ಸೋಮವಾರಪೇಟೆ, ಜ. ೨೧: ತಾಲೂಕಿನ ಸಮಗ್ರ ಅಭಿವೃದ್ಧಿಯ ಚಿಂತನೆಯೊAದಿಗೆ ಆಡಳಿತ ವರ್ಗದ ಗಮನ ಸೆಳೆದು, ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸುವ ಸಂಬAಧ ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ನೂತನ ಕಚೇರಿಯನ್ನು ಪಟ್ಟಣದಲ್ಲಿ ತೆರೆಯಲಾಯಿತು.

ಪಟ್ಟಣದ ಮಹಿಳಾ ಸಮಾಜ ರಸ್ತೆಯಲ್ಲಿರುವ ಕಟ್ಟಡದಲ್ಲಿ ನೂತನ ಕಚೇರಿಯನ್ನು ತೆರೆಯಲಾಗಿದ್ದು, ಹಿರಿಯ ಸಾಹಿತಿ ನ.ಲ. ವಿಜಯ ಸೇರಿದಂತೆ ಇತರರು ಕಚೇರಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ ಅವರು, ಪಕ್ಷಾತೀತವಾಗಿ, ರಾಜಕೀಯ ರಹಿತ ಸಮಿತಿಯನ್ನು ರಚಿಸಲಾಗಿದ್ದು, ತಾಲೂಕಿನ ಅಭಿವೃದ್ಧಿಯ ಬಗ್ಗೆ ಆಡಳಿತ ವರ್ಗದ ಗಮನ ಸೆಳೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಸಮಿತಿಯಿಂದ ಶ್ರಮದಾನ, ಸಾಮಾಜಿಕ ಜಾಗೃತಿಯ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಪ್ರತಿ ಹೋಬಳಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗುವುದು ಎಂದು ಅರುಣ್ ತಿಳಿಸಿದರು. ಈ ಸಂದರ್ಭ ಸಮಿತಿಯ ಆದರ್ಶ ಯಡವನಾಡು, ಪಿ.ಕೆ. ರವಿ, ಕೆ.ಎನ್. ದೀಪಕ್, ರವಿ, ಅಬ್ದುಲ್ ರಜಾಕ್, ಕೆ.ಎ. ಪ್ರಕಾಶ್, ಶ್ರೀನಿಧಿ ಲಿಂಗಪ್ಪ, ಜೀವನ್, ಹರ್ಷಿತ್ ಶಿವಪ್ಪ, ಹೂವಯ್ಯ ಮಾಸ್ಟರ್, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.