ಸೋಮವಾರಪೇಟೆ, ಜ. ೨೧: ಮಡಿಕೇರಿಯಿಂದ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಸಂದರ್ಭ ಕುಂಬೂರು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಗುಂಡಿಗೆ ಮಗುಚಿ, ಅದೃಷ್ಟವಶಾತ್ ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾದ ಘಟನೆ ನಡೆದಿದೆ.

ಪಟ್ಟಣದ ಬಸವೇಶ್ವರ ರಸ್ತೆ ನಿವಾಸಿ ಜೆ.ಸಿ. ಶೇಖರ್ ಅವರು ಚಾಲಿಸುತ್ತಿದ್ದ ಕಾರು, ಕುಂಬೂರು ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಬೇಲಿ ಕಂಬಕ್ಕೆ ಡಿಕ್ಕಿಯಾಗಿ ಗುಂಡಿಗೆ ಮಗುಚಿಕೊಂಡಿದೆ. ಘಟನೆಯಿಂದ ಕಾರಿನ ಮುಂಭಾಗ ಜಖಂಗೊAಡಿದ್ದು, ಚಾಲಕ ಶೇಖರ್ ಅವರು ಅಪಾಯದಿಂದ ಪಾರಾಗಿದ್ದಾರೆ.