ಮಡಿಕೇರಿ, ಜ. ೧೯: ದಕ್ಷಿಣದ ಕಾಶ್ಮೀರ ಕೊಡಗು ಜಿಲ್ಲೆ ಪ್ರವಾಸಿಗರ ಸ್ವರ್ಗ ಎಂದು ಖ್ಯಾತಿ ಗಳಿಸಿದೆ. ಇಲ್ಲಿನ ಪರಿಸರ, ವಾತಾವರಣ ಎಂತವರನ್ನೂ ಮಂತ್ರಮುಗ್ದಗೊಳಿಸಿ ಮುದ ನೀಡುತ್ತದೆ. ಅದೇ ರೀತಿ ಹೆಸರಾಂತ ಪ್ರವಾಸಿ ತಾಣಗಳಲ್ಲಿ ಒಂದಾದ ರಾಜಾಸೀಟ್ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ವರ್ಷವೂ ಅನೇಕ ವಿಶೇಷತೆಗಳ ನಡುವೆ ‘ಫ್ಲವರ್ ಶೋ’ ಮೂಡಿಬರಲಿದ್ದು, ೩ ದಿನಗಳ ಕಾಲ ಮಡಿಕೇರಿಯಲ್ಲಿ ಪುಷ್ಪಲೋಕವೇ ನಳನಳಿಸಲಿದೆ.
ಮಡಿಕೇರಿಯ ರಾಜಾಸೀಟ್ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ತೋಟಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ತಾ. ೨೬ ರಿಂದ ೨೮ರ ತನಕ ಪ್ರದರ್ಶನ ನಡೆಯಲಿದೆ. ಅನೇಕ ರೀತಿಯ ಕಲಾಕೃತಿಗಳು ಹೂವಿನಿಂದ ಸೃಷ್ಟಿಯಾಗಲಿವೆ. ಜೊತೆಗೆ ಹಣ್ಣು, ತರಕಾರಿಗಳ ಕೆತ್ತನೆಗಳು ಇರಲಿವೆ.
ತೋಟಗಾರಿಕೆ ಇಲಾಖೆ ಈ ಸಂಬAಧ ಪೂರ್ವ ಸಿದ್ಧತೆ ಕೈಗೊಳ್ಳುತ್ತಿದ್ದು, ಸುಣ್ಣಬಣ್ಣ ಬಳಿದು ಸಿಂಗರಿಸುವುದರ ಜೊತೆಗೆ ಪಾತಿ ಮಾಡಿ ೧೫ ಸಾವಿರ ಹೂ ಗಿಡಗಳನ್ನು ಬೆಳೆಸಿದೆ. ಬೆಂಗಳೂರಿನ ಲಾಲ್ಬಾಗ್ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನವಷ್ಟೆ ಮಡಿಕೇರಿ ಫ್ಲವರ್ ಶೋ ಪ್ರಖ್ಯಾತಿ ಗಳಿಸಿದ್ದು, ಕಳೆದ ವರ್ಷ ೩೦ ಸಾವಿರದಷ್ಟು ಮಂದಿ ವೈಭವವನ್ನು ಕಣ್ತುಂಬಿಕೊAಡಿದ್ದರು. ಈ ವರ್ಷ ಸಾಲು ಸಾಲು ರಜೆ ಇರುವ ಕಾರಣ ೪೦ ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆಯನ್ನು ಹೊಂದಲಾಗಿದೆ.
ಹೂವಿನಲ್ಲಿ ಅರಳಲಿದೆ ಪಾಡಿಯ ಸನ್ನಿಧಿ ಕಲಾಕೃತಿ
೨೫ ಸಾವಿರ ವೈವಿಧ್ಯಮಯ ಹೂ ಬಳಸಿಕೊಂಡು ಜಿಲ್ಲೆಯ ಕಕ್ಕಬ್ಬೆಯಲ್ಲಿರುವ ಪಾಡಿ ಇಗ್ಗುತ್ತಪ್ಪ ದೇವಾಲಯದ ಕಲಾಕೃತಿಯನ್ನು ಈ ಬಾರಿ ರಚಿಸಲಾಗುತ್ತಿದ್ದು, ‘ಫ್ಲವರ್ ಶೋ’ನ ಪ್ರಮುಖ ಆಕರ್ಷಣೆ ಇದಾಗಲಿದೆ. ಸೇವಂತಿಗೆ, ಗುಲಾಬಿ, ಅಸ್ಟರ್ ಜೊತೆಗೆ ಬೇರೆ ಬೇರೆ ಜಾತಿಗಳ ಹೂಗಳನ್ನು ಬಳಸಿ ೩೦ ಅಡಿ ಅಗಲ, ೩೫ ಅಡಿ ಉದ್ದ ಹಾಗೂ ೧೪ ಅಡಿ ಎತ್ತರದ ಬೃಹತ್ ದೇವಾಲಯವನ್ನು ಹೂವಿನಲ್ಲಿ ಸೃಷ್ಟಿಸಲಾಗುತ್ತಿದೆ.
ಗಣರಾಜ್ಯೋತ್ಸವ ಅಂಗವಾಗಿ ಪಿರಂಗಿ, ರಾಷ್ಟçಧ್ವಜ ಹಾಗೂ ಸೈನಿಕನ ಕಲಾಕೃತಿ ವಿಶೇಷವಾಗಿ ಮೂಡಿಬರಲಿದ್ದು, ಇದರೊಂದಿಗೆ ಹೃದಯದ ಆಕಾರದಲ್ಲಿ ತ್ರಿವರ್ಣ ಧ್ವಜದ ಫೋಟೋ ಪಾಯಿಂಟ್, ಚಿಟ್ಟೆ, ಬಲೂನ್ ಹಾರುವ, ನೀರು ಹರಿಯುವ ರೀತಿ, ಚೋಟ ಭೀಮ್, ಬಾರ್ಬಿ ಡಾಲ್, ಸ್ಪೆöÊಡರ್ ಮ್ಯಾನ್, ಬ್ಯಾಟ್ ಮ್ಯಾನ್, ಹುಲಿ, ಅಣಬೆಯ ಕಲಾಕೃತಿಗಳನ್ನು ಹೂವಿನಲ್ಲಿ ರಚಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಹಣ್ಣು, ತರಕಾರಿಗಳ ಕೆತ್ತನೆಯನ್ನು ಪ್ರದರ್ಶನಕ್ಕಿಡಲಾಗುವುದು.
ವಿವಿಧ ಕಾರ್ಯಕ್ರಮ
ಫಲಪುಷ್ಪ ಪ್ರದರ್ಶನದೊಂದಿಗೆ ಹೂವಿನ ಕುಂಡಗಳ ಪ್ರದರ್ಶನ, ವಿವಿಧ ಇಲಾಖೆ ವಸ್ತು ಪ್ರದರ್ಶನ, ಕೃಷಿ ವಸ್ತು ಪ್ರದರ್ಶನ, ಹಣ್ಣು ತರಕಾರಿ ಪ್ರದರ್ಶನ, ಒಣಹೂಗಳ ಜೋಡಣೆ, ಇಕೆಬಾನಾ, ರಂಗೋಲಿ ಸ್ಪರ್ಧೆ ನಡೆಯಲಿದೆ.
ತಾ. ೨೬ ರಂದು ಬೆಳಿಗ್ಗೆ ೮ ಗಂಟೆಗೆ ರಂಗೋಲಿ ಸ್ಪರ್ಧೆ ನಡೆಯಲಿದ್ದು, ಆಸಕ್ತರು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಅಥವಾ ಸ್ಥಳದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಉದ್ದೇಶಿಸಿರುವ ಪ್ರದರ್ಶನಗಳು ರಾಜಾಸೀಟ್ ಸಮೀಪದ ಗಾಂಧಿ ಮೈದಾನದಲ್ಲಿ ನಡೆಯಲಿದೆ.
ಟಿ ಹೆಚ್.ಜೆ. ರಾಕೇಶ್
ರೂ. ೩೦ ಲಕ್ಷ ವೆಚ್ಚ
ಒಟ್ಟು ಕಾರ್ಯಕ್ರಮಕ್ಕೆ ರೂ. ೩೦ ಲಕ್ಷ ವೆಚ್ಚ ತಗುಲಲಿದೆ. ಕಲಾಕೃತಿ ರಚನೆಗೆ ಟೆಂಡರ್ ನೀಡಲಾಗುತ್ತದೆ. ರೂ. ೨೦ ಲಕ್ಷದಷ್ಟು ಕಲಾಕೃತಿ ರಚನೆಗೆ ವೆಚ್ಚವಾಗುವ ಸಾಧ್ಯತೆ ಇದೆ. ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಸಿದ್ಧತೆ ಕೈಗೊಂಡಿದ್ದೇವೆ. ಈ ಬಾರಿ ೪೦ ಸಾವಿರ ಜನ ಆಗಮಿಸುವ ಸಾಧ್ಯತೆ ಇದ್ದು, ಶಾಲೆಯ ಮೂಲಕ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ ಇರಲಿದೆ. ಮಾಮೂಲಿಯಂತೆ ಪ್ರವೇಶ ಶುಲ್ಕ ಇರಲಿದ್ದು ಹೆಚ್ಚು ಮಾಡುವುದಿಲ್ಲ. ೩ ದಿನಗಳು ಕಾರ್ಯಕ್ರಮ ನಡೆಯಲಿದ್ದು, ಹೂ ಬಾಡುವ ತನಕ ಕಲಾಕೃತಿ ಹಾಗೆಯೇ ಇರಲಿದೆ.
- ಹೆಚ್.ಆರ್. ಯೋಗೇಶ್, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ