ಪೊನ್ನಂಪೇಟೆ, ಜ. ೨೨: ಕೊಟ್ಟಮುಡಿ ಝೆಡ್.ವೈ.ಸಿ. ತಂಡವು ೧೫ನೇ ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿಯ ಚಾಂಪಿಯನ್ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡಿತು. ಕಳೆದ ಬಾರಿಯ ಚಾಂಪಿಯನ್ ಗುಂಡಿಕೆರೆ ತಂಡ ಕೇವಲ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ವೀರಾಜಪೇಟೆಯ ತಾಲೂಕು ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ಆಯೋಜನೆಗೊಂಡಿದ್ದ ೧೫ನೇ ವರ್ಷದ ಜಿಲ್ಲಾ ಮಟ್ಟದ ಜಮಾಅತ್ ವಾರು ಹೊನಲು ಬೆಳಕಿನ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿ-೨೦೨೪ರ ಫೈನಲ್‌ನಲ್ಲಿ ಕೊಟ್ಟಮುಡಿ ಝೆಡ್.ವೈ.ಸಿ. ತಂಡ ಗುಂಡಿಕೆರೆ ತಂಡವನ್ನು ೨೫-೧೮ ಮತ್ತು ೨೫-೧೫ ಅಂಕಗಳಿAದ ಮಣಿಸಿ ವಿಜಯದ ನಗೆ ಬೀರಿತು.

ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್‌ನಲ್ಲಿ ಗುಂಡಿಗೆರೆ 'ಎ' ತಂಡ ನಾಪೋಕ್ಲು 'ಎ' ತಂಡವನ್ನು ನೇರ ಎರಡು ಸೆಟ್ಟುಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದರೆ, ೨ನೇ ಸೆಮಿಫೈನಲ್‌ನಲ್ಲಿ ಕೊಟ್ಟಮುಡಿ ಝೆಡ್. ವೈ. ಸಿ. ತಂಡ ಕರಿಕೆ ‘ಎ’ ತಂಡವನ್ನು ಪರಾಭವಗೊಳಿಸಿ ಅಂತಿಮ ಹಂತಕ್ಕೆ ಅರ್ಹತೆ ಪಡೆದುಕೊಂಡಿತು.

ಪAದ್ಯಾವಳಿಯ ಬೆಸ್ಟ್ ಆಲ್ರೌಂಡರ್ ಪ್ರಶಸ್ತಿಯನ್ನು ಕೊಟ್ಟಮುಡಿ ಝೆಡ್. ವೈ. ಸಿ. ತಂಡದ ಸುಹೇಲ್ ಪಡೆದುಕೊಂಡರೆ, ಬೆಸ್ಟ್ ಡಿಫೆನ್ಸ್ ಪ್ರಶಸ್ತಿಯನ್ನು ಅದೇ ತಂಡದ ಇರ್ಷಾದ್ ಪಡೆದುಕೊಂಡರು. ಬೆಸ್ಟ್ ಬ್ಲಾಕರ್ ಪ್ರಶಸ್ತಿಯನ್ನು ಕೊಟ್ಟಮುಡಿ ಝೆಡ್. ವೈ. ಸಿ. ತಂಡದ ಬಾಸಿತ್ ಪಡೆದುಕೊಂಡರೆ, ಬೆಸ್ಟ್ ಅಟ್ಯಾಕರ್ ಪ್ರಶಸ್ತಿಯನ್ನು ಗುಂಡಿಕೆರೆ ತಂಡದ ಬದ್ರುದ್ದೀನ್ ಪಡೆದುಕೊಂಡರು. ಪಂದ್ಯಾವಳಿಯ ಬೆಸ್ಟ್ ಪಾಸರ್ ಪ್ರಶಸ್ತಿ ಗುಂಡಿಕೆರೆ ತಂಡದ ಗಪೂರ್ ಅವರ ಪಾಲಾಯಿತು. ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಸಹೋದರತೆ ಮತ್ತು ಸಾಮರಸ್ಯದ ಮೂಲಕ ಸಮಾಜದ ಸ್ವಾಸ್ಥö್ಯ ಕಾಪಾಡುವಲ್ಲಿ ಕ್ರೀಡೆಗಳು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಆದರಿಂದ ಯಾವುದೇ ಕಾರಣಕ್ಕೂ ಕ್ರೀಡೆಯನ್ನು ಲಘುವಾಗಿ ಪರಿಗಣಿಸಬಾರದು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷರಾದ ಪಿ.ಎ. ಹನೀಫ್ ಮಾತನಾಡಿ, ಕಳೆದ ೧೪ ವರ್ಷಗಳಿಂದ ಆಯೋಜಿಸಿಕೊಂಡು ಬರುತ್ತಿರುವ ಕೊಡಗು ಜಿಲ್ಲಾ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿಗೆ ಸರ್ಕಾರದ ಅನುದಾನದ ಅಗತ್ಯವಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ವೀರಾಜಪೇಟೆ ಪುರಸಭಾ ಸದಸ್ಯರಾದ ದೇಚಮ್ಮ ಕಾಳಪ್ಪ, ಎಚ್.ಎಸ್. ಮತೀನ್ ಮೊಹಮ್ಮದ್ ರಾಫಿ, ಅಬ್ದುಲ್ ಜಲೀಲ್ ವಿವಿಧ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹೆಚ್. ಎ.ಹಂಸ, ಎಂ.ಎ. ಇಸ್ಮಾಯಿಲ್, ಮೀದೇರಿರ ನವೀನ್, ಪ್ರಮುಖರಾದ ಲತೀಫ್ ಸುಂಟಿಕೊಪ್ಪ, ಕೆ.ಎಂ. ಸಯ್ಯದ್ ಭಾವ, ಆಲೀರ ರಶೀದ್, ಕೆ. ಡಿ. ಎಂ. ಎಸ್. ಸಿ. ಎ. ಮಾಜಿ ಅಧ್ಯಕ್ಷರಾದ ಅಬ್ದುಲ್ ರೆಹಮಾನ್, ಪದಾಧಿಕಾರಿಗಳಾದ ಕರೀಂ ಕಡಂಗ, ಎಡಪಾಲ ಹಂಸು, ಕೋಳುಮಂಡ ರಫೀಕ್, ಇತರರು ಉಪಸ್ಥಿತರಿದ್ದರು.

ವಿಶೇಷ ಚೇತನರ ರಾಷ್ಟçಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದ ಸಿದ್ದಾಪುರ ಸಮೀಪದ ಅರೆಕಾಡುವಿನ ಹಸನ್ ಮತ್ತು ತಮ್ಮ ಸೇವಾ ಬದ್ಧತೆ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿರುವ ವೀರಾಜಪೇಟೆ ಪುರಸಭೆಯ ಪೌರಕಾರ್ಮಿಕ ಮಹಿಳೆ ಗೌರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೆ.ಡಿ.ಎಂ.ಎಸ್.ಸಿ.ಎ. ಪ್ರಧಾನ ಕಾರ್ಯದರ್ಶಿ ಎಂ.ಎA. ಇಸ್ಮಾಯಿಲ್ ಸ್ವಾಗತಿಸಿದರು. ಪ್ರಮುಖರಾದ ಅಬ್ದುಲ್ ರಹಿಮಾನ್ (ಅಂದಾಯಿ) ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಆಸಿಫ್ ಪಂದ್ಯಾವಳಿಯ ವೀಕ್ಷಕ ವಿವರಣೆ ನೀಡಿದರು. - ರಫೀಕ್ ತೂಚಮಕೇರಿ