ಮಡಿಕೇರಿ, ಜ. ೧೬: ಕೊಡಗು ಜಿಲ್ಲೆಯಲ್ಲಿ ೨೦೨೩-೨೪ನೇ ಸಾಲಿನ ಜನವರಿ ಮೊದಲ ವಾರದಿಂದ ಸುರಿದ ಅಕಾಲಿಕ ನಿರಂತರ ಮಳೆಯಿಂದಾಗಿ ಬೆಳೆಹಾನಿಯಾಗಿದ್ದು, ಅಕಾಲಿಕ ಮಳೆ, ಹವಮಾನ ವೈಪರೀತ್ಯದಿಂದಾಗಿ ಜಿಲ್ಲೆಯಲ್ಲಿ ಶೇ.೩೩ಕ್ಕಿಂತ ಅಧಿಕ ಬೆಳೆ ಹಾನಿಯಾಗಿರುವ ಪ್ರಕರಣಗಳನ್ನು ಪರಿಶೀಲಿಸುವ ಸಂಬAಧ ತಂಡ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ರಾಜಾ ತಿಳಿಸಿದ್ದಾರೆ.
ತಂಡದಲ್ಲಿ ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಉಪನಿರ್ದೇಶಕರು, ತೋಟಗಾರಿಕಾ, ಉಪನಿರ್ದೇಶಕರು ಕಾಫಿ ಬೋರ್ಡ್, ಮಡಿಕೇರಿ ಸೋಮವಾರಪೇಟೆ, ವೀರಾಜಪೇಟೆ, ಕುಶಾಲನಗರ ಹಾಗೂ ಪೊನ್ನಂಪೇಟೆ ತಹಶೀಲ್ದಾರ್ಗಳು ಇರಲಿದ್ದಾರೆ.
ಈ ತಂಡದ ಮೇಲುಸ್ತುವಾರಿಯನ್ನು ಉಪವಿಭಾಗಾಧಿಕಾರಿಗಳು ನಿರ್ವಹಿಸಲಿದ್ದು, ಶೇ.೩೩ಕ್ಕಿಂತ ಅಧಿಕ ಬೆಳೆಹಾನಿಯಾದ ಬಗ್ಗೆ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸ್ಥಳ ಪರಿಶೀಲನೆ ನಡೆಸಿ ಛಾಯಾಚಿತ್ರದೊಂದಿಗೆ ತಾ.೨೫ರ ಒಳಗಾಗಿ ಬೆಳೆ ಹಾನಿಯ ಬಗ್ಗೆ ಖಚಿತ ವರದಿಯನ್ನು ಸಲ್ಲಿಸಬೇಕು. ತಾಲೂಕುವಾರು ತಂಡಗಳನ್ನು ಕಾಫಿ ಮಂಡಳಿ, ಕೃಷಿ, ತೋಟಗಾರಿಕೆ ಇಲಾಖೆಗಳ ಸಹಯೋಗದೊಂದಿಗೆ ರಚಿಸಿಕೊಂಡು ತಯಾರಿಸಿದ ವರದಿಯನ್ನು ಕ್ರೋಢಿಕರಿಸಿ ಸಂಬAಧಿಸಿದ ತಹಶೀಲ್ದಾರ್ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.