ಸಿದ್ದಾಪುರ, ಜ. ೨೧: ಪೀಠೋಪಕರಣಗಳನ್ನು ನೀಡುವುದಾಗಿ ಹಣ ವಸೂಲಿ ಮಾಡಿ ವಂಚನೆ ಮಾಡುತ್ತಿದ್ದ ಅಂತರರಾಜ್ಯದ ಕಳ್ಳನೋರ್ವನನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿ ಯಾಗಿದ್ದಾರೆ.
ಕೇರಳ ರಾಜ್ಯದ ಮಾನಂದವಾಡಿ ನಿವಾಸಿಯಾಗಿರುವ ಬೆನ್ನಿ (೩೬) ಎಂಬಾತನು ಜಿಲ್ಲೆಯ ವಿವಿಧ ಗ್ರಾಮಗಳಿಗೆ ತೆರಳಿ ಪೀಠೋಪಕರಣ ಗಳನ್ನು ಕಡಿಮೆ ದರದಲ್ಲಿ ಕಂತುಗಳ ಪ್ರಕಾರ ನೀಡಲಾಗುವುದೆಂದು ಹೇಳಿ ಹಣ ವಸೂಲಿ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಈತ ಮನೆಗೆ ಪೀಠೋಪಕರಣ ಹಾಗೂ ಗೃಹೋಪಯೋಗಿ ಸಾಮಗ್ರಿಗಳನ್ನು ನೀಡುವುದಾಗಿ ಹೇಳಿ ಮನೆಗಳಿಗೆ ತೆರಳಿ ತಲಾ ೨ ಸಾವಿರದಂತೆ ಹಣ ವಸೂಲಿ ಮಾಡಿ ಚೀಟಿಯೊಂದನ್ನು ನೀಡುತ್ತಿದ್ದ ಎನ್ನಲಾಗಿದೆ. ನಂತರ ಗ್ರಾಮಗಳಲ್ಲಿ ಹಣ ವಸೂಲಿ ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಮಾಡಿ ತದನಂತರ ಅತ್ತ ಸುಳಿಯದೆ ವಂಚಿಸುತ್ತಿದ್ದ.
ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಈತ ವಂಚನೆ ಮಾಡಿರುವುದು ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ನೆಲ್ಲಿಹುದಿಕೇರಿ ಗ್ರಾಮದಲ್ಲಿ ಈತ ವಂಚನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯರು ಈತನ ವಿರುದ್ಧ ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ ಮೇರೆಗೆ ಆರೋಪಿ ಬೆನ್ನಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆರೋಪಿ ಬೆನ್ನಿಯ ವಿರುದ್ಧ ಕೇರಳದಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು, ಇಂತಹ ವ್ಯಕ್ತಿಗಳು ಕಡಿಮೆ ದರದಲ್ಲಿ ಸಾಮಗ್ರಿಗಳನ್ನು ನೀಡುವುದಾಗಿ ವಂಚನೆ ಮಾಡುವುದರ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕೆಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪ್ರಬಾರ ಠಾಣಾಧಿಕಾರಿ ಉತ್ತಯ್ಯ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
-ವಾಸು.