ಕುಶಾಲನಗರ, ಜ. ೧೮: ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿ ೨೦೨೪-೨೯ ರ ಸಾಲಿನ ಚುನಾವಣೆ ಗುರುವಾರ ಶಾಂತಿಯುತವಾಗಿ ನಡೆಯಿತು.
ಒಟ್ಟು ೧೫ ಸದಸ್ಯರ ಆಡಳಿತ ಮಂಡಳಿಗೆ ಒಂದು ಸ್ಥಾನ ಅವಿರೋಧ ವಾಗಿ ಆಯ್ಕೆಗೊಂಡಿದೆ. ಉಳಿದಂತೆ ೧೪ ಮಂದಿ ನಿರ್ದೇಶಕರ ಸ್ಥಾನಕ್ಕೆ ಕುಶಾಲನಗರ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಬೆಳಿಗ್ಗೆ ೯ ಗಂಟೆಯಿAದ ಸಂಜೆ ೪ ತನಕ ಮತದಾನ ನಡೆಯಿತು.
ಮುಂಜಾನೆ ಬಿರುಸಿನಿಂದ ಮತದಾನ ನಡೆಯುತ್ತಿದ್ದ ವೇಳೆ ಚುನಾವಣಾ ಕೇಂದ್ರದಲ್ಲಿ ಸಹಕಾರ ಸಂಘದ ಸಿಬ್ಬಂದಿಗಳು ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದಾರೆಂದು ಆರೋಪಿಸಿ, ಚುನಾವಣೆ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ನಡೆದು ಕೈ ಮಿಲಾಯಿಸಲು ಮುಂದಾದ ಸಂದರ್ಭ ಪೊಲೀಸರು ಮಧ್ಯಪ್ರವೇಶಿಸಿ ಸಮಾಧಾನಿಸಿದ ಪ್ರಸಂಗವು ನಡೆಯಿತು.
ಸಂದೀಪ್ ಚುನಾವಣಾ ಅಧಿಕಾರಿ ಯಾಗಿ ಕಾರ್ಯನಿರ್ವಹಿಸಿದರು. ಸಹಕಾರ ಸಂಘದ ಸಿಬ್ಬಂದಿಗಳು ಅಧಿಕಾರಿಗಳು ಚುನಾವಣಾ ಪ್ರಕ್ರಿಯೆ ಯಲ್ಲಿ ಪಾಲ್ಗೊಂಡು ಸಹಕರಿಸಿದರು.
ಫಲಿತಾಂಶ: ಆಡಳಿತ ಮಂಡಳಿಗೆ ಸಾಮಾನ್ಯ ವರ್ಗದಿಂದ ಸ್ಪರ್ಧಿಸಿದ್ದ ಜೋಸೆಫ್ ವಿಕ್ಟರ್ ಸೋನ್ಸ್ (೫೧೬ ಮತಗಳು), ಎಲ್ ನವೀನ್ (೫೧೩), ಜಿ ಡಿ ನವೀನ್ (೪೮೬), ಎಂ ವಿ ನಾರಾಯಣ (೫೩೦),ಶರವಣ ಕುಮಾರ್ (೫೬೨), ಶರತ್ ಕೆ ಪಿ( ೫೩೧), ಶಿವಪ್ರಕಾಶ್ ಎನ್ ಈ (೫೦೧), ಸುರೇಶ್ ಕುಮಾರ್ ಕೆ (೪೭೨), ಆಯ್ಕೆಯಾಗಿದ್ದಾರೆ. ಸಾಮಾನ್ಯ ವಾಗಿರಿಂದ ಸುರೇಶ್ ಕೆ ಎನ್(೫೨೩) ಮತ ಗಳಿಸಿ ಪ್ರಥಮ ಬಾರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಪ್ರವೀಣ, (೨೧೪), ಭಾಸ್ಕರ (೧೯೮) ರಜನಿಕಾಂತ್ (೨೦೬) ಮತಗಳೊಂದಿಗೆ ಪರಾಭವಗೊಂಡಿದ್ದಾರೆ.
ಸಾಮಾನ್ಯ ಮಹಿಳಾ ಮೀಸಲು ವರ್ಗದಲ್ಲಿ ಸ್ಪರ್ಧಿಸಿದ ಪಿ.ಎಂ. ಕವಿತಾ(೫೦೮), ಕೃತಿಕಾ ಪೊನ್ನಪ್ಪ (೫೦೦) ಮತ ಗಳಿಸಿ ಆಯ್ಕೆಯಾಗಿದ್ದಾರೆ. ಇಂದಿರಾ ರಮೇಶ್ ಅವರು ೨೨೩ ಮತಗಳಿಸಿ ಪರಾಭವಗೊಂಡಿದ್ದಾರೆ.ಸಾಮಾನ್ಯ ಹಿಂದುಳಿದ ವರ್ಗ ಎ ವಿಭಾಗದಿಂದ ಎಂ.ಎA. ಶಾಹೀರ್ ೪೩೬ ಮತ ಗಳಿಸಿ ಆಯ್ಕೆಯಾಗಿದ್ದಾರೆ. ಪೃಥ್ವಿರಾಜ್ ೨೨೦ ಮತಗಳೊಂದಿಗೆ ಸೋಲು ಕಂಡಿದ್ದಾರೆ.
ಬಿ. ರಾಮಕೃಷ್ಣಯ್ಯ ಅವರು ಪರಿಶಿಷ್ಟ ಜಾತಿ ವರ್ಗದಿಂದ ೪೯೩ ಮತಗಳಿಂದ ಆಯ್ಕೆಯಾಗಿದ್ದಾರೆ. ರಾಮು ಅವರು ೧೬೨ ಮತ ಗಳಿಸಿದ್ದಾರೆ.
ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿ ಆರ್ ಜೆ ಕೀರ್ತಿ ಲಕ್ಷಿö್ಮ ಅವರು ೪೩೦ ಮತಗಳಿಸಿ ಪ್ರಥಮ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಇವರ ವಿರುದ್ಧ ಸ್ಪರ್ಧಿಸಿದ ಜಗದೀಶ್ ಅವರು ೨೨೧ ಮತ ಗಳಿಸಿದ್ದಾರೆ. ವಿ.ಸಿ. ಅಮೃತ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ಸಹಕಾರಿ ಧುರೀಣ ಸಂಘದ ಪ್ರಸಕ್ತ ಅಧ್ಯಕ್ಷರಾಗಿರುವ ಆರ್ ಶರವಣ ಕುಮಾರ್ ಅವರ ನೇತೃತ್ವದ ೧೫ ಮಂದಿ ನೂತನ ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದಾರೆ.
ಇಬ್ಬರು ಹೊರತುಪಡಿಸಿ ಉಳಿದಂತೆ ೧೩ ಮಂದಿ ನಿರ್ದೇಶಕರು ಪುನರಾಯ್ಕೆಗೊಂಡಿದ್ದಾರೆ.