ಪೊನ್ನಂಪೇಟೆ, ಜ.೨೨. ದಕ್ಷಿಣ ಕೊಡಗಿನ ಬಲ್ಯಮುಂಡೂರು ಗ್ರಾಮದ ಕೊಟ್ಟಂಗಡ ರಾಜ ಎಂಬವರ ಅಡಿಕೆತೋಟದಲ್ಲಿ ಹುಲಿ ದಾಳಿ ನಡೆಸಿ ಕಾಡು ಹಂದಿಯನ್ನು ಕೊಂದು, ಭಾಗಶಃ ತಿಂದು ಹಾಕಿದೆ. ಸ್ಥಳಕ್ಕೆ ಪೊನ್ನಂಪೇಟೆ ವಲಯದ ಉಪ ವಲಯ ಅರಣ್ಯಾಧಿಕಾರಿ ದಿವಾಕರ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಘಟನೆ ನಡೆದ ಸ್ಥಳದಲ್ಲಿ ಹುಲಿ ಗುರುತು ಪತ್ತೆಗೆ ಕ್ಯಾಮರ ಅಳವಡಿಸಿದ್ದಾರೆ.