ಸೋಮವಾರಪೇಟೆ, ಜ. ೧೮: ಐಗೂರು ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಹಣ ದುರುಪಯೋಗ ಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಈಗಾ ಗಲೇ ಪೊಲೀಸ್ ದೂರು ನೀಡಲಾ ಗಿದೆ. ಇದರ ತನಿಖೆ ಪ್ರಗತಿಯಲ್ಲಿದೆ. ಈ ನಡುವೆ ಪಂಚಾಯಿತಿಯನ್ನು ಸೂಪರ್ ಸೀಡ್ ಮಾಡಬೇಕೆಂದು ಕೆಲವರು ರಾಜಕೀಯ ಕಾರಣಕ್ಕಾಗಿ ಆಗ್ರಹಿಸಿರುವುದು ಸಮಂಜಸವಲ್ಲ ಎಂದು ಗ್ರಾ.ಪಂ. ಆಡಳಿತ ಮಂಡಳಿ ಪ್ರತಿಕ್ರಿಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಗ್ರಾ.ಪಂ. ಅಧ್ಯಕ್ಷ ಜಿ.ಕೆ. ವಿನೋದ್, ಹಣ ದುರುಪಯೋಗ ಆಗಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಪಿಡಿಓ ಅವರು ಪೊಲೀಸ್ ದೂರು ನೀಡಿದ್ದಾರೆ. ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಕೆಲವರು ಪಂಚಾಯಿತಿ ಆಡಳಿತ ಮಂಡಳಿಯ ಮೇಲೆ ರಾಜಕೀಯ ಕಾರಣಕ್ಕಾಗಿ ಆರೋಪ ಮಾಡಿರುವುದು ಸರಿಯಲ್ಲ. ಆಡಳಿತ ಮಂಡಳಿ ಇರುವುದರಿಂದಲೇ ಅವ್ಯವಹಾರ ಬೆಳಕಿಗೆ ಬಂದು ದೂರು ದಾಖಲಾಗಿದೆ ಎಂದರು.

ಗ್ರಾಮ ಪಂಚಾಯಿತಿಗೆ ಹಲವಷ್ಟು ಬಾಕಿ ಉಳಿಸಿಕೊಂಡಿರುವ ಕೆಲವರು, ಸಣ್ಣ ಗುತ್ತಿಗೆದಾರರಾಗಿರುವವರು, ರೈತರ ಕೃಷಿಗೆ ನೀರು ಸರಬರಾಜು ಮಾಡುವ ನಾಲೆಗಳನ್ನು ಒತ್ತುವರಿ ಮಾಡಿಕೊಂಡು, ಅದರ ಮೇಲೆ ಮನೆ ನಿರ್ಮಿಸಿಕೊಂಡಿರುವ ಮಂದಿ, ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡಬಾ ರದು ಎಂದು ಆಕ್ಷೇಪಣೆ ಸಲ್ಲಿಸುತ್ತಿರು ವವರು, ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಗಾಲು ಹಾಕುತ್ತಿರುವ ಮಂದಿ, ಗ್ರಾಮ ಪಂಚಾಯಿತಿಯನ್ನು ಸೂಪರ್ ಸೀಡ್ ಮಾಡುವಂತೆ ಒತ್ತಾಯಿಸಿ ರುವುದು ಶೋಚನೀಯ ಎಂದು ವಿನೋದ್ ಟೀಕಿಸಿದರು.

ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಸರಿತ ಎಂಬವರು ಕಳೆದ ೨೦೨೨ರ ಜೂನ್ ತಿಂಗಳಿನಿAದ ಪಂಚಾಯಿತಿ ಸಿಬ್ಬಂದಿ ಖಾತೆಯಿಂದ, ೧೫ನೇ ಹಣಕಾಸು ಖಾತೆಯಿಂದ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಸಿಬ್ಬಂದಿ ಖಾತೆಯಿಂದ ೧೫,೨೯,೩೯೧, ೧೫ನೇ ಹಣಕಾಸು ಖಾತೆಯಿಂದ ೧,೧೧,೮೨೦ ರೂಪಾಯಿಗಳನ್ನು ಗುತ್ತಿಗೆದಾರರ ಖಾತೆಗೆ ಜಮೆ ಮಾಡಿ, ನಂತರ ತಮ್ಮ ಖಾತೆಗೆ ಹಾಕಿಸಿಕೊಂಡಿದ್ದಾರೆ. ಪ್ರತಿ ತಿಂಗಳ ವೇತನ ಸಂದರ್ಭ ಸ್ವಂತ ಖಾತೆಗೆ ಹೆಚ್ಚುವರಿ ಹಣ ಜಮೆ ಮಾಡಿಕೊಂಡಿದ್ದು, ಇದು ೨೦೨೨-೨೩ರ ಸಾಲಿನ ಲೆಕ್ಕ ತಪಾಸಣೆ ಸಂದರ್ಭ ತಿಳಿದುಬಂದಿದೆ.

ತಕ್ಷಣ ತುರ್ತು ಸಭೆ ಕರೆದು ಚರ್ಚೆ ನಡೆಸಿದ್ದು, ಹಣವನ್ನು ಗ್ರಾ.ಪಂ. ಖಾತೆಗೆ ವರ್ಗಾಯಿಸುವುದಾಗಿ ಕಂಪ್ಯೂಟರ್ ಆಪರೇಟರ್ ತಿಳಿಸಿದ ಮೇರೆ ಒಂದು ವಾರ ಕಾಲಾವಕಾಶ ನೀಡಲಾಗಿತ್ತು. ಆದರೆ ನಿಗದಿತ ಸಮಯದೊಳಗೆ ಕೇವಲ ೫೬ ಸಾವಿರವನ್ನು ಮರುಪಾವತಿ ಮಾಡಿದ್ದಾರೆ. ಬಾಕಿ ಹಣ ನೀಡದ ಕಾರಣ ಪೊಲೀಸ್ ದೂರು ದಾಖಲಿಸಲಾಗಿದೆ ಎಂದು ವಿವರಿಸಿದರು.

ಪಂಚಾಯಿತಿ ಮೇಲೆ ಆರೋಪ ಮಾಡಿರುವ ಕೆಲವರು ಸಣ್ಣ ಗುತ್ತಿಗೆದಾರರಾಗಿದ್ದು, ಕಳಪೆ ಕಾಮಗಾರಿ ಮಾಡಿರುವ ಹಿನ್ನೆಲೆ ಹೊಸದಾಗಿ ಕಾಮಗಾರಿ ನೀಡಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ಪಂಚಾಯಿತಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ಈ ಬಗ್ಗೆ ಎಲ್ಲಾ ರೀತಿಯ ತನಿಖೆಗೆ ನಾವು ಸಿದ್ಧರಿದ್ದೇವೆ. ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲಿ; ಆರೋಪ ಸಾಬೀತಾದರೆ ಸೂಪರ್‌ಸೀಡ್ ಮಾಡಲಿ. ಸುಳ್ಳು ಆರೋಪಗಳನ್ನು ಮುಂದುವರೆಸಿದರೆ ಕಾನೂನು ಕ್ರಮಕ್ಕೆ ಆಡಳಿತ ಮಂಡಳಿ ಮುಂದಾಗಲಿದೆ ಎಂದು ಸದಸ್ಯರುಗಳು ತಿಳಿಸಿದರು.

ಗೋಷ್ಠಿಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಸಿ.ಎಂ. ಗೌರಮ್ಮ, ಸದಸ್ಯರುಗಳಾದ ಜುನೈದ್, ಬಿ.ಎಸ್. ಪ್ರಮೋದ್, ಎಲ್.ಎಂ. ರಾಜೇಶ್, ಪಾರ್ವತಿ, ಬೇಬಿ, ಬಿ.ಪಿ. ಜೋಯಪ್ಪ ಉಪಸ್ಥಿತರಿದ್ದರು.