ಕಣಿವೆ, ಜ. ೧೭: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಅಧ್ಯಕ್ಷತೆಯಲ್ಲಿ ಪಕ್ಷದ ಕಚೇರಿಯ ಸಭಾಂಗಣದಲ್ಲಿ ನಡೆಯಿತು.

ಪಕ್ಷಕ್ಕೆ ದುಡಿದ ಕಾರ್ಯಕರ್ತರನ್ನು ಅವರ ಹಿರಿತನ, ಜೇಷ್ಠತೆ, ಪಕ್ಷ ನಿಷ್ಠೆಗಳನ್ನು ಪರಿಗಣಿಸಿ ಜಾತಿ ಪ್ರಾಂತ್ಯ ಹಾಗೂ ವರ್ಗವಾರು ಗಣನೆಗೆ ತೆಗೆದುಕೊಂಡು ಸೂಕ್ತ ಹಾಗೂ ಅರ್ಹರನ್ನು ಸರ್ಕಾರದ ಪ್ರಮುಖ ಸಂಸ್ಥೆಗಳಿಗೆ ನಾಮನಿರ್ದೇಶನ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.

ಮುಂಬರುವ ಲೋಕಸಭಾ ಹಾಗೂ ಜಿ.ಪಂ. ಹಾಗೂ ತಾ.ಪಂ. ಚುನಾವಣೆಗಳಿಗೆ ಪಕ್ಷವನ್ನು ಅಮೂಲಾಗ್ರವಾಗಿ ಪುನರ್ ಸಂಘಟಿಸಿ ಬಲಪಡಿಸುವಂತೆ ತೀರ್ಮಾನಿಸಲಾಯಿತು.

ಸಹಕಾರ ಸಂಘಗಳ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಸಹಕಾರ ಘಟಕವನ್ನು ನೂತನವಾಗಿ ರಚಿಸುವಂತೆ, ಈಗಾಗಲೇ ಇರುವ ಪಕ್ಷದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಲಯ ಘಟಕಗಳ ಕಮಿಟಿಗಳ ವಿಸರ್ಜನೆ ಮಾಡಿ, ನೂತನ ಸಮಿತಿಯನ್ನು ಬೂತ್ ಹಾಗೂ ವಲಯ ಮಟ್ಟದಲ್ಲಿ ಪುನರ್ ರಚಿಸುವ ಬಗ್ಗೆ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಪಕ್ಷದ ವಿವಿಧ ಘಟಕಗಳ ಪ್ರಮುಖ ಪದಾಧಿಕಾರಿಗಳಾದ ಬಿ.ಜಿ. ಮಂಜುನಾಥ್, ಕೆ.ಪಿ. ಚಂದ್ರಕಲಾ, ಕೆ.ಕೆ. ಮಂಜುನಾಥ ಕುಮಾರ್, ಟಿ.ಪಿ. ಹಮೀದ್, ನಟೇಶ್ ಗೌಡ, ಟಿ.ಕೆ. ವಸಂತ, ಅಬ್ದುಲ್ ರಜಾಕ್, ಪ್ರಮೋದ್, ಟಿ.ಪಿ. ಹಮೀದ್, ಬಿ.ಎಸ್. ಚಂದ್ರಶೇಖರ್, ಹೊಸಮನೆ ವಸಂತಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸುನೀತಾ, ಅಬ್ದುಲ್ ಲತೀಫ್ ಮೊದಲಾದವರಿದ್ದರು.