ಕಣಿವೆ, ಜ. ೧೭: ಕುಶಾಲನಗರದ ಕೂಡ್ಲೂರಿನಲ್ಲಿ ಕಳೆದ ೩೦ ವರ್ಷಗಳ ಹಿಂದೆ ಕೈಗಾರಿಕಾ ಪ್ರದೇಶಕ್ಕೆಂದು ೨೫೦ ಎಕರೆ ಭೂಮಿಯನ್ನು ಮೀಸಲಿಡುವ ಮೂಲಕ ನೂರಾರು ಕೈಗಾರಿಕೆಗಳು ತಲೆ ಎತ್ತುವಂತೆ ಮಾಡಿರುವ ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್ ಅವರನ್ನು ಕೊಡಗು ಜಿಲ್ಲೆ ಮರೆಯುವಂತಿಲ್ಲ ಎಂದು ಮಡಿಕೇರಿ ಶಾಸಕ ಡಾ.ಮಂಥರ್‌ಗೌಡ ಹೇಳಿದರು.

ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ಕೈಗಾರಿ ಕೋದ್ಯಮಿಗಳ ಹಿತರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕೈಗಾರಿಕಾ ಪ್ರದೇಶದ ಕುಂದು ಕೊರತೆಗಳ ಸಂಬAಧ ಸಭೆಯಲ್ಲಿ ಶಾಸಕರು ಕೈಗಾರಿಕೋದ್ಯಮಿಗಳ ಅಹವಾಲು ಗಳನ್ನು ಸ್ವೀಕರಿಸಿದರು.

(ಮೊದಲ ಪುಟದಿಂದ) ಕೂಡ್ಲೂರು ಕೈಗಾರಿಕಾ ಪ್ರದೇಶ ೨೫೦ ಎಕರೆ ಇದ್ದು, ಈ ಪೈಕಿ ೮೫ ಎಕರೆ ಭೂಮಿ ಕಂದಾಯ ಇಲಾಖೆಯಿಂದ ವರ್ಗಾವಣೆ ಗೊಂಡಿಲ್ಲ. ಹಾಗಾಗಿ ಆರ್ ಟಿ ಸಿ ಇಲ್ಲದೇ ಕೈಗಾರಿಕೋದ್ಯಮಿಗಳು ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ ೮೫ ಎಕರೆ ಜಾಗಕ್ಕೆ ಆರ್‌ಟಿಸಿ ಸಿಗುವಂತೆ ಮಾಡಿಕೊಡ ಬೇಕೆಂದು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪ್ರವೀಣ್ ಒತ್ತಾಯಿಸಿದರು. ಅಲ್ಲದೇ ಕೈಗಾರಿಕಾ ಪ್ರದೇಶದಲ್ಲಿ ೧೧೦ಕ್ಕೂ ಹೆಚ್ಚಿನ ಕಾಫಿ ಸಂಸ್ಕರಣಾ ಘಟಕಗಳಿದ್ದು ಸಾವಿರಾರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಆದರೆ ಅವರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಈಗ ಇರುವ ಕುಡಿಯುವ ನೀರಿನ ಯೋಜನೆ ೩೦ ವರ್ಷ ಹಳೆಯದಾಗಿದ್ದು ಪೈಪ್‌ಲೈನ್ ಗಳು ಹಾಳಾಗಿವೆ. ನೀರು ಪೋಲಾ ಗುತ್ತಿವೆ. ಆದ್ದರಿಂದ ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕವಾಗಿ ಹಾರಂಗಿಯಿAದ ಕುಡಿಯುವ ನೀರಿನ ಯೋಜನೆ ರೂಪಿಸಬೇಕು. ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಸ್ಥಳೀಯ ಗ್ರಾಮ ಪಂಚಾಯಿತಿಯಿAದಾಗಲಿ, ಕೈಗಾರಿಕಾ ಇಲಾಖೆಯಿಂದಾಗಲಿ ನೆರವು ಸಿಗುತ್ತಿಲ್ಲ. ಹಾಗಾಗಿ ನಮಗೆ ಯಾವುದಾದರೂ ಒಂದು ಇಲಾಖೆಯಿಂದ ಅನುಕೂಲ ಸಿಗುವಂತೆ ಮಾಡಬೇಕು. ಜೊತೆಗೆ ಕೈಗಾರಿಕಾ ಪ್ರದೇಶದ ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಂಡು ಇನ್ನೂ ಹೆಚ್ಚಿನ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗ ಬೇಕು ಎಂದು ಪ್ರವೀಣ್ ಆಗ್ರಹಿಸಿದರು.

ಅಮೃತ ಕಾಫಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಕಣ್ಣನ್ ಮಾತನಾಡಿ, ಅವೈಜ್ಞಾನಿಕ ಚರಂಡಿ ನಿರ್ಮಾಣ ದಿಂದಾಗಿ ಇಡೀ ಕೈಗಾರಿಕಾ ಪ್ರದೇಶದ ಮೇಲ್ಭಾಗದ ನೀರು ತಗ್ಗು ಪ್ರದೇಶ ದಲ್ಲಿರುವ ಕಾವೇರಿ ನದಿಯಂಚಿನ ಅಮೃತ ಕಾಫಿ ಸಂಸ್ಕರಣಾ ಘಟಕ ದೊಳಕ್ಕೆ ಹರಿಯುತ್ತಿದೆ. ಇದರಿಂದ ಅನಾನುಕೂಲವಾಗುತ್ತಿದೆ. ಕೂಡಲೇ ಸರಿಪಡಿಸಿ ಎಂದು ಶಾಸಕರಲ್ಲಿ ಮನವಿ ಮಾಡಿದರು.

ಮತ್ತೋರ್ವ ಕಾಫಿ ಉದ್ಯಮಿ ಸುದೀಪ್, ಹಾರಂಗಿ ಕುಶಾಲನಗರ ಸಂಪರ್ಕ ರಸ್ತೆ ಮಾಡುವಾಗ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ವಾಹನಗಳು ಸರಾಗವಾಗಿ ಸಂಚರಿಸಲು ಸಾಧ್ಯವಾಗದಂತೆ ಮಾಡಲಾಗಿದೆ. ಈ ಬಗ್ಗೆ ಶಾಸಕರು ಸ್ಥಳ ಪರಿಶೀಲಿಸಬೇಕೆಂದು ಕೋರಿದರು. ಮತ್ತೋರ್ವ ಉದ್ಯಮಿ ಅಬ್ದುಲ್ ಮಜೀದ್, ತಮ್ಮ ಕಾಫಿ ಘಟಕದ ಬಳಿ ಸೂಕ್ತ ಚರಂಡಿ ಇಲ್ಲದೇ ತೊಂದರೆಯಾಗುತ್ತಿದೆ ಎಂದರು.

ಉದ್ಯಮಿ ರಾಜಶೇಖರ್, ಕೈಗಾರಿಕಾ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳ ಬೇಜವಬ್ದಾರಿಯಿಂದಾಗಿ ಕೈಗಾರಿಕಾ ಪ್ರದೇಶ ರಾತ್ರಿ ವೇಳೆ ಕತ್ತಲಲ್ಲಿ ಮುಳುಗುತ್ತಿದೆ. ಕೂಡಲೇ ವಿದ್ಯುತ್ ಬೆಳಕಿನ ಸೌಕರ್ಯ ಒದಗಿಸಬೇಕೆಂದರು.

ಸಮಸ್ಯೆಗಳನ್ನು ಆಲಿಸಿ ಮಾತನಾ ಡಿದ ಶಾಸಕ ಡಾ.ಮಂಥರ್‌ಗೌಡ, ೩೦ ವರ್ಷಗಳ ಹಿಂದೆ ಕೈಗಾರಿಕಾ ಪ್ರದೇಶ ನಿರ್ಮಿಸಿರುವ ಗುಂಡೂರಾವ್ ಅವರ ದೂರದೃಷ್ಟಿ ಶ್ಲಾಘನೀಯ. ಆದರೆ ಕೈಗಾರಿಕಾ ಪ್ರದೇಶ ವಿಸ್ತರಣೆಯಾ ಗದಿರುವುದು ಬೇಸರದ ಸಂಗತಿ. ಆದಾಗ್ಯೂ ಕೈಗಾರಿಕಾ ಪ್ರದೇಶದ ವಿಸ್ತರಣೆಗೆ ಕುಶಾಲನಗರ ತಾಲೂಕಿನಲ್ಲಿ ಸೂಕ್ತ ಭೂಮಿಯನ್ನು ಪತ್ತೆ ಹಚ್ಚುವಂತೆ ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ಆಯುಕ್ತ ಟಿ.ದಿನೇಶ್ ಅವರಿಗೆ ಸೂಚಿಸಿದರು.

ಕೈಗಾರಿಕೆಗಳಿಂದ ಸ್ಥಳೀಯ ಕೂಡುಮಂಗಳೂರು ಗ್ರಾಮ ಪಂಚಾಯಿತಿಯೆ ಕಂದಾಯ ಕಟ್ಟಿಸಿಕೊಂಡು ಅಗತ್ಯ ಅನುಕೂಲ ಮಾಡಿಕೊಡಲಿ. ಈ ಬಗ್ಗೆ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಚಕಾರ ತೆಗೆಯದಂತೆ ಕೈಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ನಿರ್ದೇಶನ ನೀಡಿದರು.

ಕಾರ್ಮಿಕರು ಸೇರಿದಂತೆ ಕೈಗಾರಿಕಾ ಪ್ರದೇಶದ ಆಸುಪಾಸಿನ ನಿವಾಸಿಗಳಿಗೆ ಕುಡಿಯುವ ನೀರು ಒದಗಿಸಲು ಹಾರಂಗಿಯಿAದ ಕುಡಿಯುವ ನೀರಿನ ಕ್ರಿಯಾ ಯೋಜನೆ ತಯಾರಿಸಲು ಕೈಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಕೈಗಾರಿಕಾ ಬಡಾವಣೆಯ ರಸ್ತೆಗಳಿಗೆ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಹಾಗೂ ಚರಂಡಿಗಳನ್ನು ನಿರ್ಮಿಸಿ ಕೈಗಾರಿಕೋದ್ಯಮಿಗಳಿಗೆ ಅನುಕೂಲ ಒದಗಿಸಲು ಸೂಚಿಸಿದರು. ಈ ಸಂದರ್ಭ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರನಾಯಕ್, ಪಿಡಿಒ ಸಂತೋಷ್, ಕೈಗಾರಿಕೋದ್ಯಮಿ ಸಾತಪ್ಪನ್, ಕುಮಾರ್, ಕಣ್ಣನ್, ಸಾಧಿಕ್, ವಿಶ್ವನಾಥನ್, ಭಾವನಾ ಪ್ರವೀಣ್ ಮೊದಲಾದವರಿದ್ದರು.