ಮಣಿಪುರದಲ್ಲಿ ಮತ್ತೆ ಹಿಂಸಾಚಾರ-ಪೊಲೀಸ್ ಸಾವು
ಇಂಫಾಲ್, ಜ. ೧೭: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಗಡಿ ಪಟ್ಟಣವಾದ ಮೊರೆಹ್ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ತುರ್ತು ಅವಶ್ಯಕತೆಗಳನ್ನು ಪೂರೈಸಲು ಹೆಲಿಕಾಪ್ಟರ್ಗಳನ್ನು ನೀಡುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಮಣಿಪುರ ಸರ್ಕಾರ ಬುಧವಾರ ಮನವಿ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬAಧ ಮಣಿಪುರ ಗೃಹ ಇಲಾಖೆ ಆಯುಕ್ತ ಟಿ. ರಂಜಿತ್ ಸಿಂಗ್ ಅವರು ಕೇಂದ್ರ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಗೆ ಪತ್ರ ಬರೆದಿದ್ದು, "ಗಡಿ ಭಾಗದ ಪಟ್ಟಣವಾದ ಮೊರೆಹ್ನಲ್ಲಿ ನಿರಂತರ ಗುಂಡಿನ ಚಕಮಕಿ ನಡೆಯುತ್ತಿರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಕಳವಳಕಾರಿಯಾಗಿದೆ. ಇಂದು ಬೆಳಿಗ್ಗೆ ಒಬ್ಬ ಐಆರ್ಬಿ ಸಿಬ್ಬಂದಿ ಸಾವಿಗೂ ಈ ಗುಂಡಿನ ಚಕಮಕಿ ಕಾರಣವಾಗಿದೆ ಎಂದು ಹೇಳಿದ್ದಾರೆ. "ಮೊರೆಹ್ನಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ವೈದ್ಯಕೀಯ ತುರ್ತುಸ್ಥಿತಿ ಯಾವಾಗ ಬೇಕಾದರೂ ಉದ್ಭವಿಸಬಹುದು" ಎಂದು ಪತ್ರದಲ್ಲಿ ತಿಳಿಸಲಾಗಿದೆ. ಬುಧವಾರ ಬೆಳಿಗ್ಗೆ ಮೂರಕ್ಕೂ ಹೆಚ್ಚು ಸ್ಥಳಗಳಲ್ಲಿ ಅತ್ಯಾಧುನಿಕ ಶಸ್ತಾçಸ್ತಾçಗಳನ್ನು ಹೊಂದಿರುವ ಶಂಕಿತ ಕುಕಿ ಉಗ್ರಗಾಮಿಗಳು ಮತ್ತು ಭದ್ರತಾ ಪಡೆಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದ್ದರಿಂದ ಮಣಿಪುರ ಸರ್ಕಾರ, ಕನಿಷ್ಟ ಏಳು ದಿನಗಳ ಕಾಲ ಹೆಲಿಕಾಪ್ಟರ್ಗಳನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಿದೆ. ಮೊರೆಹ್, ರಾಜಧಾನಿ ಇಂಫಾಲ್ನಿAದ ೧೦೫ ಕಿಮೀ ದೂರದಲ್ಲಿದೆ. ತೆಂಗ್ನೌಪಾಲ್ ಜಿಲ್ಲೆಯಲ್ಲಿನ ಅಸ್ಥಿರ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಮತ್ತು ಕುಕಿ ಉಗ್ರಗಾಮಿಗಳ ಹೊಂಚುದಾಳಿ, ಬುಡಕಟ್ಟು ಮಹಿಳೆಯರ ಹೆದ್ದಾರಿ ದಿಗ್ಬಂಧನದ ಬೆದರಿಕೆಯಿಂದಾಗಿ, ಗಾಯಗೊಂಡ ಸಿಬ್ಬಂದಿಯನ್ನು ಏರ್ಲಿಫ್ಟ್ ಮಾಡಲು ಹೆಲಿಕಾಪ್ಟರ್ ಸೇವೆ ಏಕೈಕ ಅನುಕೂಲಕರ ಮಾರ್ಗವಾಗಿದೆ. ಭದ್ರತಾ ಪಡೆಗಳು ಮತ್ತು ಕುಕಿ ಉಗ್ರರ ನಡುವೆ ಇಂದು ಬೆಳಗ್ಗೆಯಿಂದ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ ಮಣಿಪುರ ಪೊಲೀಸ್ ಕಮಾಂಡೊ ಮೃತಪಟ್ಟಿದ್ದಾರೆ. ಮೃತ ಕಮಾಂಡೋನನ್ನು ಮೊರೆಹ್ನ ರಾಜ್ಯ ಪೊಲೀಸ್ ಕಮಾಂಡೊದ ಐಆರ್ಬಿ ಸಿಬ್ಬಂದಿ ವಾಂಗ್ಖೇಮ್ ಸೋಮೊರ್ಜಿತ್ ಎಂದು ಗುರುತಿಸಲಾಗಿದೆ. ಸೊಮೊರ್ಜಿತ್ ಇಂಫಾಲ ಪಶ್ಚಿಮ ಜಿಲ್ಲೆಯ ಮಾಲೊಮ್ ಮೂಲದವರಾಗಿದ್ದಾರೆ.
ಶಾಸಕರ ಅನರ್ಹತೆ ಪ್ರಕರಣ-ಮಹಾರಾಷ್ಟç ಸ್ಪೀಕರ್ಗೆ ನೋಟೀಸ್
ಮುಂಬೈ, ಜ. ೧೭: ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬAಧಿಸಿದAತೆ ಬಾಂಬೆ ಹೈಕೋರ್ಟ್ ಬುಧವಾರ ಮಹಾರಾಷ್ಟç ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಮತ್ತು ಉದ್ಧವ್ ಠಾಕ್ರೆ ಗುಂಪಿನ ೧೪ ಶಾಸಕರಿಗೆ ನೋಟಿಸ್ ಜಾರಿ ಮಾಡಿದೆ. ಶಾಸಕರನ್ನು ಅನರ್ಹಗೊಳಿಸದ ನಾರ್ವೇಕರ್ ಅವರ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಗಿರೀಶ್ ಕುಲಕರ್ಣಿ ಮತ್ತು ಫಿರ್ದೋಶ್ ಪೂನಿವಾಲಾ ಅವರ ವಿಭಾಗೀಯ ಪೀಠ, ಮಹಾರಾಷ್ಟç ಶಾಸಕಾಂಗ ಸಚಿವಾಲಯಕ್ಕೆ ನೋಟೀಸ್ ಜಾರಿ ಮಾಡಿದೆ ಮತ್ತು ಅರ್ಜಿಗೆ ತಮ್ಮ ಅಫಿಡವಿಟ್ಗಳನ್ನು ಸಲ್ಲಿಸುವಂತೆ ಎಲ್ಲಾ ಪ್ರತಿವಾದಿಗಳಿಗೆ ಸೂಚಿಸಿದೆ. ವಿಭಾಗೀಯ ಪೀಠ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ ೮ಕ್ಕೆ ಮುಂದೂಡಿದೆ. ಠಾಕ್ರೆ ಬಣದ ೧೪ ಶಾಸಕರ ಅನರ್ಹತೆ ಕೋರಿ ತಾವು ಸಲ್ಲಿಸಿದ್ದ ಅರ್ಜಿಯನ್ನು ತಾ. ೧೦ ರಂದು ಸ್ಪೀಕರ್ ನಾರ್ವೇಕರ್ ಅವರು ವಜಾಗೊಳಿಸಿದ್ದು, ಈ ಆದೇಶವನ್ನು ಪ್ರಶ್ನಿಸಿ ಶಿಂಧೆ ನೇತೃತ್ವದ ಶಿವಸೇನೆಯ ಮುಖ್ಯ ಸಚೇತಕ ಭರತ್ ಗೊಗವಾಲೆ ಅವರು ಅರ್ಜಿ ಸಲ್ಲಿಸಿದ್ದಾರೆ. ಸ್ಪೀಕರ್ ಆದೇಶ ಕಾನೂನು ಬಾಹಿರ ಎಂದು ಘೋಷಿಸಬೇಕು. ಅವರ ಆದೇಶವನ್ನು ರದ್ದುಗೊಳಿಸಿ, ಠಾಕ್ರೆ ಗುಂಪಿನ ಎಲ್ಲಾ ೧೪ ಶಾಸಕರನ್ನು ಅನರ್ಹಗೊಳಿಸುವಂತೆ ಗೋಗಾವಾಲೆ ಅವರು ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.