ಕಣಿವೆ, ಜ. ೨೨: ಐವತ್ತು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಬೃಹತ್ ಸಾಮಾಜಿಕ ಜಾಲತಾಣದ ಬರಹಗಾರರ ಸಂಘಟನೆ ‘ಕಥಾಗುಚ್ಛ’ ತಾ. ೨೧ ರಂದು ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಸ್ನೇಹಮಿಲನ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಕಥಾಗುಚ್ಛದ ಸಂಸ್ಥಾಪಕಿ ಲತಾ ಜೋಷಿ, ಸಂಯೋಜಕಿ ಸುಮಾ ಕಳಸಾಪುರ, ಬರಹಗಾರ ಶಶಿಧರ್, ಆಪ್ತ ಸಲಹೆಗಾರ ಮಲ್ಲಾರೆಡ್ಡಿ, ವೈದ್ಯ ಸೂರ್ಯಕುಮಾರ್, ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ, ಸಾಹಿತಿ ಭಾರಧ್ವಾಜ್ ಆನಂದ ತೀರ್ಥ, ಸಾಹಿತಿ ಕುಲಕರ್ಣಿ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡದರು.
ಪರಸ್ಪರ ಪರಿಚಯವೇ ಇಲ್ಲದ ವ್ಯಕ್ತಿಗಳನ್ನು ಸೇರಿಸುವಲ್ಲಿ ಈ ಜಾಲತಾಣ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಫೇಸ್ಬುಕ್ನಲ್ಲಿಯೇ ಕವಿತೆ, ಲೇಖನಗಳು ಹಾಗೂ ಕಥೆಗಳನ್ನು ಬರೆದುಕೊಳ್ಳುವ ನೂರಾರು ಮಂದಿ ಸಾಹಿತ್ಯಾಸಕ್ತರನ್ನು ಸೇರಿಸಿ ರಚಿಸಿರುವ ಕನ್ನಡ ಬರಹಗಳ ಕೈಪಿಡಿಯ ಸ್ನೇಹ ಕೂಟ ಕನ್ನಡ Pತಾಗುಚ್ಛದ ಮಂದಿಗೆ ಕಣಿವೆಯ ರಾಮಲಿಂಗೇಶ್ವರ ಸಭಾಂಗಣ ವೇದಿಕೆಯಾಗಿತ್ತು. ಸಂಚಾಲಕ ಇರ್ಫಾನ್ ಹಸನ್ ಕುಟ್ಟಿ ಅವರ ಅಭಿಲಾಷೆಯಂತೆ ಕಾರ್ಯಕ್ರಮ ಕೊಡಗಿನಲ್ಲಿ ನಡೆಸಲಾಯಿತು.
ಕನ್ನಡ ಕಥಾ ಗುಚ್ಛ ಬರಹಗಳ ಕೈಪಿಡಿಯ ಜಾಲತಾಣದ ಸಾಹಿತ್ಯ ಬಳಗದ ಸ್ನೇಹ ಕೂಟದ ಸಂಸ್ಥಾಪಕಿ ಲತಾ ಜೋಷಿ ನೇತೃತ್ವದಲ್ಲಿ ಧಾವಿಸಿದ್ದ ಹೊರ ಜಿಲ್ಲೆಗಳ ನೂರಾರು ಮಂದಿ ಸಾಹಿತಿಗಳು ಸೇರಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಕೊಡಗಿನ ಕಲೆ, ಸಂಸ್ಕೃತಿ, ಆಚಾರ ವಿಚಾರಗಳು ಮೇಳೈಸುವ ವಿವಿಧ ಕಲಾ ಪ್ರಾಕಾರಗಳು ನಡೆದವು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳಾಡಿದ ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ, ಅನೇಕ ಜಿಲ್ಲೆಗಳ ಸಾಹಿತ್ಯಾಸಕ್ತರನ್ನು ಸೇರಿಸಿ ಸ್ನೇಹ ಬಳಗ ಕಟ್ಟಿ ಸಾಹಿತ್ಯಾತ್ಮಕವಾದ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ ಎಂದರು. ಸ್ನೇಹ ಕೂಟದ ಅಧ್ಯಕ್ಷೆ ಲತಾ ಜೋಷಿ ಮತ್ತು ಸಂಯೋಜಕಿ ಸುಮಾ ಕಳಸಾಪುರ ಮಾತನಾಡಿ, ಸಾಹಿತ್ಯ ವೇದಿಕೆ ಕಳೆದ ಆರು ವರ್ಷಗಳ ಹಿಂದೆ ಆರಂಭವಾಯಿತು ಎಂದರು.
ಇದರಲ್ಲಿ ಸಾಹಿತ್ಯ ಪ್ರಾಕಾರಗಳ ಕೃಷಿ ಮಾಡುವ ಬೇರೆ ಬೇರೆ ಜಿಲ್ಲೆಗಳ ಸಹಸ್ರಾರು ಮಂದಿ ಸದಸ್ಯರಾಗಿದ್ದಾರೆ. ನಮ್ಮಲ್ಲಿರುವ ಸದಸ್ಯರುಗಳೇ ಬರೆಯುವ ಅರ್ಥಗರ್ಭಿತ ಸಂಗ್ರಹಗಳನ್ನು ಕಲೆ ಹಾಕಿ ಹತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದಿ ದ್ದೇವೆ. ಹೊರ ಜಿಲ್ಲೆಗಳಲ್ಲಿ ಪ್ರತಿ ವರ್ಷ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಸದ್ಯದಲ್ಲೇ ರಾಜ್ಯಮಟ್ಟದ ಸಮಾವೇಶ ನಡೆಯಲಿದೆ ಎಂದರು.
ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಶಾಲನಗರ ಕೊಡವ ಸಮಾಜದ ಮಹಿಳೆಯರು ಕೊಡವ ಹಾಡಿಗೆ ನೃತ್ಯ ನಡೆಸಿಕೊಟ್ಟರು. ಮಿಲನ ಭರತ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರೆಭಾಷೆ ಸಂಸ್ಕೃತಿ ಸಾರುವ ಸುಗ್ಗಿ ಸುವ್ವಾಲೆ ನೃತ್ಯ, ಬಿ.ಜಿ. ಅನಂತಶಯನ, ಜಯಶ್ರೀ ಅನಂತಶಯನ, ರಂಜಿತ್ ಹಾಗೂ ಕೌಸರ್ ಅವರಿಂದ ಹುತ್ತರಿ ಹಾಡು, ಕೊಕ್ಕಲೆರ ಧರಣಿ ತಂಡದಿAದ ಕನ್ನಡ ಹಾಡು, ಭಾವಗೀತೆ, ಜಾನಪದ ಗೀತೆ ಮೊದಲಾದ ನೃತ್ಯ ವೈಭವಗಳು ನಡೆದವು.
ಕನ್ನಡ ಕಥಾಗುಚ್ಛದ ಸಂಘಟಕ ಚಾಮರಾಜನಗರದ ಬಾಹುಬಲಿ ಜಯರಾಜು, ಹಿರಿಯ ಸಂಘಟಕ ಕೆ.ವಿ. ಶಶಿಧರ್, ಆಪ್ತ ಸಲಹೆಗಾರ ಡಿ. ಮಲ್ಲಾರೆಡ್ಡಿ, ಪ್ರಮುಖರಾದ ಗಿರೀಶ್ ಕುಲಕರ್ಣಿ, ಚಂದ್ರಶೇಖರ್, ರಾಘವೇಂದ್ರ ಇನಾಮ್ದಾರ್, ಹರೀಶ್ ಕುಮಾರ್ರಾವ್, ಸುಜಾತ ರೆಡ್ಡಿ, ಇಂಧೂಮಣಿ, ಕೊಡಗಿನ ಸದಸ್ಯರಾದ ನೌಷಧ್ ಜನ್ನತ್, ಇರ್ಫಾನ್ ಹಸನ್ ಕುಟ್ಟಿ, ಸೌಮ್ಯ ಉಮೇಶ್, ಹೇಮಂತ್ ಪಾರೆರ, ರೂಪಾ ನಾಗೇಶ್, ನೂತನ್, ಶಿಲ್ಪ, ಪವಿತ್ರ, ರೇಣುಕಾ, ಅನಂತಶಯನ ಹಾಗೂ ಮಾಲತಿ ಭಾರದ್ವಾಜ್, ಟೋಮಿ ಥಾಮಸ್, ಸೂರ್ಯನಾರಾಯಣ ಹಾಗೂ ಕಣಿವೆ ದೇವಾಲಯ ಸಮಿತಿ ಸದಸ್ಯರು ಇದ್ದರು.
ಆಗಮಿತ ಅತಿಥಿಗಳಿಗೆ ಸಾಹಿತಿ ಕಣಿವೆಯ ಭಾರದ್ವಾಜ್ ಕುಟುಂಬ ಬೆಳಗ್ಗೆ ಹಾಗೂ ಮಧ್ಯಾಹ್ನದ ಊಟೋಪಚಾರಗಳ ವ್ಯವಸ್ಥೆ ಕಲ್ಪಿಸಿದ್ದರು. ಈ ಸಂದರ್ಭ ವೈದ್ಯ ಸೂರ್ಯಕುಮರ್, ಬಿ.ಜಿ. ಅನಂತಶಯನ, ದೇವಾಲಯದ ಸಮಿತಿ ಅಧ್ಯಕ್ಷ ಕೆ.ಎಸ್. ಸುರೇಶ್, ಸಾಹಿತಿ ಭಾರಧ್ವಾಜ್ ಮಾಲತಿ ಭಾರಧ್ವಾಜ್ ಹಾಗೂ ಸಂಘಟಕರನ್ನು ಸನ್ಮಾನಿಸಲಾಯಿತು. ಸಾಹಿತಿ ಕೃಪಾ ದೇವರಾಜು ನಿರೂಪಿಸಿದರು. ನೌಷದ್ ಜನ್ನತ್ ಸ್ವಾಗತಿಸಿದರು. ಇರ್ಫಾನ್ ಹಸನ್ ಕುಟ್ಟಿ ವಂದಿಸಿದರು. ಕುಮಾರಿ ಜೇಷ್ಠ ಪ್ರಾರ್ಥನೆ ಮಾಡಿದರು.