ಕೂಡಿಗೆ, ಜ. ೨೦: ಇಲ್ಲಿಗೆ ಸಮೀಪದ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಆವರಣದಲ್ಲಿ ಅಯೋಧ್ಯೆಯ ಶ್ರೀ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಶುಭ ಸಂದರ್ಭದ ಅಂಗವಾಗಿ ತಾ.೨೧ ರಂದು (ಇಂದು) ಮಹಾಗಾಯತ್ರಿ ಹೋಮ, ರಾಮಚರಕ ಹೋಮ, ರುದ್ರಾಭಿಷೇಕ ಸೇರಿದಂತೆ ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್ ತಿಳಿಸಿದ್ದಾರೆ.

ತಾ.೨೨ ರಂದು ಲಿಂಗಕ್ಕೆ ಪುಣ್ಯಾಭಿಷೇಕ ವಿಶೇಷ ಹೋಮ ಹವನ ಸೇರಿದಂತೆ ವಿವಿಧ ಬಗೆಯ ಅಭಿಷೇಕಗಳು ನಡೆಯಲಿವೆ ಎಂದು ದೇವಾಲಯದ ಪ್ರಧಾನ ಅರ್ಚಕ ರಾಘವೇಂದ್ರ ಆಚಾರ್ ತಿಳಿಸಿದ್ದಾರೆ. ಇದರ ಅಂಗವಾಗಿ ಅನೇಕ ಗ್ರಾಮಗಳು ಕೇಸರಿ ಬಣ್ಣದ ಬಂಟಿAಗ್ಸ್ಗಳಿAದ ಶೃಂಗಾರಗೊAಡಿವೆ.