ನಾಪೋಕ್ಲು, ಜ. ೧೭: ಇಲ್ಲಿಗೆ ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಸಂಪರ್ಕಿಸುವ ರಸ್ತೆ ಹಾಗೂ ಮೋರಿ ಅಪಾಯ ಮಟ್ಟದ ಲ್ಲಿದ್ದು ಸ್ಥಳಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಪರಿಶೀಲಿಸಿದರು. ಕಕ್ಕಬ್ಬೆ ಪಟ್ಟಣದಿಂದ ದೇವಾಲಯಕ್ಕೆ ತೆರಳುವ ಸುಮಾರು ೨೦೦ ಮೀಟರ್ ರಸ್ತೆ ತೀವ್ರ ಹದಗೆಟ್ಟಿದ್ದು ಮಾತ್ರವಲ್ಲದೆ ರಸ್ತೆಯಲ್ಲಿರುವ ಹಳೆಯ ಮೋರಿ ಕುಸಿದಿರುವ ಬಗ್ಗೆ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ಶಾಸಕರ ಗಮನಕ್ಕೆ ತಂದಿದ್ದರು.
ಇವರ ಮನವಿಯನ್ನು ಪರಿಗಣಿಸಿ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಹಾಗೂ ಮೋರಿಯನ್ನು ವೀಕ್ಷಿಸಿದ ಶಾಸಕರು ದುರಸ್ತಿಪಡಿಸಿಕೊಡುವ ಭರವಸೆಯನ್ನು ನೀಡಿ ಲೋಕೋಪಯೋಗಿ ಇಲಾ ಖೆಯ ಅಭಿಯಂತರರನ್ನು ಸಂಪರ್ಕಿಸಿ ಕೂಡಲೇ ಪರಿಶೀಲಿಸಿ ದುರಸ್ತಿ ಮಾಡಿಕೊಡುವಂತೆ ಸೂಚಿಸಿದರು.
ಈ ಸಂದರ್ಭ ನಾಪೋಕ್ಲು ವಲಯ ಕಾಂಗ್ರೆಸ್ ಅಧ್ಯಕ್ಷ ಮಾಚೇಟಿರ ಕುಸು ಕುಶಾಲಪ್ಪ, ಬೊಳ್ಳಂಡ ಶರೀನ್ ಸೇರಿದಂತೆ ಇನ್ನಿತರರು ಹಾಜರಿದ್ದರು.