ಮಡಿಕೇರಿ, ಜ. ೨೨: ೫೦೦ ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಬಾಲರಾಮ ದೇವರಿಗೆ ಪ್ರಾಣಪ್ರತಿಷ್ಠಾಪನೆಯ ಸುದಿನವನ್ನು ಜಿಲ್ಲೆಯಲ್ಲಿ ಸಂಭ್ರಮದಿAದ ಆಚರಿಸಲಾಯಿತು. ಜಿಲ್ಲೆಯಾದ್ಯಂತ ಶ್ರೀರಾಮನನ್ನು ಸ್ಮರಿಸಿದ ಭಕ್ತಗಣ ಪ್ರಾಣಪ್ರತಿಷ್ಠಾಪನೆಯ ಐತಿಹಾಸಿಕ ಕ್ಷಣವನ್ನು ನೇರಪ್ರಸಾರದಲ್ಲಿ ವೀಕ್ಷಿಸಿ ಪುಳಕಿತರಾದರು.
ಶತ-ಶತಮಾನಗಳ ಕನಸು ಸಾಕಾರಗೊಂಡಿದ್ದು, ಅಯೋಧ್ಯೆರಾಮ ವಿರಾಜಮಾನವಾಗುವ ಕ್ಷಣ ದೇಶಾದ್ಯಂತ ಸಂಚಲನ ಮೂಡಿಸಿತು. ಎಂದೆAದೂ ಕಾಣದ ಉತ್ಸಾಹ, ಸಂತೃಪ್ತಿ ಭಾವ ಈ ರಾಮೋತ್ಸವದ ಮೂಲಕ ಕಂಡುಬAತು.
ಕೊಡಗು ಜಿಲ್ಲೆಯ ಮನೆಮನಗಳಲ್ಲಿ ರಾಮೋತ್ಸವ ಸಂಭ್ರಮಕ್ಕೆ ಕಾರಣವಾಯಿತು. ದೇವಾಲಯ, ಊರು-ಕೇರಿಗಳು ಕೇಸರಿ ತೋರಣ, ಶ್ರೀರಾಮನ ಬೃಹತ್ ಕಲಾಕೃತಿ, ಭಾವಚಿತ್ರಗಳಿಂದ ಕಂಗೊಳಿಸುತಿತ್ತು. ಆಯೋಧ್ಯೆಯಲ್ಲಿ ರಾಮಲಲ್ಲ (ಬಾಲರಾಮ) ನಿಗೆ ಪ್ರಾಣಪ್ರತಿಷ್ಠೆ ಸಂದರ್ಭ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಭಜನಾ ತಂಡಗಳು ಶ್ರೀರಾಮನನ್ನು ಸ್ತುತಿಸಿದವು. ಭಕ್ತಸಾಗರ ದೇವಾಲಯಕ್ಕೆ ಆಗಮಿಸಿ ಪೂಜೆಗಳಲ್ಲಿ ಪಾಲ್ಗೊಂಡು ಅಯೋಧ್ಯೆಗೆ ಮರುಪ್ರವೇಶಿಸುವ ರಾಮನಿಗೆ ಇಲ್ಲಿಂದಲೇ ಕೈಮುಗಿದು ಪ್ರಾರ್ಥಿಸಿದರು. ರಾಮೋತ್ಸವದ ಸವಿಘಳಿಗೆಯಲ್ಲಿ ಪಾನಕ, ಪ್ರಸಾದ ವಿತರಿಸಿದ್ದಲ್ಲದೆ ಅನ್ನಸಂತರ್ಪಣೆ ಮೂಲಕ ತಮ್ಮ ಭಕ್ತಿ ತೋರಿದರು. ಮನೆಗಳಲ್ಲಿಯೂ ರಾಮನಿಗೆ ಪೂಜೆ ಸಲ್ಲಿಸಿ, ಅಯೋಧ್ಯೆ ಮಂತ್ರಾಕ್ಷತೆಯನ್ನು ಅರ್ಪಿಸಲಾಯಿತು.
ಬ್ಯಾನರ್, ಬಂಟಿAಗ್ಸ್, ತೋರಣಗಳಿಂದ ಜಿಲ್ಲೆ ಕೇಸರಿಮಯವಾಗಿತ್ತು. ಎಲ್ಲೆಲ್ಲೂ ‘ಜೈ ಶ್ರೀರಾಮ’ ಜಯಘೋಷ ಮೊಳಗಿತು. ಆಟೋ, ಬಸ್, ಕಾರು, ಬೈಕ್ ಸೇರಿದಂತೆ ಎಲ್ಲಾ ರೀತಿಯ ವಾಹನಗಳಲ್ಲಿಯೂ ಕೇಸರಿ ಧ್ವಜ ರಾರಾಜಿಸುತಿತ್ತು. ಖಾಸಗಿ ಬಸ್ಗಳಲ್ಲಿ ದಿನನಿತ್ಯ ರಾಮನ ೩ಆರನೇ ಪುಟಕ್ಕೆ
(ಮೊದಲ ಪುಟದಿಂದ) ಹಾಡುಗಳು ಪ್ರತಿಧ್ವನಿಸಿದವು. ಬೃಹತ್ ಎಲ್.ಇ.ಡಿ. ಪರದೆಯ ಮೂಲಕ ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆಯ ಐತಿಹಾಸಿಕ ಕ್ಷಣವನ್ನು ಭಕ್ತಗಣ ಕಣ್ತುಂಬಿಕೊAಡು ಭಾವಪರವಶರಾದರು.
ಇದೇ ಸಂದರ್ಭ ಅಯೋಧ್ಯೆಯಲ್ಲಿ ಕರಸೇವೆಯಲ್ಲಿ ಪಾಲ್ಗೊಂಡವರನ್ನು ವಿವಿಧೆಡೆ ಸನ್ಮಾನಿಸಿ ಗೌರವಿಸಲಾಯಿತು.
ಮಡಿಕೇರಿ ‘ರಾಮಮಯಂ’
ಜಿಲ್ಲಾ ಕೇಂದ್ರ ಮಡಿಕೇರಿ ಸಂಪೂರ್ಣ ರಾಮಮಯವಾಗಿತ್ತು. ಎಲ್ಲಿ ನೋಡಿದರೂ ಕೇಸರಿ ಬಣ್ಣ ಕಂಗೊಳಿಸುತ್ತಿದ್ದರೆ, ಜೈಶ್ರೀರಾಮ್ ಘೋಷಣೆಯ ಮೂಲಕ ಭಕ್ತಿಯ ಅನಾವರಣವಾಯಿತು. ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಹಲವು ದೇವಾಲಯಗಳಲ್ಲಿ ಭಕ್ತಸಾಗರ ಕಂಡುಬAತು.
ನಗರದ ಅಂಜನೇಯ ಸನ್ನಿಧಿ ಆವರಣದಲ್ಲಿ ೨ ಸಾವಿರ ಭಕ್ತಾದಿಗಳು ರಾಮೋತ್ಸವದಲ್ಲಿ ಪಾಲ್ಗೊಂಡು ಮರ್ಯಾದ ಪುರುಷೋತ್ತಮನಿಗೆ ನಮಿಸಿದರು. ರಾಮತಾರಕ ಹೋಮ, ಮಹಾಮಂಗಳಾರತಿ ನಡೆಯಿತು. ವಿಶ್ವ ಹಿಂದೂ ಪರಿಷತ್ತು ಸೇರಿದಂತೆ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೃಹತ್ ಎಲ್.ಇ.ಡಿ. ಪರದೆ ಮೂಲಕ ಆಯೋಧ್ಯೆಯಲ್ಲಿ ನಡೆದ ಪ್ರಾಣಪ್ರತಿಷ್ಠಾಪನೆಯನ್ನು ವೀಕ್ಷಿಸಿದರು. ೨ ಸಾವಿರ ಭಕ್ತಾದಿಗಳಿಗೆ ಅನ್ನದಾನ ಮಾಡಲಾಯಿತು. ಜೊತೆಗೆ ಮಡಿಕೇರಿಯಿಂದ ೧೯೯೦-೯೨ರಲ್ಲಿ ಕರಸೇವೆಯಲ್ಲಿ ಪಾಲ್ಗೊಂಡವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಶ್ರೀರಾಮಾಂಜನೇಯ ಭಜನಾ ಮಂಡಳಿಯಿAದ ರಾಮಭಜನೆ ನಡೆಯಿತು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ತು ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ನಗರಸಭೆ ಅಧ್ಯಕೆÀ್ಷ ನೆರವಂಡ ಅನಿತಾ ಪೂವಯ್ಯ, ವೈದ್ಯ ಎಂ.ಜಿ. ಪಾಟ್ಕರ್, ವಿಶ್ವಹಿಂದೂ ಪರಿಷತ್, ಓಂಕಾರ್ ಯುವವೇದಿಕೆ ಪ್ರಮುಖರು, ನಗರಸಭಾ ಸದಸ್ಯರು ಹಾಜರಿದ್ದರು.
ಮಡಿಕೇರಿಯ ಮಲ್ಲಿಕಾರ್ಜುನ ನಗರದ ಕೋದಂಡರಾಮ ದೇವಾಲಯದಲ್ಲಿಯೂ ವಿಶೇಷ ಪೂಜೆಗಳ ಮೂಲಕ ರಾಮೋತ್ಸವ ಆಚರಣೆ ಮಾಡಲಾಯಿತು. ನಿತ್ಯಪೂಜೆಯ ಬಳಿಕ ಶ್ರೀ ವಿಷ್ಣು ಸಹಸ್ರ ನಾಮಾರ್ಚನೆ ನಡೆದು ಪ್ರಸಾದ ವಿತರಿಸಲಾಯಿತು. ನಂತರ ಅಯೋಧ್ಯೆಯಲ್ಲಿ ನಡೆದ ಪ್ರಾಣಪ್ರತಿಷ್ಠಾಪನೆಯ ನೇರಪ್ರಸಾರವನ್ನು ಭಕ್ತಾದಿಗಳು ವೀಕ್ಷಿಸಿದರು. ಮಹಿಳಾ ತಂಡದಿAದ ಭಜನೆ ನಡೆಯಿತು.
ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆದವು. ಪ್ರಾರ್ಥನೆ, ಮಹಾಸಂಕಲ್ಪ, ಗುರುಗಣಪತಿ ಪೂಜೆ, ಕಳಶ ಪ್ರತಿಷ್ಠಾಪನೆ, ಪೂರ್ವಕ, ಶ್ರೀಮಹಾವಿಷ್ಣು ಸಹಿತ ಶ್ರೀರಾಮಚಂದ್ರನಿಗೆ ಶೋಡ, ಶೋಡೋಪಚಾರ ಪೂಜೆ, ವಿಷ್ಣು ಸಹಸ್ರನಾಮ ಪಠಣ, ವಿಷ್ಣು ಸಹಸ್ರನಾಮ ಹೋಮ ನಡೆದು ಜಿ.ಟಿ. ರಾಘವೇಂದ್ರ ರಾವ್ ಅವರು ಧಾರ್ಮಿಕ ಪ್ರವಚನ ನೀಡಿದರು. ಪ್ರಸಾದ ವಿನಿಯೋಗ ನಡೆದು ಶ್ರೀನಿವಾಸ ಕಲ್ಯಾಣ, ದೀಪಾರಾಧನೆ, ಮಹಾಪೂಜೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಮಡಿಕೇರಿಯ ಶ್ರೀವಿಜಯ ವಿನಾಯಕ ದೇವಾಲಯದಲ್ಲಿ ಶ್ರೀರಾಮನಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ವಿಜಯ ವಿನಾಯಕ ಮಹಿಳಾ ಮಂಡಳಿಯಿAದ ಭಜನಾ ಕಾರ್ಯಕ್ರಮ ಹಾಗೂ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.
ದೇಚೂರು ಶ್ರೀರಾಮ ವಿದ್ಯಾಗಣಪತಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಿತು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಕಾಲೇಜು ರಸ್ತೆಯ ಪೇಟೆ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ, ಭಜನೆ ನಡೆಯಿತು. ಕನ್ನಂಡಬಾಣೆಯ ಶ್ರೀದೃಷ್ಠಿ ಗಣಪತಿ ದೇಗುಲದಲ್ಲಿ ಗಣ ಹೋಮ, ಭಜನೆ, ಕರಸೇವಕರಿಗೆ ಸನ್ಮಾನ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ನೇರಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ನಗರದ ಸುದರ್ಶನ ಬಡಾವಣೆಯ ಮುನೀಶ್ವರ ದೇವಾಲಯದಲ್ಲಿಯೂ ಹಲವು ವಿಶೇಷ ಕಾರ್ಯಕ್ರಮ ನೆÀರವೇರಿತು. ಪೂಜಾ ಕೈಂಕರ್ಯ ಬಳಿಕ ಭಕ್ತರಿಗೆ ಪ್ರಸಾದ ವಿತರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಮೆರವಣಿಗೆ ಮೂಲಕ ಆಂಜನೇಯ ದೇವಾಲಯಕ್ಕೆ ತೆರಳಿದರು. ಅಪರಾಹ್ನವೂ ವಿಶೇಷ ಪೂಜೆ, ಸಂಜೆ ಮಹಾಮಂಗಳಾರತಿ ನಡೆದು ರಾಮಮಂದಿರ ಕರಸೇವೆಯಲ್ಲಿ ಪಾಲ್ಗೊಂಡಿದ್ದ ಬಡಾವಣೆಯ ಕರಸೇವಕರಿಗೆ ಸನ್ಮಾನ ಮಾಡಲಾಯಿತು. ಬಳಿಕ ಪುಟಾಣಿ ಮಕ್ಕಳಿಗೆ ಛದ್ಮವೇಷ, ಭಕ್ತಿಗೀತೆ ಗಾಯನ ಸ್ಪರ್ಧೆ ನಡೆದು ರಾತ್ರಿ ಅನ್ನದಾನ ನಡೆಸಲಾಯಿತು.
ನಗರದ ಅಜ್ಜಮಾಡ ದೇವಯ್ಯ ವೃತ್ತದ ಬಳಿ ಶಮಂತ್ ಕ್ಯಾಟರಿಂಗ್ ವತಿಯಿಂದ ಕಾರು, ಆಟೋ ಚಾಲಕ, ಮಾಲೀಕರ ಸಹಕಾರದೊಂದಿಗೆ ೪ ಸಾವಿರ ಜನರಿಗೆ ಅನ್ನದಾನ ಮಾಡಲಾಯಿತು. ಇಸ್ಕಾನ್ ಮಂದಿರದ ಭಕ್ತರಿಂದ ಸಾಮೂಹಿಕ ಭಜನೆ ಮೂಲಕ ರಾಮನ ಸ್ಮರಣೆ ಮಾಡಲಾಯಿತು. ಕಾನ್ವೆಂಟ್ ಜಂಕ್ಷನ್ನಲ್ಲಿ ಆಟೋ ಚಾಲಕರ ವತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.ಕಣಿವೆ : ಪುರಾಣ ಪ್ರಸಿದ್ಧ ಶ್ರೀರಾಮಲಿಂಗೇಶ್ವರ ದೇವಾಲಯದಲ್ಲಿ ಅಯೋಧ್ಯೆಯ ಪೂಜಾ ಸಂಭ್ರಮದ ಹಿನ್ನೆಲೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ಸಾಕ್ಷಾತ್ ಶ್ರೀರಾಮನೇ ಶಿವಲಿಂಗ ಪ್ರತಿಷ್ಠಾಪನೆ ಮಾಡಿರುವ ಬಗ್ಗೆ ಐತಿಹ್ಯಗಳಿರುವ ಸನ್ನಿಧಿಯಲ್ಲಿನ ಶಿವಲಿಂಗಕ್ಕೆ ಕಾವೇರಿ ನದಿಯ ಪವಿತ್ರ ಜಲದಿಂದ ಅಭಿಷೇಕಗಳು ನೆರವೇರಿದವು.
ಬಳಿಕ ಮಧ್ಯಾಹ್ನ ಬಗೆಬಗೆಯ ಪುಷ್ಪಾಲಂಕೃತ ದೇವತಾ ಮೂರ್ತಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು.
ಅಯೋಧ್ಯೆಯ ಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ದೇವಾಲಯದ ಹೊರ ಆವರಣವನ್ನು ಸಂಪೂರ್ಣವಾಗಿ ಕೇಸರಿಮಯಗೊಳಿಸಲಾಗಿತ್ತು.
ದೇವಾಲಯಕ್ಕೆ ನೆರೆಯ ಮೈಸೂರು ಜಿಲ್ಲೆಯ ಕಾವೇರಿ ನದಿಯಂಚಿನ ಗಡಿಗ್ರಾಮಗಳ ನೂರಾರು ಭಕ್ತರು ತೂಗುಸೇತುವೆ ಮಾರ್ಗದಲ್ಲಿ ಧಾವಿಸಿ ಶ್ರೀರಾಮಲಿಂಗೇಶ್ವರ ಕೃಪೆಗೆ ಪಾತ್ರರಾದರು.
ಕಣಿವೆ ಸುತ್ತಲಿನ ಕೂಡಿಗೆ, ಭುವನಗಿರಿ, ಸೀಗೆಹೊಸೂರು, ಮರೂರು, ಹುಲುಸೆ, ಹೆಬ್ಬಾಲೆ ಗ್ರಾಮಗಳ ಸಹಸ್ರಾರು ಮಂದಿ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.
ದೇವಾಲಯ ಸಮಿತಿ ವತಿಯಿಂದ ಮಧ್ಯಾಹ್ನ ಪಾನಕ, ಅನ್ನದಾನ ನಡೆಯಿತು.
ದೇವಾಲಯ ಸಮಿತಿಯ ವತಿಯಿಂದ ದೇವಾಲಯದ ಹೊರ ಆವರಣದಲ್ಲಿ ಬೃಹತ್ ಎಲ್ ಇ ಡಿ ಪರದೆಯ ಮೇಲೆ ಅಯೋಧ್ಯೆಯಲ್ಲಿ ಜರುಗಿದ ಶ್ರೀರಾಮನ ಪ್ರತಿಷ್ಠಾಪನಾ ಪೂಜಾ ಮಹೋತ್ಸವವನ್ನು ಭಕ್ತಾಧಿಗಳಿಗೆ ತೋರಿಸಲಾಯಿತು.
ಸೋಮವಾರ ಮುಸ್ಸಂಜೆ ಕೂಡಿಗೆಯಲ್ಲಿನ ಹನುಮಸೇವಾ ಸಮಿತಿಯ ಮಹಿಳಾ ಭಕ್ತರು ಕೈಯಲ್ಲಿ ದೀಪ ಹಿಡಿದು ಕಣಿವೆ ರಾಮಲಿಂಗೇಶ್ವರ ಸನ್ನಿಧಿಗೆ ಧಾವಿಸಿದರು. ಪುರುಷ ಭಕ್ತರು ಶ್ರೀರಾಮನ ಭಾವಚಿತ್ರಗಳಿದ್ದ ಬಾವುಟಗಳನ್ನು ಹಿಡಿದು ಚಂಡೇ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದು ದೇವರ ದರ್ಶನ ಪಡೆದರು. ದೇವಾಲಯ ಅಭಿವೃದ್ದಿ ಸಮಿತಿಯಿಂದ ರಾತ್ರಿಯೂ ಶ್ರೀ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿಯ ಬಳಿಕ ಲಾಡು ಪ್ರಸಾದ ಹಾಗೂ ಅನ್ನಸಂತರ್ಪಣೆ ನೆರವೇರಿಸಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್, ಕಾರ್ಯದರ್ಶಿ ಕೆ.ಎಸ್.ಮಾಧವ, ಉಪಾಧ್ಯಕ್ಷ ಮಂಜುನಾಥ ಸ್ವಾಮಿ, ಮಧು ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳಿದ್ದರು. ದೇವಾಲಯದ ಪ್ರಧಾನ ಅರ್ಚಕ ರಾಘವೇಂದ್ರ ಆಚಾರ್ ಪೂಜಾ ವಿಧಿಗಳನ್ನು ನಡೆಸಿಕೊಟ್ಟರು.ಕುಶಾಲನಗರ : ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಕುಶಾಲನಗರದ ಪಟ್ಟಣ ಹಾಗೂ ಸುತ್ತಮುತ್ತ ವ್ಯಾಪ್ತಿಯಲ್ಲಿ ಸಂಭ್ರಮದ ವಾತಾವರಣ ಕಂಡುಬAದಿತ್ತು.
ಪಟ್ಟಣ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ದೇವಾಲಯಗಳಲ್ಲಿ ಹೋಮ ಹವನ , ವಿಶೇಷ ಪೂಜಾ ಕಾರ್ಯಕ್ರಮಗಳು, ಕಾವೇರಿ ನದಿಗೆ ವಿಶೇಷ ಮಹಾ ಆರತಿ ಕಾರ್ಯಕ್ರಮ, ಕರಸೇವಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳು ಜರಗಿದವು.
ಪಟ್ಟಣದ ಗಣಪತಿ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಬೆಳಗ್ಗಿನಿಂದಲೇ ಹೋಮ ಮತ್ತಿತರ ಪೂಜಾ ಕಾರ್ಯಕ್ರಮಗಳು ನಡೆದವು.
ಬೆಳಿಗ್ಗೆ ಒಂಬತ್ತು ಗಂಟೆಗೆ ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ನದಿಗೆ ವಿವಿಧ ಧರ್ಮಗಳ ಗುರುಗಳ ಉಪಸ್ಥಿತಿಯಲ್ಲಿ ಸಾಮೂಹಿಕ ಆರತಿ ಕಾರ್ಯಕ್ರಮ ಜರುಗಿತು.
ಕುಶಾಲನಗರ ಪಟ್ಟಣದ ದೇವಾಲಯಗಳ ಅಧ್ಯಕ್ಷರುಗಳಿಗೆ ಗೌರವ ಸಲ್ಲಿಕೆ ಕಾರ್ಯಕ್ರಮ ನಡೆಯಿತು. ಗಣ್ಯರು ದಿನದ ಮಹತ್ವದ ಬಗ್ಗೆ ಸಂದೇಶ ನೀಡಿದರು. ಕುಶಾಲನಗರ ಕಾವೇರಿ ಮಹಾ ಆರತಿ ಬಳಗ ಆಶ್ರಯದಲ್ಲಿ ಕುಶಾಲನಗರ ದೇವಾಲಯಗಳ ಒಕ್ಕೂಟ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕಿರಿಕೊಡ್ಲಿ, ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಪ್ಪ ಭಾರತ ಮಾತಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಫಾ. ಅಭಿನ್ ಮತ್ತು ನೆರೆಯ ಬೈಲಕುಪ್ಪೆ ಕರ್ಮಫ ಟಿಬೇಟಿಯನ್ ದೇವಾಲಯದ ಗುರುಗಳು ಪಾಲ್ಗೊಂಡು ನದಿಗೆ ಸಾಮೂಹಿಕವಾಗಿ ಮಹಾ ಆರತಿ ಬೆಳಗಿದರು.
ಈ ಸಂದರ್ಭ ಕಾವೇರಿ ಆರತಿ ಬಳಗದ ಪದಾಧಿಕಾರಿಗಳು, ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ವಿವಿಧ ದೇವಾಲಯಗಳ ಆಡಳಿತ ಮಂಡಳಿ ಸದಸ್ಯರು, ಮಾಜಿ ಸೈನಿಕರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಭಜನಾ ಮಂಡಳಿ ಸದಸ್ಯರು ಇದ್ದರು.
ಕುಶಾಲನಗರ ಆಂಜನೇಯ ದೇವಾಲಯ ಆವರಣದಲ್ಲಿ ಅಯೋಧ್ಯೆಯಿಂದ ಪ್ರಸಾರವಾದ ನೇರ ಕಾರ್ಯಕ್ರಮದ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಮಠ ಶ್ರೀ ಮಹಾಂತ ಸ್ವಾಮೀಜಿ ಅಮ್ಮತ್ತಿ ಕನ್ನಡ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ೧೧ ಮಂದಿ ಕರಸೇವಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಕುಶಾಲನಗರ ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ ದಿನೇಶ್ ಮತ್ತು ವಿವಿಧ ದೇವಾಲಯಗಳ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರಮುಖರು ಇದ್ದರು. ಕಾರ್ಯಕ್ರಮದಲ್ಲಿ ಭಜನಾ ತಂಡದಿAದ ಭಜನೆ ಕೀರ್ತನೆ ನಡೆಯಿತು.
ಕುಶಾಲನಗರ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಜರಗಿತು. ಸುಮಾರು ೩ ಸಾವಿರಕ್ಕೂ ಅಧಿಕ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕುಶಾಲನಗರ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಕುಶಾಲನಗರ ಶ್ರೀ ಗಣಪತಿ ದೇವಾಲಯದಿಂದ ನೀಡಲಾದ ಲಡ್ಡು ಭಕ್ತಾದಿಗಳಿಗೆ ವಿತರಣೆ ಮಾಡಲಾಯಿತು.ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ ದಿನೇಶ್ ಮತ್ತು ವಿವಿಧ ದೇವಾಲಯಗಳ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರಮುಖರು ಇದ್ದರು. ಕಾರ್ಯಕ್ರಮದಲ್ಲಿ ಭಜನಾ ತಂಡದಿAದ ಭಜನೆ ಕೀರ್ತನೆ ನಡೆಯಿತು.
ಕುಶಾಲನಗರ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಜರಗಿತು. ಸುಮಾರು ೩ ಸಾವಿರಕ್ಕೂ ಅಧಿಕ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕುಶಾಲನಗರ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಕುಶಾಲನಗರ ಶ್ರೀ ಗಣಪತಿ ದೇವಾಲಯದಿಂದ ನೀಡಲಾದ ಲಡ್ಡು ಭಕ್ತಾದಿಗಳಿಗೆ ವಿತರಣೆ ಮಾಡಲಾಯಿತು.ಕುಶಾಲನಗರ, ಕೂಡಿಗೆ, ಕೂಡುಮಂಗಳೂರು ನೆರೆಯ ಕೊಪ್ಪ ಗ್ರಾಮಗಳಲ್ಲಿ ಅಯೋಧ್ಯೆಯಲ್ಲಿ ರಾಮಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತಗಳು ಮೀನು ಮಾಂಸ ಮಾರಾಟವನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಕುಶಾಲನಗರ ಪಟ್ಟಣದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ತಮ್ಮ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದ್ದವು.
ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಸಂಜೆ ವೇಳೆ ಕುಶಾಲನಗರ ಕೊಪ್ಪ ಗಡಿ ಭಾಗದ ಕಾವೇರಿ ನದಿ ಹಳೆಯ ಸೇತುವೆ ಮೇಲ್ಭಾಗದಲ್ಲಿ ದೀಪಾರಾಧನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಸೋಮವಾರಪೇಟೆ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಹಬ್ಬದ ಸಂಭ್ರಮ ಕಂಡುಬAತು.
ವಿವಿಧ ಹಿಂದೂಪರ ಸಂಘಟನೆ ಗಳ ಕಾರ್ಯಕರ್ತರು, ಶ್ರೀರಾಮ ಭಕ್ತರು, ದೇವಾಲಯ ಸಮಿತಿ ಪದಾಧಿಕಾರಿಗಳು ವಿಶೇಷ ಪೂಜೆಗಳನ್ನು ನೆರವೇರಿಸುವ ಮೂಲಕ ಶ್ರೀ ರಾಮ ಮಂದಿರ ಲೋಕಾರ್ಪಣೆಯನ್ನು ಸ್ಥಳೀಯವಾಗಿ ಆಚರಿಸಿದರು.
ಪಟ್ಟಣದ ಪ್ರಮುಖ ಜಂಕ್ಷನ್ಗಳಲ್ಲಿ ತಳಿರುತೋರಣ, ಕೇಸರಿ ಬಾವುಟ, ಬಂಟಿAಗ್ಸ್, ಬ್ಯಾನರ್ಗಳನ್ನು ಅಳವಡಿಸಿ ಶುಭಕೋರಲಾಯಿತು. ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಯಾಗುತ್ತಿದ್ದ ಸಂದರ್ಭ ಪಟ್ಟಣ ಸೇರಿದಂತೆ ಸುತ್ತಮುತ್ತಲ ದೇವಾಲಯ ಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಜೈ ಶ್ರೀ ರಾಮ್ ಘೋಷಣೆಗಳನ್ನು ಮೊಳಗಿಸಲಾಯಿತು.
ಪ್ರಮುಖವಾಗಿ ದೇವಾಲಯಗಳಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆಗಳು ನಡೆದವು. ಶ್ರೀರಾಮ ತಾರಕ ಹೋಮ ಸಹಿತ ದಿನದ ಅಂಗವಾಗಿ ವಿಶೇಷ ಪೂಜೆ ನಡೆಯಿತು. ಶ್ರೀರಾಮನ ಕುರಿತಾದ ಭಜನೆ, ಸಂಕೀರ್ತನೆಗಳಲ್ಲಿ ಭಕ್ತರು ಭಾಗವಹಿಸಿದ್ದರು.
ಇಲ್ಲಿನ ಕಕ್ಕೆಹೊಳೆ ಜಂಕ್ಷನ್ ಸಂಪೂರ್ಣ ಕೇಸರಿಮಯವಾಗಿತ್ತು. ಸ್ಥಳೀಯ ಶ್ರೀರಾಮ ಭಕ್ತರು ಬೃಹತ್ ಬ್ಯಾನರ್, ಕೇಸರಿ ಬಂಟಿAಗ್ಸ್, ತಳಿರು ತೋರಣ, ಬಾಳೆ ಕಂಬಗಳನ್ನು ಕಟ್ಟಿ ಕಕ್ಕೆಹೊಳೆ ಜಂಕ್ಷನನ್ನು ಸಿಂಗರಿಸಿದ್ದರು. ಬೃಹತ್ ಶ್ರೀರಾಮನ ಮೂರ್ತಿಯನ್ನು ಅಳವಡಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಶ್ರೀಆಂಜನೇಯ ದೇವಾಲಯ ದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆಗಳು ಅರ್ಚಕ ನಂಜುAಡೇಶ್ವರ ಭಟ್ ಅವರ ನೇತೃತ್ವದಲ್ಲಿ ನಡೆಯಿತು. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸಂಜೆ ಸಾರ್ವಜನಿಕ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು. ದೇವಾಲಯ ಸಮಿತಿಯ ಸೀತಾರಾಮ್, ನಂದಕುಮಾರ್, ರಾಘವ, ಬನ್ನಳ್ಳಿ ಗೋಪಾಲ್, ಉಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶ್ರೀರಾಮ ಮಂದಿರದಲ್ಲಿ ದಿನದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು, ಶ್ರೀರಾಮ ತಾರಕ ಹೋಮ, ಭಜನೆ ನೆರವೇರಿತು. ದೇವಾಲಯದ ಅರ್ಚಕ ಮೋಹನ್ ಮೂರ್ತಿ ಶಾಸ್ತಿçಗಳ ಪೌರೋಹಿತ್ಯದಲ್ಲಿ ವಿಶೇಷ ಅಲಂಕಾರ, ಸೇವೆಗಳು ನಡೆದವು. ಸೀತಾ ಬಳಗದ ಸದಸ್ಯೆಯರು ಭಜನೆಯಲ್ಲಿ ಭಾಗಿಯಾಗಿದ್ದರು.
ಶ್ರೀರಾಮ ಮಂದಿರದಲ್ಲಿ ಬೆಳಿಗ್ಗೆ ಶ್ರೀರಾಮ ತಾರಕ ಹೋಮ, ಅಭಿಷೇಕಾಧಿ ಸೇವೆಗಳು, ಅಷ್ಟೋತ್ತರ ನಡೆಯಿತು. ನಂತರ ಭಕ್ತಾದಿಗಳಿಂದ ಅಕ್ಷತಾರೋಹಣ, ರಾಜೋಪಚಾರ, ಶ್ರೀ ದೇವರಿಗೆ ಮಹಾಮಂಗಳಾರತಿ ನಂತರ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಮಾಜಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಪೂಜಾ ಕಾರ್ಯಗಳಲ್ಲಿ ಭಾಗಿಯಾಗಿದ್ದರು.
ಪೂಜಾ ಕಾರ್ಯದಲ್ಲಿ ಕುರುಹಿನ ಶೆಟ್ಟಿ ಸಮಾಜದ ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಯುವಕ ಸಂಘದ ಅಧ್ಯಕ್ಷ ಬಿ.ಜಿ. ರವಿ, ಸಲಹಾ ಸಮಿತಿ ಸದಸ್ಯ ಎನ್.ಎಂ. ರಮೇಶ್, ಸೀತಾ ಬಳಗದ ಅಧ್ಯಕ್ಷೆ ಯಶೋಧಾ ಪ್ರಶಾಂತ್ ಸೇರಿದಂತೆ ನೂರಾರು ಮಂದಿ ಭಾಗಿಯಾಗಿದ್ದರು.
ಇಲ್ಲಿನ ಶ್ರೀ ಸೋಮೇಶ್ವರ ಮತ್ತು ಬಸವೇಶ್ವರ ದೇವಾಲಯಗಳಲ್ಲಿ ದಿನದ ಅಂಗವಾಗಿ ವಿಶೇಷ ಪೂಜೆಗಳು ನಡೆದವು. ದೇವಾಲಯ ಸಮಿತಿಯ ಪ್ರಮುಖರಾದ ಬಿ.ಪಿ. ಶಿವಕುಮಾರ್, ಮೃತ್ಯುಂಜಯ, ಶ್ರೀನಿವಾಸ್ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.
ಅಬ್ಬೂರುಕಟ್ಟೆಯಲ್ಲಿ ನೇರಪ್ರಸಾರ -ಅನ್ನದಾನ: ಪಟ್ಟಣ ಸಮೀಪದ ಅಬ್ಬೂರುಕಟ್ಟೆ ಗ್ರಾಮದಲ್ಲಿ ನೇರುಗಳಲೆ ಗ್ರಾ.ಪಂ. ವ್ಯಾಪ್ತಿಗೊಳಪಡುವ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.
ಬಸ್ ನಿಲ್ದಾಣದ ಮುಂಭಾಗ ಎಲ್ಇಡಿ ಪರದೆಯನ್ನು ಅಳವಡಿಸಿ ಸಾರ್ವಜನಿಕರಿಗೆ ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ ಮತ್ತು ಪ್ರಾಣ ಪ್ರತಿಷ್ಠಾಪನೆಯ ನೇರ ದೃಶ್ಯಾವಳಿಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ ನೂರಾರು ಮಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಪ್ರಮುಖರಾದ ಪ್ರದೀಪ್, ಅರೆಯೂರು ಜಯಣ್ಣ, ಸಂಭ್ರಮ್, ತಿಮ್ಮಯ್ಯ, ಮಸಗೋಡು ಸುರೇಶ್, ಪಿ.ಡಿ. ಪ್ರಕಾಶ್ ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ಭಾಗವಹಿಸಿದ್ದರು.
ಇಲ್ಲಿನ ಶ್ರೀ ವಿದ್ಯಾ ಗಣಪತಿ ದೇವಾಲಯದಲ್ಲಿ ಅರ್ಚಕ ಚಂದ್ರಶೇಖರ್ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು. ಭಕ್ತರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು. ದೇವಾಲಯ ಸಮಿತಿಯ ಈಶ್ವರಚಂದ್ರ ಸಾಗರ್, ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಿಬ್ಬೆಟ್ಟ ಗ್ರಾಮದ ಶ್ರೀ ಬಸವೇಶ್ವರ ದೇವಾಲಯದಲ್ಲಿ ಗ್ರಾಮಸ್ಥರು ದಿನದ ಅಂಗವಾಗಿ ವಿಶೇಷ ಪೂಜೆ ನೆರವೇರಿಸಿದರು. ಪೂಜೆಯ ನಂತರ ಸಾಮೂಹಿಕ ಪ್ರಾರ್ಥನೆ ಹಾಗೂ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.
ತಾಲೂಕಿನ ಸಿದ್ದಲಿಂಗಪುರ ಅರಸಿನಕುಪ್ಪೆ ಗ್ರಾಮದಲ್ಲಿರುವ ಶ್ರೀ ಮಂಜುನಾಥ್ ಸ್ವಾಮಿ ಮತ್ತು ನವನಾಗನಾಥ ಸನ್ನಿಧಿಯಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಅಂಗವಾಗಿ ವಿಶೇಷ ಪೂಜೆ, ಹೋಮ ಹವನಾದಿ ಪೂಜಾ ಕೈಂಕರ್ಯಗಳು ನಡೆದವು. ಪ್ರಧಾನ ಅರ್ಚಕ ಜಗದೀಶ್ ಉಡುಪ ಪೌರೋಹಿತ್ವದಲ್ಲಿ ಪೂಜೆಗಳು ನಡೆದವು. ಮಧ್ಯಾಹ್ನ ನೂರಾರು ಭಕ್ತಾದಿಗಳಿಗೆ ಅನ್ನದಾನ ನೆರವೇರಿತು.
ಹಿಂದೂಪರ ಸಂಘಟನೆಗಳಿAದ ಇಲ್ಲಿನ ಆಲೇಕ�