ಸೋಮವಾರಪೇಟೆ, ಜ. ೨೬: ಯುವ ಜನಾಂಗ ಈ ದೇಶದ ಭವಿಷ್ಯ. ಯುವ ಶಕ್ತಿ ಜಾಗೃತವಿದ್ದರೆ ಮಾತ್ರ ಭಾರತ ಬಲಿಷ್ಠವಾಗಿ ಉಳಿಯಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಪ್ರತಿಯೋರ್ವರೂ ಜವಾಬ್ದಾರಿ ಅರಿತು ದೇಶಕ್ಕಾಗಿ ಬಾಳಬೇಕೆಂದು ತಾಲೂಕು ತಹಶೀಲ್ದಾರ್ ಎಸ್.ಎನ್. ನರಗುಂದ್ ಕರೆ ನೀಡಿದರು.
ತಾಲೂಕು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತದ ವತಿಯಿಂದ ಸ್ಥಳೀಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ೭೫ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ನಂತರ ನಡೆದ ಸಮಾರಂಭದಲ್ಲಿ ಗಣರಾಜ್ಯೋತ್ಸವದ ಸಂದೇಶ ನೀಡಿದ ನರಗುಂದ್ ಅವರು, ಯುವ ಜನಾಂಗದ ಮೇಲೆ ನಿರೀಕ್ಷೆ ಹೆಚ್ಚಿದ್ದು, ಯುವ ಶಕ್ತಿ-ದೇಶದ ಶಕ್ತಿಯಾಗಿದೆ ಎಂದು ಬಣ್ಣಿಸಿದರು.
ದೇಶ ಸೇವೆಯೇ ಈಶ ಸೇವೆ ಎಂಬುದನ್ನು ಮನಗಾಣಬೇಕು. ಗಣರಾಜ್ಯೋತ್ಸವದ ಅಮೃತ ಘಳಿಗೆಯಲ್ಲಿ ದೇಶಕ್ಕಾಗಿ ಜೀವನ ಸವೆಸಿದ ಮಹನೀಯರನ್ನು ಸ್ಮರಿಸಬೇಕು ಎಂದರು. ಭಾರತದ ಇತಿಹಾಸ ಮೊದಲು ತಿಳಿಯಬೇಕು. ಘಟನಾವಳಿಗಳ ಮೇಲೆ ಬೆಳಕು ಚೆಲ್ಲಬೇಕು. ಯುವ ಜನಾಂಗಕ್ಕೆ ಇತಿಹಾಸದ ಅರಿವು ಮೂಡಿಸಬೇಕು ಎಂದು ಹೇಳಿದರು.
ಭಾಷಾವಾರು ರಾಜ್ಯಗಳ ವಿಂಗಡಣೆ ಎಂಬ ಕಲ್ಪನೆಯಿಂದ ಜನತೆ ಹೊರಬರಬೇಕು. ಏಕೀಕರಣ ದೇಶದಲ್ಲಿ ಪ್ರಜಾಪ್ರಭುತ್ವದ ಮೂಲವೇ ಸಂವಿಧಾನ ಎಂಬುದನ್ನು ಮನಗಾಣಬೇಕು. ಹಲವಷ್ಟು ಸವಾಲುಗಳ ನಡುವೆಯೂ ಪ್ರಪಂಚಕ್ಕೆ ಮಾದರಿಯಾದ ಸಂವಿಧಾನ ಭಾರತದಲ್ಲಿದೆ. ಇದು ಪರಿಪೂರ್ಣ ಮತ್ತು ಸಮತೋಲಿತವಾಗಿದೆ. ಸಮಾನ ಹಕ್ಕುಗಳಿಗೆ ಅವಕಾಶ ಕಲ್ಪಿಸಿದೆ. ಭ್ರಾತೃತ್ವ, ನ್ಯಾಯ, ಸಮಾನತೆ, ಹಕ್ಕುಗಳು ಪ್ರಜಾಪ್ರಭುತ್ವದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ ಎಂದು ಬಣ್ಣಿಸಿದರು.
ಮುಖ್ಯ ಭಾಷಣಕಾರರಾಗಿ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿಯ ಸದಸ್ಯ, ವಕೀಲ ಬಿ.ಈ. ಜಯೇಂದ್ರ ಮಾತನಾಡಿದರು. ವೇದಿಕೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ಚೌಡ್ಲು ಗ್ರಾ.ಪಂ. ಅಧ್ಯಕ್ಷೆ ಸಿ.ಎಸ್. ಗೀತಾ, ಉಪಾಧ್ಯಕ್ಷ ನತೀಶ್ ಮಂದಣ್ಣ, ಸಮಿತಿ ಸದಸ್ಯರಾದ ಹೆಚ್.ಸಿ. ನಾಗೇಶ್, ಎನ್.ಎನ್. ರಮೇಶ್, ಕವನ್ ಕಾರ್ಯಪ್ಪ, ಚಂದ್ರಿಕಾ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರದೀಪ್, ಪ.ಪಂ. ಸದಸ್ಯೆ ಮೋಹಿನಿ, ಕಸಾಪ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ನಿವೃತ್ತ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಹಾಲೇಬೇಲೂರು ನಿರ್ವಾಣಿ ಶೆಟ್ಟಿ, ಶಿಕ್ಷಣ ಇಲಾಖೆಯ ಗೋವಿಂದೇಗೌಡ, ಪ್ರಾಂಶುಪಾಲ ಬೆಳ್ಳಿಯಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಆಕರ್ಷಕ ಪಥ ಸಂಚಲನ
ಗಣರಾಜ್ಯೋತ್ಸವ ಅಂಗವಾಗಿ ಪೆರೇಡ್ ಕಮಾಂಡೆAಟ್, ಎ.ಎಸ್.ಐ. ಪೊನ್ನಪ್ಪ ಅವರ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ಮತ್ತು ರಾಷ್ಟç ಧ್ವಜಕ್ಕೆ ಗೌರವ ವಂದನೆ ನಡೆಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳ ತಂಡ, ಸಿ.ಕೆ. ಆರ್ಮಿ ಟ್ರೆöÊನಿಂಗ್ ಅಕಾಡೆಮಿಯ ವಿದ್ಯಾರ್ಥಿಗಳು, ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು, ಮಾಜೀ ಸೈನಿಕರು, ಪೊಲೀಸ್ ಸಿಬ್ಬಂದಿಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದರು.