ನಾರದ ಮಹರ್ಷಿಗಳು ಒಮ್ಮೆ ತಮಸಾ ನದಿ ತಟದಲ್ಲಿ ಆಶ್ರಮವಾಸಿ ನಾಲ್ಮೀಕಿ ಮಹರ್ಷಿಯನ್ನು ಭೇಟಿಯಾದರು. ಅದೊಂದು ಕುತೂಹಲಕಾರಕ ಭೇಟಿ. ಹಾಗೇ ಅವರನ್ನು ಸತ್ಕರಿಸುತ್ತಾ ತನ್ನ ಮನಸ್ಸಿನ ಜಿಜ್ಞಾಸೆಯನ್ನು ಭಿನ್ನವಿಸುತ್ತಾರೆ ವಾಲ್ಮೀಕಿ. ‘‘ಈ ಲೋಕದಲ್ಲಿ ಈ ಕಾಲ ದಲ್ಲಿ ಪರಿಪೂರ್ಣನಾದ ಆದರ್ಶ ಮಾನವ ಇದ್ದಾರೆಯೇ ? ಇದ್ದರೆ ಆ ಶ್ರೇಷ್ಠರು ಯಾರು ? ನಾರದ ಮಹರ್ಷಿಗಳು ಬಂದ ಉದ್ದೇಶವೇ ಅದು. ‘‘ರಾಮ’’ನ ಕುರಿತಾಗಿ ಅವನ ಗುಣವಿಶೇಷಗಳ ಬಗ್ಗೆ ಶ್ರೇಷ್ಠತೆ ಬಗ್ಗೆ ಹೇಳಿ ಹೊರಟು ಹೋಗುತ್ತಾರೆ. ಈ ರಾಮಮಂತ್ರ ವಾಲ್ಮೀಕಿ ಮನದಲ್ಲಿ ಅಂಟಿಕೊಳ್ಳುತ್ತದೆ. ಅದೇ ಧ್ಯಾನದಲ್ಲಿ ಮಧ್ಯಾಹ್ನ ತಮಸಾ ತೀರಕ್ಕೆ ಸ್ನಾನಕ್ಕೆ ತೆರಳುತ್ತಾರೆ. ಅಲ್ಲಿ ವ್ಯಾಧನೊಬ್ಬನ ಬಾಣಕ್ಕೆ ಬಲಿಯಾದ ಗಂಡು ಕ್ರೌಂಚ ಹಕ್ಕಿ ಕೆಳಗೆ ಬಿದ್ದುದ್ದನ್ನು ನೋಡಿ ವ್ಯಾಧನಿಗೆ ಶಾಪ ಹಾಕುತ್ತಾರೆ ತನಗೇ ಅರಿವಿಲ್ಲದಂತೆ ವಿಚಿತ್ರವೆಂದರೆ ಅದು ಶ್ಲೋಕ ರೂಪದಲ್ಲಿದೆ.
‘‘ಮಾನಿಷಾದ ಪ್ರತಿಷ್ಟಾಂತ್ಯಮಗಮ: ಶಾಶ್ವತಃ
ಸಮB | ಯತ್ಕ್ರೌಂಚ ಮಿಥುನಾದೇಕಮವದೀ:
ಕಾಮಮೋಹಿತವರ್ ||
(ಹೇ ನಿಷಾದ ಅಕಾರಣವಾಗಿ ಹಕ್ಕಿಯನ್ನು ಕೊಂದ ಅನ್ಯಾಯಿ, ನಿನ್ನ ಪಾಪದ ಫಲದಿಂದ ನೀ ಈ ಕೂಡಲೇ ಸಾಯಿ) ಈ ಶ್ಲೋಕ ಅವರ ರಾಮಾಯಣ ಕಥೆಗೆ ನಾಂದಿಯಾಯಿತು. ಇದೇ ಛಂದಸ್ಸಿನ ೨೪೦೦೦ ಶ್ಲೋಕಗಳ ಕಥೆ ಬರೆಯಲ್ಪಡುತ್ತದೆ. ಇದಕ್ಕೆ ಬ್ರಹ್ಮ ಸಹಕರಿಸುತ್ತಾನೆ. ನಿನ್ನ ಶ್ಲೋಕದ ಶಾಪಕ್ಕೆ ಬೇಸರಬೇಡ. ನಿನ್ನ ಮನಸ್ಸಿನ ಭಾವುಕತನಕ್ಕೆ ನಾನೇ ಕಾರಣ. ರಾಮಕಥೆ ರಚಿಸಲು ಅನುಕೂಲವಾಗುವಂತೆ ಇಡೀ ರಾಮಚರಿತೆ ಕಣ್ಣಿಗೆ ಕಾಣುವಂತೆ ಆಗಲಿ ಎಂದು ವರ ಕೊಡುತ್ತಾನೆ. ಇದನ್ನೇ ವಾಲ್ಮೀಕಿ ಒಂದು ಕಡೆ ದಾಖಲಿಸಿದ್ದಾರೆ. ‘‘ಪಾಣೌ ಆಮಲಕಯಥಾ’’ (ಆಂಗೈ ನೆಲ್ಲಿಕಾಯಿಯಂತೆ) ವಾಲ್ಮೀಕಿ ಕಥೆ ಬರೆಯುವಾಗ ಅಂಗೈ ನೆಲ್ಲಿಕಾಯಿಯಂತೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಕಾಣುವುದು ಎಂದರೇನು ರಚಿಸಿದ್ದಲ್ಲವೆ ? ಅಂದರೆ ರಚಿಸುವುದಕ್ಕೂ ಮೊದಲು ಚರಿತ್ರೆ ಕಣ್ಣ ಮುಂದೆ ಕಾಣುತ್ತಿತ್ತು. ಇದು ದೈವಕೃಪೆ. ಯಾವುದೇ ವಿಶ್ವ ವಿದ್ಯಾಲಯ ಪರಿಚಯವಿಲ್ಲದೆ ಇಂತಹ ಮಹಾಕಾವ್ಯ ಬರೆದರು. ಒಂದೇ ಒಂದು ಗ್ರಂಥ ಬರೆದು ಪ್ರಸಿದ್ದಿಯಾದರು. ಆದಿ ಕವಿಯಾದರು. ಅದು ಮುಂದೆ ಹಲವಾರು ರಾಮಾಯಣ ರಚನೆಗೆ ಕಾರಣ ವಾಯ್ತು. ಹಿಂದೆ ವ್ಯಾಧನಾಗಿದ್ದವ ನಾರದರಿಂದ ವಾಲ್ಮೀಕಿಯಾದರು ಎಂದು ಒಂದು ಕಥೆ ಪುರಾಣ ಪ್ರಕಾರ ಭೃಂಗುವAಶದ ಚ್ಯವನ ಮಹರ್ಷಿಮಗ ಎಂದೂ ಹೇಳುತ್ತಾರೆ. ಸುಮಾರು ೨೦೦೦ ವರ್ಷಗಳಿಂದ ಭಾರತೀಯ ಮನೋಧರ್ಮದಲ್ಲಿ ಹರಿಯುತ್ತಾ ಬಂದಿರುವ ಸಂಸ್ಕೃತಿಯ ಮಹಾಪ್ರಸಾದ ಎನಿಸಿದ್ದು ವಾಲ್ಮೀಕಿ ರಚಿತ ಶ್ರೀಮದ್ರಾಮಾಯಣ. ಅದರ ಮುಖ್ಯಧ್ವನಿ ದುಷ್ಟ ನಿಗ್ರಹ ಶಿಷ್ಟ ಪರಿಪಾಲನೆ ಆ ಮೂಲಕ ಅಂದಿನ ಸಮಾಜದಲ್ಲಿದ್ದ ಅಯೋಧ್ಯೆಯ ಅರಮನೆಯ ಮಂಥರೆ, ಕೈಕೇಯಿ, ರಾಮ ವನವಾಸದಲ್ಲಿನ ಶೂರ್ಪಣಖಿ, ತ್ರಿಜಟೆ, ಮಾರೀಚ, ಸುಬಾಹು, ವಾಲಿ ಲಂಕೆಯ ಕುಂಭಕರ್ಣ, ರಾವಣಾದಿ ಪಾತ್ರಗಳಲ್ಲಿ ಶ್ರೀರಾಮನ ಉದಾಹರತೆ, ಉದ್ಧಾರ ಮಾರ್ಗಗಳು, ಜೊತೆಗೆ ಸ್ವಶಕ್ತಿ ಪ್ರದರ್ಶನ ಪರಾಕ್ರಮ ಗುಣಗಳು ಪರಿಚಯವಾಗುತ್ತದೆ. ಪಿತೃಭಕ್ತಿ, ಸೋದರ ವಾತ್ಸಲ್ಯ, ಪ್ರಜಾಪ್ರೀತಿ, ಕ್ಷಮಾಗುಣಗಳು ಮಹತ್ವ ಪಡೆಯುತ್ತವೆ. ಶಬರಿ, ಅಹಲ್ಯಾ ಪ್ರಕರಣಗಳೇ ಸ್ತಿçÃಯರ ಉದ್ಧಾರ, ಲೋಕಶಾಂತಿಯಲ್ಲಿ ರಾಮನ ಪಾತ್ರ ಹೀಗೆ ಸುಮಾರು ೧೪ ಗುಣಗಳ ಪಾತ್ರವನ್ನು ಕವಿ ಪರಿಚಯಿಸಿರುವರು. ಹೀಗೆ ರಾಮಾಯಣದ ಕಥೆಯಲ್ಲಿ ರೋಚಕ ಲಂಕೆಯನ್ನು ಗೆದ್ದ ರಾಮ ಸ್ವರ್ಣಮಯ ರಾಜ್ಯವನ್ನು ಆಳಬಹುದಿತ್ತು. ಗೆಳೆಯ ಭಕ್ತ ವಿಭೀಷಣನಿಗೆ ಬಿಟ್ಟು ಕೊಟ್ಟು ರಾವಣನ ಮೇಲಿನ ಕೋಪಬಿಟ್ಟ, ತಾನೇ ಮುಂದೆ ನಿಂತು ರಾವಣ ಶವಸಂಸ್ಕಾರ ನೆರವೇರಿಸಿಕೊಟ್ಟು ಕ್ಷಮಾಗುಣ ತೋರಿಸಿದ್ದಾನೆ. ನೈಜ ರಾಮಕಥೆಯಲ್ಲಿ ದುಷ್ಟನಿಗ್ರಹ, ಶಿಷ್ಟರ ಪರಿಪಾಲನೆಗಾಗಿ ಶ್ರೀಮನ್ನಾರಾಯಣ ಮಾನವನಾಗಿ ದಶರಥ ಪುತ್ರನಾಗಿ ಕೌಶಲ್ಯ ಬಸಿರಲ್ಲಿ ರಾಮನಾಗಿ ಹುಟ್ಟುತ್ತಾನೆ. ಶ್ರೀಲಕ್ಷಿö್ಮ ಭೂಮಿ ಪುತ್ರಿ ಸೀತೆಯಾಗಿ ಜನಕ ಮಹಾರಾಜನ ಭೂಮಿಯಲ್ಲಿ ಅಯೋನಿಜೆಯಾಗಿ ದೊರಕುತ್ತಾಳೆ. ಆದಿಶೇಷ ಲಕ್ಷö್ಮಣ ರೂಪದಲ್ಲಿ ರಾಮ ಜೊತೆ ಇರುತ್ತಾನೆ. ರಾಮ ತಂದೆಗೆ ತಕ್ಕಮಗನಾಗಿ, ಭಾತೃಪ್ರೇಮಿಯಾಗಿ ಸುಗ್ರೀವ, ಆಂಜನೇಯರ ಗೆಳೆಯನಾಗಿ, ಪ್ರಜೆಗೆ ತಕ್ಕ ರಾಜನಾಗಿ ಸೀತಾ ರಾಮ ಪ್ರೀತಿಯ ಗಂಡನಾಗಿ ಪ್ರಸಿದ್ಧಿಯಾಗುತ್ತಾನೆ. ದಾಸಿ ಮಂಥರೆಯ ದೆಶೆಯಿಂದ ರಾಜ್ಯಭ್ರಷ್ಟನಾಗಿ ೧೪ ವರ್ಷ ವನವಾಸ ಮಾಡಬೇಕಾಗುತ್ತದೆ. ಪತ್ನಿ ಸೀತೆ ಮತ್ತು ಲಕ್ಷö್ಮಣ ಅರಣ್ಯಗಳಲ್ಲಿ ಅಲ್ಲಲ್ಲಿ ವಾಸಿಸುತ್ತಾ ಕಾಲ ಕಳೆಯುತ್ತಾರೆ. ರಾವಣನಿಂದ ಅಪಹೃತ ಸೀತೆ ಲಂಕೆ ಸೇರುತ್ತಾಳೆ. ಕಪಿ ಸೈನ್ಯ ಸಹಾಯದಿಂದ ಲಂಕೆಯನ್ನು ಮುತ್ತಿಗೆ ಹಾಕಿ ರಾವಣನಾದಿ ರಾಕ್ಷಸರನ್ನು ನಾಶಮಾಡಿ ಸೀತಾ ಸಮೇತ ಅಯೋಧ್ಯೆಗೆ ಮರಳುತ್ತಾರೆ. ಗರ್ಭಿಣಿ ಸೀತೆ ಜನಾಪವಾದಕ್ಕೆ ಒಳಗಾಗಿ ರಾಮನಿಂದ ಬೇರ್ಪಟ್ಟು ಪುನಃ ವನವಾಸ ಸೇರುತ್ತಾಳೆ. ವಾಲ್ಮೀಕಿ ಶಿಷ್ಯರು ಅವಳನ್ನು ಆಶ್ರಮಕ್ಕೆ ಕರೆತರುತ್ತಾರೆ. ವಾಲ್ಮೀಕಿ ಮಹರ್ಷಿಗಳ ರಕ್ಷಣೆಯಲ್ಲಿ ಲವಕುಶರ ಜನ್ಮವಾಗುತ್ತದೆ. ಅವರ ಬಾಲ್ಯ ವಿದ್ಯಾಭ್ಯಾಸ, ಶಸ್ತಾçಭ್ಯಾಸಗಳು ವಾಲ್ಮೀಕಿ ಆಶ್ರಮದಲ್ಲೇ ಆಗುತ್ತದೆ. ಹೀಗಿರುತ್ತಾ ಒಂದು ದಿನ ರಾಮಾಶ್ವಮೇಧ ಕುದುರೆ ಆಶ್ರಮಕ್ಕೆ ಬರುತ್ತದೆ. ಲವಕುಶರಿಂದ ಕಟ್ಟಿ ಹಾಕಲ್ಪಡುತ್ತದೆ. ರಾಮನೇ ಸ್ವತಃ ಯುದ್ಧಕ್ಕೆ ಬರುತ್ತಾನೆ. ವಾಲ್ಮೀಕಿ ಮಹರ್ಷಿಗಳಿಂದ ವಿಚಾರ ತಿಳಿದು ಎಲ್ಲರೂ ಅಯೋಧ್ಯೆ ತಲಪುತ್ತಾರೆ. ರಾಜ ದರ್ಬಾರಿನಲ್ಲಿ ಮಕ್ಕಳಿಂದ ರಾಮಚರಿತೆ ಕಾವ್ಯಾವಾಚನ ನಡೆಯುತ್ತದೆ. ರಾಮನಿಗೆ ತನ್ನದೇ ಚರಿತ್ರೆ ಕೇಳಿಸಲಾಗುತ್ತದೆ. ಎಲ್ಲವೂ ತಿಳಿಯಾಗಿ ರಾಮ ಸೀತೆಯನ್ನು ಪರಿಗ್ರಹಿಸಲು ಒಪ್ಪುತ್ತಾನೆ. ಇಲ್ಲಿಗೆ ರಾಮ ಕಥೆ ಮುಗಿಯುತ್ತದೆ. ತಮ್ಮ ಮಾನವ ಅವತಾರ ಪೂರ್ಣಗೊಂಡಿರುವುದು ತಿಳಿದು ಸೀತಾದೇವಿ ಭೂದೇವಿಯೊಂದಿಗೆ ಸೇರಿ ಕೈಲಾಸಕ್ಕೆ ಹೋಗುತ್ತಾಳೆ. ಶ್ರೀರಾಮ ‘ಕುಶನಿಗೆ ಪಟ್ಟಕಟ್ಟಿ ತಾನೂ ಮಾನವ ಜನ್ಮಬಿಟ್ಟು ಕೈಲಾಸ ಸೇರುತ್ತಾನೆ. ಇದೀಗ ೨೦೨೪ ಶ್ರೀರಾಮ ಬಾಲರಾಮನಾಗಿ ಅಯೋಧ್ಯೆ ಪ್ರವೇಶ ಮಾಡಲಿದ್ದಾನೆ. ಬಾಲಕಾಂಡ ಸಂತೋಷದಾಯಕ ವಾಗಲಿ ಹಾಗೆಯೇ ಅಯೋಧ್ಯೆಯಲ್ಲಿ ಪಟ್ಟಾಭಿಷೇಕ ಸಾಂಗವಾಗಿ ನೆರವೇರಲಿ, ವನವಾಸ, ರಾಜ್ಯತ್ಯಾಗ ಮುಂತಾದ ಘಟನೆಗಳಾ ವವೂ ನಡೆಯದೆ ನಿರ್ವಿಘ್ನವಾಗಿ ರಾಮರಾಜ್ಯ ಮುಂದುವರಿಯಲಿ.
‘‘ಕೂಜAತA ರಾಮರಾಮೇತಿ |
ಮಧುರಂ ಮಧುರಾಕ್ಷರಂ |
ಆರುಹ್ಯ ಕವಿತಾ ಶಾಬಾಂ |
ವಂದೇ ವಾಲ್ಮೀಕಿ ಕೋಕಿಲವಾನ್ ||
ಕಾವ್ಯವೆಂಬ ಮರದ ಮೇಲೆ ಕುಳಿತು ‘ರಾಮಾ ರಾಮಾ’ ಎಂದು ಹಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಗೆ ನಮಸ್ಕಾರ (ಕೌಶಿಕ ಮುನಿಯ ವಾಲ್ಮೀಕಿ ವಂದನಾಶ್ಲೋಕ)
(ಸAಗ್ರಹ) ಸಿ. ಎಂ. ಭೀಮಯ್ಯ, ನಿವೃತ್ತ ಉಪನ್ಯಾಸಕರು
ವೀರಾಜಪೇಟೆ, ಮೊ:೯೯೭೨೨೫೫೧೫೪
ಸರ್ವರಿಗೂ ಆದರ್ಶ ರೂಪಿ ಶ್ರೀರಾಮ
ರಾಮಜನ್ಮಭೂಮಿಯೆಂದೇ ಪೌರಾಣಿಕ ವಾಗಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇದರ ಹಿಂದಿರುವುದು ರಾಮನ ಸರಳ, ಸುಂದರ ಆದರ್ಶಯುತ ವ್ಯಕ್ತಿತ್ವ. ದೇಶದ ಸಂಸ್ಕೃತಿ, ಆಚಾರ-ವಿಚಾರಗಳು, ಜೀವನ ಮೌಲ್ಯಗಳನ್ನು ಸಾರುವ ಮಹಾಕಾವ್ಯವೆಂದರೆ ಅದು ಹಿಂದೂ ಧರ್ಮದ ಶ್ರೇಷ್ಠ ಗ್ರಂಥ ರಾಮಾಯಣ.
ಮನಸ್ಸಿನ ದುರ್ಬಲತೆಗೆ ಒಳಗಾದರೆ ಬದುಕಿನುದ್ದಕ್ಕೂ ತೆರಬೇಕಾದ ಬೆಲೆಯೇನು ಎಂಬುದಕ್ಕೆ ದಶರಥನ ಮೂಲಕ, ಸ್ವಾಮಿ ನಿಷ್ಠೆಗೆ ಹನುಮಂತ ಪ್ರತಿನಿಧಿಯಾದರೆ, ಸೋದರ ವಾತ್ಸಲ್ಯವನ್ನು ರಾಮ ಲಕ್ಷ್ಮಣ, ಭರತ ಶತ್ರುಘ್ನರು ಪ್ರತಿನಿಧಿಸುತ್ತಾರೆ. ಕೆಚ್ಚೆದೆಯ ಧೈರ್ಯ ಸಾಹಸಗಳಿಗೂ ಇವರೇ ಸಾಕ್ಷಿ. ತ್ಯಾಗವೆಂಬ ಮೌಲ್ಯಕ್ಕೆ ಅರ್ಥ ಬರುವುದೇ ಇನ್ನೊಬ್ಬರಿಗಾಗಿ ತಮ್ಮ ಜೀವನ ವನ್ನು ಸವೆಸಿದಾಗ. ಇದಕ್ಕೆ ಊರ್ಮಿಳೆ, ಶಬರಿಯಂತಹವರು ಸಾಕ್ಷಿಯಾಗಿ ನಿಲ್ಲುತ್ತಾರೆ. ಒಟ್ಟಿನಲ್ಲಿ ರಾಮನ ನಾಯಕತ್ವದಲ್ಲಿ ಇಡೀ ರಾಮಾಯಣದ ಪ್ರತಿ ಪಾತ್ರವೂ ಕೂಡ ಮುಂದಿನ ಪೀಳಿಗೆಗೆ ಒಂದಲ್ಲಾ ಒಂದು ರೀತಿಯ ಮೌಲ್ಯಸಂದೇಶದ ಪ್ರತಿನಿಧಿಗಳಂತೆ ಭಾಸವಾಗುತ್ತಾರೆ.
ಶ್ರೀ ರಾಮನ ಜನ್ಮ ಸ್ಥಳ ಅಯೋಧ್ಯಾನಗರಿಯಲ್ಲಿ ದಿನಾಂಕ ೨೨ ರಂದು ನಡೆಯುತ್ತಿರುವ ಬಾಲರಾಮನ ವಿಗ್ರಹ ಪ್ರತಿಷ್ಟಾಪನೆಯ ಅಮೃತ ಘಳಿಗೆಯನ್ನು ಕಣ್ತುಂಬಿಕೊಳ್ಳಲು ಇಡೀ ಭಕ್ತ ಸಮುದಾಯವೇ ಕಾದುಕುಳಿತಿದೆ. ಇದಕ್ಕಾಗಿ ದಶಕಗಳ ಕಾಲ ನಡೆದ ಹೋರಾಟ, ಘರ್ಷಣೆ, ವಾದ ವಿವಾದಗಳು ಒಂದು ಹಂತಕ್ಕೆ ಬಂದು ಮುಟ್ಟಿದೆಯೇನೋ ನಿಜ. ವಾಸ್ತವತೆಯನ್ನು ನಿರೂಪಿಸಲು, ನ್ಯಾಯಕ್ಕಾಗಿ, ಗೆಲುವಿಗಾಗಿ ಶ್ರಮಿಸುತ್ತಲೇ ಪ್ರಾಣತೆತ್ತ ಸಾಧಕರಿಗೆ, ಹಾಗೂ ಈ ಕ್ಷಣದವರೆಗೂ ಛಲ ಬಿಡದ ತಿವಿಕ್ರಮ ರಂತೆ ತಮ್ಮನ್ನೇ ಈ ಪುಣ್ಯ ಕಾರ್ಯಕ್ಕಾಗಿ ಸಮರ್ಪಿಸಿಕೊಂಡ ಮಹನೀಯ ರೆಲ್ಲರಿಗೂ ರಾಮನಿಗೆ ಸಲ್ಲುವ ಪೂಜನೀಯ ಸ್ಥಾನದಲ್ಲಿ ಪಾಲನ್ನು ಪಡೆಯುವ ಅಪೂರ್ವ ಅವಕಾಶವಿದು. ರಾಜನಾಗಿದ್ದುಕೊಂಡು ಪ್ರಜಾಭಿಪ್ರಾಯಕ್ಕೆ ಮನ್ನಣೆ ಕೊಡುತ್ತಿದ್ದ ರಾಮನ ಕಾಲದ ಆಡಳಿತ ವ್ಯವಸ್ಥೆಯ ಅಗತ್ಯತೆ ಇಂದಿನ ಕಾಲಘಟ್ಟದಲ್ಲಿ ಬಹಳಷ್ಟು ಪ್ರಸ್ತುತ. ಅಧಿಕಾರದಾಹ, ಆಸ್ತಿ ಅಂತಸ್ತಿನ ವ್ಯಾಮೋಹ ಹೆತ್ತವರು, ಒಡಹುಟ್ಟಿದವರು, ಸ್ನೇಹಿತರು ಎಂಬ ಯಾವ ಸಂಬAಧಗಳಿಗೂ ಬೆಲೆಗೊಡದೆ ಎಂತಹ ಕೀಳು ಮಟ್ಟಕ್ಕೂ ಇಳಿಯಬಲ್ಲ ಹಾಗೂ ವಿರೋಧಿಗಳ ಪ್ರಾಣವನ್ನು ಬಲಿಪಡೆಯಲು ಹಿಂಜರಿಯದ ದುಷ್ಟ ಮನಸ್ಸುಗಳನ್ನೇ ಕಾಣುತ್ತಿರುವ ನಾವುಗಳು ಮತ್ತೆ ರಾಮರಾಜ್ಯದ ನಿರೀಕ್ಷೆಯಲ್ಲಾದರೂ ಸಂತೋಷ ಪಡುವ ಸನ್ನಿವೇಶಗಳಿವು. ಸಂಬAಧಗಳೇ ಮುಖ್ಯವಾಗಿ ಕಾಣುವ ರಾಮನಿಗೆ ಅಧಿಕಾರದಲ್ಲಿದ್ದಷ್ಟು ಸಮಯ ಪ್ರಜೆಗಳೇ ಪ್ರಭುಗಳು. ಸತ್ಯ, ಧರ್ಮ, ನಿಷ್ಠೆಗೆ ಸದಾ ಬದ್ಧನಾಗಿ ಅಧಿಕಾರಕ್ಕಾಗಿ ನಡೆಯುವ ಹುನ್ನಾರಕ್ಕೆ ಪರಿಹಾರವಾಗಿ ಸ್ವಯಂ ನಿರ್ಧಾರ ತೆಗೆದುಕೊಂಡು ಅಧಿಕಾರ ತ್ಯಾಗ ಮಾಡಿ ವನವಾಸಕ್ಕೆ ತೆರಳುವ ರಾಮನ ದೃಢಮನಸ್ಸಿಗೆ ತಲೆಬಾಗದಿರಲು ಸಾಧ್ಯವೇ ಇಲ್ಲ. ರಾಜನಾಗಿ ಆಳ್ವಿಕೆ ಮಾಡುವುದಕ್ಕೂ ಸೈ, ಸರ್ವ ಪರಿತ್ಯಾಗಿಯಾಗಿ ವನವಾಸಕ್ಕೂ ಸೈ ಎಂಬ ನಡೆ ರಾಮನದು. ವೀರತ್ವದ ಸಂಕೇತವಾಗಿ "ದುಷ್ಟ ಸಂಹಾರ ಶಿಷ್ಟ ರಕ್ಷಣೆ" ಎಂಬ ಧ್ಯೇಯ ನುಡಿಗೆ ಅವನು ಕೈಗೊಂಡ ಯುದ್ಧ ನೀತಿಗಳು ಸಾಕ್ಷಿಯಾಗುತ್ತವೆ. ತಾಟಕಿ ಸಂಹಾರದAತಹ ಭಯಂಕರ ರಾಕ್ಷಸಕುಲದ ದಮನ ರಾಮನಿಂದಾಗಿದೆ. ಹಾಗೆಯೇ ತನ್ನನ್ನು ವನವಾಸಕ್ಕೆ ಕಳುಹಿಸಿದ