾವೇರಪ್ಪ ಉಪಸ್ಥಿತರಿದ್ದರು.ಪೊನ್ನಂಪೇಟೆ: ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಪೊನ್ನಂಪೇಟೆ ಸಮೀಪದ ಮುಗುಟಗೇರಿ ಶ್ರೀ ತೊಣಕೇರಿ ಭಗವತಿ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ ನಡೆಯಿತು.
ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತೀರ್ಥಪ್ರಸಾದ ಸ್ವೀಕರಿಸಿದರು.ಐಗೂರು: ಸಮೀಪದ ಯಡವನಾಡಿನ ಬಸವೇಶ್ವರ ದೇವಾಲಯದಲ್ಲಿ ಪೂಜೆ, ಹೋಮ, ಹವನ ನಡೆಸಲಾಯಿತು.
ಎಲ್.ಇ.ಡಿ. ಪರದೆ ಮುಖಾಂತರ ಅಯೋಧ್ಯ ಸಂಭ್ರಮವನ್ನು ಭಕ್ತಾದಿಗಳು ವೀಕ್ಷಿಸಿದರು. ಈ ಸಂದರ್ಭದಲ್ಲಿ ಅಯೋಧ್ಯೆಗೆ ಕರೆಸೇವಕರಾಗಿ ತೆರಳಿದ್ದ ಟಿ.ಕೆ. ರಮೇಶ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಯಡವನಾಡಿನ ಗ್ರಾಮಸ್ಥರು ಭಾಗವಹಿಸಿದ್ದರು.ಚೆಟ್ಟಳ್ಳಿ: ಅಯೋಧ್ಯೆ ಶ್ರೀ ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಚೆಟ್ಟಳ್ಳಿಯ ವಿಶ್ವ ಗುರು ಶ್ರೀ ನರೇಂದ್ರ ಮೋದಿ ಸಹಕಾರ ಭವನದಲ್ಲಿ ಹೋಮ, ಹವನ, ಭಜನೆ ಪಾದುಕಾಪೂಜೆ ಹಾಗೂ ಅಯೋಧ್ಯೆಯ ಪ್ರತಿಷ್ಠಾಪನಾ ಪೂಜಾ ನೇರಪ್ರಸಾರ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಭಕ್ತಾದಿಗಳಿಗೆ ಬೆಳಗಿನ ಉಪಹಾರ ಹಾಗೂ ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು. ಸಂಜೆ ಮಹಿಳೆಯರಿಂದ ದೀಪಾರಾಧನೆ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಕರಸೇವಕರಾದ ಬೊಪ್ಪಟ್ಟೀರ ಅಪ್ಪುಟ ನಾಣಯ್ಯ ಹಾಗೂ ಹೊಸಮನೆ ರಾಜು ಅವರನ್ನು ಸನ್ಮಾನಿಸಲಾಯಿತು. ಹಲವು ವರ್ಷಗಳ ರಾಮಮಂದಿರ ನಿರ್ಮಾಣ ಕನಸು ಇಂದು ನನಸಾಗಿದೆ ಎಂದು ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದರು. ಬಲ್ಲಾರಂಡ ಕಂಠಿ ಕಾರ್ಯಪ್ಪ ಮಾತನಾಡಿದರು. ವಿವಿಧ ಸಂಘಟನೆಯ ಪ್ರಮುಖರು ಹಾಗೂ ಸಾರ್ವಜನಿಕರು ಹಾಜರಿದ್ದರು.ಪೊನ್ನಂಪೇಟೆ: ಇಲ್ಲಿನ ಕೃಷ್ಣನಗರದಲ್ಲಿರುವ ಶ್ರೀ ರಾಮ ಮಂದಿರದಲ್ಲಿ ರಾಷ್ಟಿçÃಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಚಾಲಕ ಮನು ಕಾವೇರಪ್ಪ ಧ್ವಜಾರೋಹಣ ನೆರವೇರಿಸಿದರು.
ನಂತರ ಶ್ರೀ ರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ದೀಪ ಬೆಳಗಿಸಲಾಯಿತು. ಇದೇ ಸಂದರ್ಭ ೧೯೯೨ ಅಯೋಧ್ಯೆಯಲ್ಲಿ ಕರಸೇವೆಯಲ್ಲಿ ಪಾಲ್ಗೊಂಡಿದ್ದ ಕೃಷ್ಣನಗರ ನಿವಾಸಿ ಪಿ.ಆರ್. ಮೋಹನ್ ಬಾಬು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಸಂದರ್ಭ ಪೊನ್ನಂಪೇಟೆ ತಾಲೂಕು ಆರ್ಎಸ್ಎಸ್ ಕಾರ್ಯವಾಹ ಕಿರಣ್, ಗ್ರಾ.ಪಂ. ಸದಸ್ಯರಾದ ಅಡ್ಡಂಡ ನಿಲನ್, ಮಚ್ಚಮಾಡ ಡಿ. ವಿಮಲ ಸೇರಿದಂತೆ ಇನ್ನಿತರ ಪ್ರಮುಖರು ಇದ್ದರು.ಚೆಯ್ಯಂಡಾಣೆ: ಸ್ಥಳೀಯ ನರಿಯಂದಡ ಭಗವತಿ ದೇವಸ್ಥಾನದಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಜರುಗಿದವು.
ಬೆಳಿಗ್ಗೆ ೯ ಗಂಟೆಗೆ ಪ್ರಾರ್ಥನೆಯೊಂದಿಗೆ ಸತ್ಯನಾರಾಯಣ ಪೂಜೆ, ವಿಷ್ಣು ಶಾಸ್ತನಾಮ, ನಾರಾಯಣ ಸೂಕ್ತ ಪಾರಾಯಣ, ಪುರುಷಸೂಕ್ತ ಪಾರಾಯಣವÀನ್ನು ವೇದ ಮೂರ್ತಿ ನರಸಿಂಹ ಭಟ್ ನಡೆಸಿಕೊಟ್ಟರು.
ನಂತರ ಮಹಾ ಪೂಜೆ, ಭಜನೆ ಹಾಗೂ ಅಯೋಧ್ಯೆಯಲ್ಲಿನ ಪ್ರತಿಷ್ಠಾನ ಸಮಯದಲ್ಲಿ ಮಂಗಳವಾದ್ಯ, ಶಂಖ, ಜಗಟೆ, ವಾದ್ಯದೊಂದಿಗೆ ನೇರ ಪ್ರಸಾರ ವೀಕ್ಷಣೆ ಮಾಡಲಾಯಿತು.
ಪೂಜಾ ಕಾರ್ಯಕ್ರಮದ ನೇತೃತ್ವವನ್ನು ಅರ್ಚಕರಾದ ಶಿವ ಶರ್ಮ ವಹಿಸಿದ್ದರು. ಈ ಸಂದರ್ಭ ಭಗವತಿ ದೇವಸ್ಥಾನದ ಅಧ್ಯಕ್ಷ ಬಟ್ಟಿಯಂಡ ಜಯರಾಂ, ಉಪಾಧ್ಯಕ್ಷ ಛಾಯಾ ಪ್ರಕಾಶ್, ಕಾರ್ಯದರ್ಶಿ ಮಕ್ಕಿಮನೆ ಸುಧೀರ್, ಸಹ ಕಾರ್ಯದರ್ಶಿ ಮುಂಡ್ಯೋಳAಡ ದಿನು ಚಂಗಪ್ಪ, ಪ್ರಮುಖರಾದ ಕುಕ್ಕೆಮನೆ ನಾರಾಯಣ ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.