ಶನಿವಾರಸAತೆ, ಜ. ೧೭: ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲು ಕೋಡು ಗ್ರಾಮದ ೬೦೦ ವರ್ಷಗಳ ಐತಿಹಾಸಿಕ ಶ್ರೀಕುಮಾರಲಿಂಗೇಶ್ವರ ಸ್ವಾಮಿ ಜಾತ್ರೆ ಸಂಪನ್ನಗೊAಡಿತು.

ಬುಧವಾರ ಬೆಳಿಗ್ಗೆ ೭ ಗಂಟೆಗೆ ಗ್ರಾಮದ ಶ್ರೀಕುಮಾರಲಿಂಗೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಸ್ವಾಮಿಗೆ ಗಂಗಾಸ್ನಾನ, ಪೂಜೆ ಮಾಡಿಸಿ, ಮಹಿಳೆಯರು ಕಳಶ ಹೊತ್ತು ಮೆರವ ಣಿಗೆ ನಡೆಯಿತು. ಈಡುಗಾಯಿ ಒಡೆದು, ಮಂಗಳಾರತಿ, ಇತ್ಯಾದಿ ವಿಶೇಷ ಪೂಜೆಗಳು ಸಂಪ್ರದಾಯಿಕ ವಾಗಿ ನಡೆದವು. ನಂತರ ಮತ್ತೆ ಸ್ವಾಮಿಯನ್ನು ದೇವಸ್ಥಾನದ ಒಳಗೆ ಬರಮಾಡಿಕೊಂಡು ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.

ಮಧ್ಯಾಹ್ನ ೧೨ ಗಂಟೆಗೆ ಪಕ್ಕದ ಕಿತ್ತೂರು ಗ್ರಾಮದಿಂದ ಸಹೋದರ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವರ ಅಡ್ಡಪಲ್ಲಕ್ಕಿ ಮೆರವಣಿಗೆ ಹುಲುಕೋಡು ಗ್ರಾಮಕ್ಕೆ ಆಗಮಿಸಿತು. ನಂತರ ಹುಲುಕೋಡಿನ ಶ್ರೀಕುಮಾ ರಲಿಂಗೇಶ್ವರ ಸ್ವಾಮಿ ದೇವರನ್ನು ಅಡ್ಡಪಲ್ಲಕ್ಕಿಯಲ್ಲಿ ಇರಿಸಿ ಮಂಗಳ ವಾದ್ಯದೊಂದಿಗೆ ಉತ್ಸವ ಮೆರವಣಿಗೆ ಜಾತ್ರಾ ಬನಕ್ಕೆ ಕರೆತರಲಾಯಿತು. ಅಲ್ಲಿ ಭಕ್ತಾದಿಗಳು ದೇವರ ದರ್ಶನ ಮಾಡಿ, ಹಣ್ಣುಕಾಯಿ ಸಮರ್ಪಿಸಿದರು, ದೇವರಿಗೆ ಮಹಾಮಂಗಳಾರತಿ, ಇತ್ಯಾದಿ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನಡೆದವು. ಅನ್ನಸಂತರ್ಪಣೆ ನಡೆಯಿತು.

ಜಾತ್ರಾ ಮಹೋತ್ಸವಕ್ಕೆ, ಪೂಜಾ ಕಾರ್ಯಕ್ಕೆ ಸಮೀಪದ ಹೆಗ್ಗಡಹಳ್ಳಿ ಮಠಾಧೀಶ ಷಡ್ಭಾವರಹಿತೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಆಗಮಿಸಿ ಆಶೀರ್ವಚನ ನೀಡಿದರು.

ಸಂಜೆ ೫ ಗಂಟೆಯವರೆಗೆ ಜಾತ್ರಾ ಬನದಲ್ಲಿ ಜಾತ್ರೆ ನಡೆದು ಬಳಿಕ ಶ್ರೀ ಸ್ವಾಮಿಯನ್ನು ಮೂಲ ಸ್ಥಾನಕ್ಕೆ ಕರೆತರಲಾಯಿತು. ಸಂಜೆ ೭ ಗಂಟೆಗೆ ಹುಲುಕೋಡಿನ ಶ್ರೀಕುಮಾರಲಿಂಗೇಶ್ವರ ಸ್ವಾಮಿ ಹಾಗೂ ಕಿತ್ತೂರು ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಸಹೋ ದರ ದೇವರುಗಳ ಜೋಡಿ ಅಡ್ಡಪಲ್ಲಕ್ಕಿ ಮೆರವಣಿಗೆ ಉತ್ಸವ ವಿಜೃಂಭಣೆ ಯಿಂದ ನಡೆಯಿತು. ಸುತ್ತಮುತ್ತಲಿನ ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಜಾತ್ರಾ ಸಮಿತಿ ಅಧ್ಯಕ್ಷ ಎಚ್.ಎಂ.ವಿವೇಕ್ ಹಾಗೂ ಪದಾಧಿಕಾರಿಗಳು ಹಾಗೂ ಗ್ರಾಮ ಪ್ರಮುಖರು ಹಾಜರಿದ್ದರು.