ಮಡಿಕೇರಿ, ಜ. ೧೮: ಸುತ್ತಲೂ ಹಸಿರು ಸಿರಿಯಿಂದ ಕಂಗೊಳಿಸುವ ವನಸಿರಿಯ ಸೊಬಗು., ಹಾದಿಯುದ್ದಕ್ಕೂ ಹಳದಿ-ಕೆಂಪು ಬಣ್ಣದ ತೋರಣ., ಹಿರಿಯರಾದಿಯಾಗಿ ಬಾವುಟಗಳನ್ನಿಡಿದ ಮಕ್ಕಳು., ಪುಟಾಣಿಗಳು., ಬಣ್ಣ ಬಣ್ಣದ ಸೀರೆಯೊಂದಿಗೆ ಕಂಗೊಳಿಸುತ್ತಿದ್ದ ನಾರಿಯರ ನಡುವೆ ಸಾಂಪ್ರದಾಯಿಕ ಉಡುಪಿನಲ್ಲಿ ಮೀಸೆ ತಿರುವುತ್ತಿದ್ದ ಪುರುಷರು ಒಂದೆಡೆ., ಮದುವಣಗಿತ್ತಿಯಂತೆ ಸಿಂಗಾರಗೊAಡಿದ್ದ ಪುಟ್ಟ ಗ್ರಾಮದಲ್ಲಿ ಗ್ರಾಮಸಿರಿ ಅನಾವರಣಗೊಂಡಿತು..

ಇAತಹ ಒಂದು ಹಬ್ಬದ ವಾತಾವರಣ ಕಂಡು ಬಂದಿದ್ದು ಭಾಗಮಂಡಲ ನಾಡಿನ ಚೆಟ್ಟಿಮಾನಿ ಗ್ರಾಮದಲ್ಲಿ. ಸುವರ್ಣ ಕರ್ನಾಟಕ ೫೦ರ ಸಂಭ್ರಮದ ಅಂಗವಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು, ಭಾಗಮಂಡಲ ಹೋಬಳಿ ಪರಿಷತ್ತು, ಕುಂದಚೇರಿ, ಭಾಗಮಂಡಲ, ಅಯ್ಯಂಗೇರಿ ಗ್ರಾಮ ಪಂಚಾಯ್ತಿಯನ್ನೊಳಗೊAಡ ಗ್ರಾಮ ಸಿರಿ ಆಚರಣಾ ಸಮಿತಿ ಸಹಯೋಗದೊಂದಿಗೆ ಚೆಟ್ಟಿಮಾನಿ ಶಾಲಾ ಮೈದಾನದಲ್ಲಿ ಆಯೋಜಿತವಾಗಿದ್ದ ಗ್ರಾಮಸಿರಿ ಕಾರ್ಯಕ್ರಮ ಸಂಭ್ರಮದಿAದ ಜರುಗಿತು. ಮೂರು ಗ್ರಾಮಗಳ ಗ್ರಾಮಸ್ಥರು ಒಟ್ಟಾಗಿ ನಡೆಸಿದ ಕಾರ್ಯಕ್ರಮ ಸಾಮರಸ್ಯ- ಸಹಬಾಳ್ವೆಗೆ ನಾಂದಿ ಹಾಡಿತು.

ಮೆರವಣಿಗೆಯ ಆಕರ್ಷಣೆ

ಕಾರ್ಯಕ್ರಮದ ಅಂಗವಾಗಿ ಮೆರವಣಿಗೆ ಏರ್ಪಡಿಸಲಾಗಿತ್ತು. ಕೋರಂಗಾಲ ವಾಜಪೇಯಿ ಶಾಲೆ ಪ್ರಾಂಶುಪಾಲ ಲೋಕೇಶ್ ಅವರ ಅಧ್ಯಕ್ಷತೆಯಲ್ಲಿ ಭಾಗಮಂಡಲ ಗ್ರಾ.ಪಂ.ಅಧ್ಯಕ್ಷ ಕಾಳನ ರವಿ ಮೆರವಣಿಗೆಗೆ ಚಾಲನೆ ನೀಡಿದರು. ಅತಿಥಿಗಳಾಗಿ ಚೆಟ್ಟಿಮಾನಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಯಶೋಧ, ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್‌ಅಹ್ಮದ್, ರೇವತಿ ರಮೇಶ್, ಕೋಶಾಧಿಕಾರಿ ಸಂಪತ್‌ಕುಮಾರ್, ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ, ಹೋಬಳಿ ಅಧ್ಯಕ್ಷ ಸುನಿಲ್ ಪತ್ರಾವೊ, ಮಡಿಕೇರಿ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಅಂಬೆಕಲ್ ನವೀನ್, ಭಾಗಮಂಡಲ ಗ್ರಾಪಂ. ಸದಸ್ಯ ದಂಡಿನ ಜಯತ್, ಹೊಸೂರು ಸತೀಶ್‌ಕುಮಾರ್, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಕುಯ್ಯಮುಡಿ ಮನೋಜ್‌ಕುಮಾರ್, ಮೆರವಣಿಗೆ ಸಮಿತಿ ಸಂಚಾಲಕ ಕೆ.ಎಸ್. ಅಣ್ಣಯ್ಯ, ಇತರರು ಪಾಲ್ಗೊಂಡಿದ್ದರು. ಭಾಗಮಂಡಲ ಕಾವೇರಿ ಪ.ಪೂ.ಕಾಲೇಜು ಮೈದಾನದಿಂದ ಹೊರಟ ಮೆರವಣಿಗೆ ಮೂರು ಕಿ.ಮೀ. ದೂರ ಸಾಗಿ ಸಮಾರಂಭದ ಮೈದಾನದಲ್ಲಿ ಸಮಾಪನಗೊಂಡಿತು. ಭುವನೇಶ್ವರಿಯ ಚಿತ್ರ, ಊರಿನ ಪ್ರಮುಖ ದೇವಾಲಯಗಳನ್ನೊಳಗೊಂಡ ಸ್ಥಬ್ಧಚಿತ್ರ, ಶಾಲಾ ಮಕ್ಕಳ ಡೊಳ್ಳು ಕುಣಿತ ತಂಡ, ವೀರಗಾಸೆ ತಂಡ, ಪೂಜಾ ಕುಣಿತ ತಂಡಗಳು ಮೆರವಣಿಗೆಗೆ ಶೋಭೆ ನೀಡಿದವು. ದುಡಿಕೊಟ್ಟ್ ಪಾಟ್ ಹಾಗೂ ಸಾಂಪ್ರದಾಯಿಕ ವಾಲಗದೊಂದಿಗೆ ಬೆಳಕು ಹಿಡಿದ ಹೆಂಗಳೆಯರು ಮೆರವಣಿಗೆಯನ್ನು ಮುನ್ನಡೆಸಿದರು. ಮೂರು ಊರಿನ ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಹೆಜ್ಜೆ ಹಾಕಿದರು. ದಣಿದವರಿಗೆ ಚೆಟ್ಟಿಮಾನಿ ರಸ್ತೆ ಬದಿಯಲ್ಲಿ ಅಲ್ಲಿನ ಯುವಕ

(ಮೊದಲ ಪುಟದಿಂದ) ಸಂಘದವರು ತಂಪು ಬಾದಾಮಿ ವಿತರಣೆ ಮಾಡಿ ದಾಹ ನೀಗಿಸಿದರು.

ಪಾರಂಪರಿಕ ವಸ್ತು ಪ್ರದರ್ಶನ

ಹಳೆ ತಲೆಮಾರಿನ., ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಅಡುಗೆ, ಕೃಷಿ ಪರಿಕರಗಳ ಪಾರಂಪರಿಕ ವಸ್ತು ಪ್ರದರ್ಶನ ಗಮನ ಸೆಳೆಯಿತು. ಮಣ್ಣಿನ, ತಾಮ್ರದ ವಸ್ತುಗಳು, ದೀಪಗಳು, ಗೊರಗ, ಗೋರಿ, ಹಳೆ ರೇಡಿಯೋ ಮುಂತಾದವುಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ಶ್ಲಾಘನೀಯವಾಗಿತ್ತು. ಇದರೊಂದಿಗೆ ಬೆಳ್ಳಿಯ ಆಭರಣದ ಮಳಿಗೆ, ಪುಸ್ತಕ ಮಳಿಗೆಗಳೂ ರಾರಾಜಿಸಿದವು.

ಸಾಂಸ್ಕೃತಿಕ ವೈಭವ

ಗ್ರಾಮಸಿರಿಯಲ್ಲಿ ಸ್ಥಳೀಯ ಕಲಾವಿದರಿಂದ ಮಧ್ಯಾಹ್ನ ಗೀತ ಗಾಯನ ಹಾಗೂ ಸಂಜೆಯಿAದ ರಾತ್ರಿಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ಥಳೀಯ ಕಲಾತಂಡದವರು, ವಿದ್ಯಾರ್ಥಿಗಳು ನಡೆಸಿಕೊಟ್ಟ ಕಾರ್ಯಕ್ರಮಗಳು ಜನ ಮನ ರಂಜಿಸಿದವು. ಇದರೊಂದಿಗೆ ಗ್ರಾಮೀಣ ಜನರ ಸಮಸ್ಯೆ, ಸಂಸ್ಕೃತಿ, ಬದುಕು ಮತ್ತು ಜಾನಪದದ ಬಗ್ಗೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ವಿಚಾರಗೋಷ್ಠಿಗಳು ನಡೆದವು.

ಪ್ರವೇಶ ದ್ವಾರ-ಸಭಾಂಗಣ

ಕಾರ್ಯಕ್ರಮದಲ್ಲಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ ಹಾಗೂ ಸಾಧನೆ ಮಾಡಿದವರನ್ನು ನೆನಪಿಸಿಕೊಳ್ಳುವ ಸಲುವಾಗಿ ಅವರುಗಳ ಹೆಸರಿನಲ್ಲಿ ಪ್ರವೇಶ ದ್ವಾರ, ಸಭಾಂಗಣ, ವೇದಿಕೆ ನಿರ್ಮಾಣ ಮಾಡಲಾಗಿತ್ತು. ಹೊಸೂರು ಜೋಯಪ್ಪ ನೆನಪಿನ ದ್ವಾರವನ್ನು ಹೊಸೂರು ಸತೀಶ್‌ಕುಮಾರ್, ಕಡೋಡಿ ಮಹಾವಿಷ್ಣು ದ್ವಾರವನ್ನು ಕುಯ್ಯಮುಡಿ ಪೂರ್ಣಯ್ಯ, ಸುಳ್ಯಕೋಡಿ ಮತ್ತು ಕುಂದಚೇರಿ ಮುಖ್ಯದ್ವಾರವನ್ನು ಸುಳ್ಯಕೋಡಿ ಅವನೀಶ್ಚಂದ್ರ, ಕುಂಬಳಚೇರಿ ಯಶವಂತ್, ವಸ್ತು ಪ್ರದರ್ಶನವನ್ನು ಕುಂಚಡ್ಕ ಕಸ್ತೂರಿ, ಎದುರ್ಕಳ ಶಂಕರನಾರಾಯಣ ಭಟ್ ಪುಸ್ತಕ ಮಳಿಗೆಯನ್ನು ಕುದುಕುಳಿ ಭರತ್, ಸ್ವಾತಂತ್ರö್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸಭಾಮಂಟಪವನ್ನು ಕೆದಂಬಾಡಿ ಜಯಪ್ರಕಾಶ್, ಮೇ.ಮಂಗೇರಿರ ವಿನೋದ್ ಮುತ್ತಣ್ಣ ಮುಖ್ಯ ವೇದಿಕೆ ಯನ್ನು ಮಂಗೇರಿರ ಪಾಲಿ ಚಿಣ್ನಪ್ಪ ಅವರುಗಳು ಉದ್ಘಾಟನೆ ಮಾಡಿದರು.

ಸಾಧಕರಿಗೆ ಸನ್ಮಾನ

ಗ್ರಾಮ ಸಿರಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿ ಸಲಾಯಿತು. ಸಮಾಜ ಸೇವೆಗಾಗಿ ಪೊನ್ನೆಟ್ಟಿ ಶಾಂತಿ ಪೊನ್ನಪ್ಪ, ಕುಯ್ಯಮುಡಿ ಪೂರ್ಣಯ್ಯ, ಆಚೀರ ಕಾವೇರಮ್ಮ, ಕುಂಚಡ್ಕ ಕಸ್ತೂರಿ, ಶಿಕ್ಷಣ ಕ್ಷೇತ್ರದಲ್ಲಿ ಕೆದಂಬಾಡಿ ತಿಮ್ಮಯ್ಯ, ಕೊಟ್ಟುಕತ್ತಿರ ಪೂವಯ್ಯ, ಸಹಕಾರ ಕ್ಷೇತ್ರದಲ್ಲಿ ಸುಳ್ಯಕೋಡಿ ಕಲಾವತಿ, ಜೆ.ಎನ್.ನಂಜುAಡಪ್ಪ, ಜೇನು ಕೃಷಿಗಾಗಿ ಪೊಡನೊಳನ ಚಂಗಪ್ಪ, ಕೃಷಿ ಕ್ಷೇತ್ರದಲ್ಲಿ ಕುದುಪಜೆ ಪಳಂಗಪ್ಪ, ಕರಾಟೆ ಪಟು ಆರಾಟು ಒಕ್ಕಡ ಚೇತನ್ ಚಂಗಪ್ಪ, ಕರಕುಶಲಕರ್ಮಿ ಮೇದರ ಚಿಣ್ಣಪ್ಪ, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಮುರಳಿ, ದೇಶ ಸೇವೆಗಾಗಿ ಕೆ.ಎಮ.ಅಸ್ಪದ್, ಮಹಿಳಾ ಸಂಘಟನೆಗಾಗಿ ಸತ್ಯಭಾಮ ಸೋಮ, ಕುಲ ಕಸುಬು ಎಂ.ವಿ.ವಿಜಯ, ಕುಶಲಕರ್ಮಿ ಎ.ಎನ್. ನಾರಾಯಣ್, ಪ್ರಗತಿಪರ ಕೃಷಿಕನಾಗಿ ಅಮೆ.ಕೆ. ಮಂಜುನಾಥ್, ಆರೊಗ್ಯ ಸೇವೆಗಾಗಿ ಬಾಳುವಂಡ ರಂಜು ರಮೇಶ್, ವಾದ್ಯ ಕಲಾವಿದ ಹೆಚ್.ವಿ.ವಾಸುದೇವ್ ಹಾಗೂ ವಿಶೇಷ ಸನ್ಮಾನಿತರಾಗಿ ಕಾಳನ ರವಿ ಸೇರಿದಂತೆ ಒಟ್ಟು ೨೧ ಮಂದಿಯನ್ನು ಸನ್ಮಾನಿಸಲಾಯಿತು. ಮೂರು ಗ್ರಾಮಗಳ ಸಹಸ್ರಾರು ಮಂದಿ ಗ್ರಾಮ ಸಿರಿಯ ಯಶಸ್ಸಿಗೆ ಸಾಕ್ಷೀಭೂತರಾದರು.

ನೆರದಿದ್ದವರಿಗೆಲ್ಲ ಉಪಹಾರ ಹಾಗೂ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

? ಕುಡೆಕಲ್ ಸಂತೋಷ್

ಚಿತ್ರ: ಸೂರಜ್ ಅಮೆಮನೆ