ಸಿದ್ದಾಪುರ, ಜ. ೧೯: ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಸೆರೆಹಿಡಿದ ಪುಂಡಾನೆಯನ್ನು ದುಬಾರೆಯ ಸಾಕಾನೆ ಶಿಬಿರಕ್ಕೆ ತರಲಾಗಿದ್ದು, ಕ್ರಾಲ್ನಲ್ಲಿ ಬಂಧಿಯಾಗಿರುತ್ತದೆ. ಹಾಸನ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉಪಟಳ ನೀಡುತ್ತಿರುವ ಸಲಗಗಳನ್ನು ಹಿಡಿದು ಸಿದ್ದಾಪುರ, ಜ. ೧೯: ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಸೆರೆಹಿಡಿದ ಪುಂಡಾನೆಯನ್ನು ದುಬಾರೆಯ ಸಾಕಾನೆ ಶಿಬಿರಕ್ಕೆ ತರಲಾಗಿದ್ದು, ಕ್ರಾಲ್ನಲ್ಲಿ ಬಂಧಿಯಾಗಿರುತ್ತದೆ. ಹಾಸನ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉಪಟಳ ನೀಡುತ್ತಿರುವ ಸಲಗಗಳನ್ನು ಹಿಡಿದು ಚುಚ್ಚುಮದ್ದು ನೀಡಲಾಯಿತು. ಸಾಕಾನೆಗಳಾದ ಅಭಿಮನ್ಯು, ಸುಗ್ರೀವ, ಧನಂಜಯ, ಪ್ರಶಾಂತ, ಭೀಮ, ಹರ್ಷ, ಅಶ್ವತ್ಥಾಮ ಮತ್ತು ಮಹೇಂದ್ರ ಆನೆಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಸೆರೆಹಿಡಿದ ಕಾಡಾನೆಯನ್ನು ದುಬಾರೆ ಸಾಕಾನೆ ಶಿಬಿರದ ಕ್ರಾಲ್ನಲ್ಲಿ ಬಂಧಿಸಲಾಗಿದೆ.
ಹಾಸನ ಜಿಲ್ಲೆಯ ವಿವಿಧೆಡೆಗಳಲ್ಲಿ ಉಪಟಳ ನೀಡುತ್ತಿರುವ ೧೦ ಕಾಡಾನೆಗಳನ್ನು ಸೆರೆಹಿಡಿಯಲು ಕಾರ್ಯಾಚರಣೆ ಮುಂದುವರೆ ಯುತ್ತಿದೆ. ಈ ಭಾಗದಲ್ಲಿ ಕಾಡಾನೆ ದಾಳಿಗೆ ಹಲವಾರು ಮಂದಿ ಬಲಿಯಾಗಿದ್ದು, ಗ್ರಾಮಸ್ಥರ ಒತ್ತಾಯದ ಮೇರೆಗೆ ಕಾರ್ಯಾಚರಣೆ ನಡೆಸಿ ಪುಂಡಾನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡಲಾಗುತ್ತಿದೆ.
-ವಾಸು ಎ.ಎನ್.