ಸಿದ್ದಾಪುರ, ಜ. ೨೫: ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘಟ್ಟದಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ನಲಿಕಲಿ ಕೊಠಡಿಯನ್ನು ಸ್ಥಳೀಯ ಬೆಳೆಗಾರ ಕೀತಿಯಂಡ ವಿವೇಕ್ ಉದ್ಘಾಟಿಸಿದರು.
ಚೆನ್ನಯ್ಯನಕೋಟೆ ಕ್ಲಸ್ಟರ್ ಅಧಿಕಾರಿ ಕೇಶವಮೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಘಟ್ಟದಳ್ಳ ಶಾಲೆಯಲ್ಲಿ ನಲಿಕಲಿ ಕೊಠಡಿಯನ್ನ ಪ್ರಾರಂಭಿಸಲಾಗಿದ್ದು ನಲಿ ಕಲಿಯೊಂದಿಗೆ ಮಕ್ಕಳು ಉನ್ನತ ಶಿಕ್ಷಣದ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬಂದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಕ್ಲಸ್ಟರ್ ಮತ್ತು ನಲಿ ಕಲಿ ಸಂಪನ್ಮೂಲ ವ್ಯಕ್ತಿ ಕೆ.ಕೆ. ಸುಶಾ ಮಾತನಾಡಿ, ನಲಿ-ಕಲಿ ವಿಧಾನವು ಮಕ್ಕಳಿಗೆ ಸಂತಸದಾಯಕ ಹಾಗೂ ಚಟುವಟಿಕೆ ಆಧಾರಿತ ಕಲಿಕಾ ವಿಧಾನವಾಗಿದ್ದು, ಸ್ವ-ಕಲಿಕೆ ಹಾಗೂ ಸ್ವ-ವೇಗದ ಕಲಿಕೆಗೆ ಸಹಾಯಕವಾಗಿರುತ್ತದೆ
ಶಾಲಾ ಮುಖ್ಯ ಶಿಕ್ಷಕ ಅಶ್ರಫ್ ಮಾತನಾಡಿ ಇಲಾಖೆಯ ನಿರ್ದೇಶನದಂತೆ ಶಾಲಾ ಕೊಠಡಿಯಲ್ಲಿ ನಲಿಕಲಿ ಪ್ರಾರಂಭಿಸಲಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಈ ಸಂದರ್ಭ ಸ್ಥಳೀಯರಾದ ದಂಬೆಕೋಡಿ ಉಮೇಶ್, ಚೆನ್ನಯ್ಯನ ಕೋಟೆ ಶಾಲೆಯ ಮುಖ್ಯ ಶಿಕ್ಷಕಿ ರಾಜಮ್ಮ, ಹುಂಡಿ ಶಾಲೆಯ ಮುಖ್ಯ ಶಿಕ್ಷಕಿ ಶೈಲ, ತಾಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯ್ ಕುಮಾರ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಸಿದ್ದಯ್ಯ, ಅಂಬೇಡ್ಕರ್ ಸೇನೆ ಜಿಲ್ಲಾ ಅಧ್ಯಕ್ಷ ಸತೀಶ್, ಶಿಕ್ಷಕರಾದ ಶಕುಂತಲಾ, ಸೋನಿ, ಅಂಗನವಾಡಿ ಶಿಕ್ಷಕಿ ಆಶಾ, ಕಲಾವಿದ ಬಾವ ಮಾಲ್ದಾರೆ ಸೇರಿದಂತೆ ಮತ್ತಿತರರು ಹಾಜರಿದ್ದರು.