ಕುಶಾಲನಗರ, ಜ. ೧೭: ಲಾರಿ ಮತ್ತು ಸರಕು ಸಾಗಾಣಿಕೆ ವಾಹನಗಳ ಮಾಲೀಕರು ಚಾಲಕರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಯು ತ್ತಿರುವ ಅನಿರ್ದಿಷ್ಟ ಕಾಲ ಮುಷ್ಕರಕ್ಕೆ ಕುಶಾಲನಗರದಲ್ಲಿ ವಿವಿಧ ಸಂಘಟನೆ ಗಳು ಬೆಂಬಲ ವ್ಯಕ್ತಪಡಿಸಿದ್ದು ಬುಧವಾರ ಮಧ್ಯರಾತ್ರಿಯಿಂದ ಸರಕು ಸಾಗಾಣಿಕೆ ವಾಹನಗಳನ್ನು ಸಂಪೂರ್ಣ ಬಂದ್ ಮಾಡುವ ಕಾರ್ಯಕ್ಕೆ ಸಿದ್ಧತೆ ನಡೆಸಿದ್ದಾರೆ.
ಕುಶಾಲನಗರ ಕಾವೇರಿ ಲಾರಿ ಮಾಲೀಕರ ಸಂಘ, ಕುಶಾಲನಗರ ಮಿನಿ ಲಾರಿ ಮಾಲೀಕರ ಸಂಘ ಮತ್ತು ಕೂರ್ಗ್ ಲಾರಿ ಚಾಲಕರ ಮಾಲೀಕರ ಸಂಘ ಪ್ರಮುಖರು ಈ ಬಗ್ಗೆ ಹೇಳಿಕೆ ನೀಡಿದ್ದು, ಸರ್ಕಾರದ ಇತ್ತೀಚಿನ ಕಾನೂನುಗಳ ವಿರುದ್ಧ ಲಾರಿ ಚಾಲಕರು, ಮಾಲೀಕರು ಖಂಡನೆ ವ್ಯಕ್ತಪಡಿಸಿದ್ದು ಬುಧವಾರ ರಾತ್ರಿ ೧೨ ಗಂಟೆಯಿAದ ಅನಿರ್ದಿಷ್ಟ ಅವಧಿ ಮುಷ್ಕರ ಹೂಡಲಾಗುವುದು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಕುಶಾಲನಗರ ಕಾವೇರಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಎ. ಲೋಕೇಶ್, ಮಿನಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ದೊಡ್ಡಣ್ಣ ಮತ್ತು ಕೂರ್ಗ್ ಲಾರಿ ಚಾಲಕರು ಮಾಲೀಕರ ಸಂಘದ ಅಧ್ಯಕ್ಷ ರಫೀಕ್ ತಮ್ಮ ಬೇಡಿಕೆಗಳು ಈಡೇರಿಸುವ ತನಕ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮುಷ್ಕರಕ್ಕೆ ಪೂರ್ವಭಾವಿಯಾಗಿ ಕುಶಾಲನಗರದ ಗಡಿಭಾಗದ ಅರಣ್ಯ ತಪಾಸಣಾ ಗೇಟ್ ಬಳಿ ಪ್ರತಿ ಸರಕು ಮುಷ್ಕರವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಹಿಟ್ ಅಂಡ್ ರನ್ ಪ್ರಕರಣ ಗಳಲ್ಲಿ ಚಾಲಕರಿಗೆ ೧೦ ವರ್ಷ ಜೈಲು ಮತ್ತು ೭ ಲಕ್ಷ ದಂಡ ವಿಧಿಸುವ ಕಾನೂನು ತಕ್ಷಣ ಹಿಂಪಡೆಯಬೇಕು. ರಾಜ್ಯದ ಗಡಿಭಾಗಗಳಲ್ಲಿರುವ ಎಲ್ಲಾ ಚೆಕ್ ಪೋಸ್ಟ್ ಕೇಂದ್ರ ತೆರವುಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ರಾಜ್ಯಾದ್ಯಂತ ಮುಷ್ಕರ ನಡೆಯಲಿದೆ ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ. ಮುಷ್ಕರದಲ್ಲಿ ಲಾರಿ, ಮಿನಿ ಲಾರಿಗಳು ಗೂಡ್ಸ್ಗಳು ಮತ್ತು ಆಟೋ ರಿಕ್ಷಾಗಳ ಸಂಘಟನೆಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ
ಈ ಸಂದರ್ಭ ಸಂಘಟನೆಗಳ ಪ್ರಮುಖರಾದ ಡಿ.ಕೆ. ಗಣೇಶ್ ಜಯಣ್ಣ, ಸುರೇಂದ್ರ, ಸಂದೀಪ್, ಮಹೇಶ್, ಅಶ್ರಫ್ ಮತ್ತಿತರರಿದ್ದರು.