ಕಡಂಗ, ಜ. ೧೭: ‘ಪರಂಪರೆಯ ಪ್ರತಿನಿಧಿಗಳಾ ಗೋಣ’ ಎಂಬ ಧ್ಯೇಯ ವಾಕ್ಯದೊಂದಿಗೆ ತಾ.೨೪ ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿರುವ ಎಸ್.ವೈ.ಎಸ್. ೩೦ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಯುಕ್ತ ಎಸ್‌ವೈಎಸ್ ಕಡಂಗ ಯೂನಿಟ್ ವತಿಯಿಂದ ಎಸ್.ಬಿ.ಎಸ್. ವಿದ್ಯಾರ್ಥಿಗಳ ಸೈಕಲ್ ಜಾಥಾ ಕಾರ್ಯಕ್ರಮ ನಡೆಯಿತು.

ಜಾಥಾಕ್ಕೆ ಬದ್ರಿಯಾ ಸುನ್ನಿ ಮಸೀದಿಯ ಅಧ್ಯಕ್ಷ ಉಸ್ಮಾನ್ ಕೆ.ಇ. ಚಾಲನೆ ನೀಡಿದರು. ಜಾಥಾವು ಕೊಕ್ಕಂಡಬಾಣೆ ದರ್ಗಾ ಷರೀಫ್ ನವರೆಗೆ ತೆರಳಿ ಅಲ್ಲಿ ಬದ್ರಿಯ ಮದರಸ ಸದರ್ ಮುಹಲಿಮ್ ಶಿಯಾಬುದ್ದೀನ್ ಚೌಹರಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಕಡಂಗದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬದ್ರಿಯಾ ಮಸೀದಿಯಲ್ಲಿ ಸಮಾಪ್ತಿಗೊಂಡಿತು.

ಜಾಥಾವನ್ನು ಉದ್ದೇಶಿಸಿ ಎಸ್.ವೈ.ಎಸ್ ಅಧ್ಯಕ್ಷ ಹಾಗೂ ಪತ್ರಕರ್ತ ಅಶ್ರಫ್ ಮಾತನಾಡಿ ೩೦ನೇ ಮಹಾ ಸಮ್ಮೇಳನದ ಪ್ರಚಾರಾರ್ಥ ಕಡಂಗ ಯೂನಿಟ್ ವತಿಯಿಂದ ಎಸ್.ಬಿ.ಎಸ್ ವಿದ್ಯಾರ್ಥಿಗಳ ಸೈಕಲ್ ಜಾಥಾ ಹಮ್ಮಿಕೊಂಡಿದ್ದು ಜಾಥಾ ಯಶಸ್ವಿಯಾಗಿದೆ ಎಂದರು.

ಸದರ್ ಮುಹಲಿಮ್ ಶಿಯಾಬುದ್ದೀನ್ ಜೌಹರಿ ಮಾತನಾಡಿ ಮಂಗಳೂರಿನಲ್ಲಿ ತಾ. ೨೪ ರಂದು ನಡೆಯಲಿರುವ ಎಸ್.ವೈ.ಎಸ್. ೩೦ನೇ ಮಹಾ ಸಮ್ಮೇಳನದಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿ ಗೊಳಿಸಬೇಕೆಂದರು. ಈ ಸಂದರ್ಭ ಬದ್ರಿಯಾ ಮಸೀದಿಯ ಉಮ್ಮರ್ ಮುಸ್ಲಿಯಾರ್, ಎಸ್.ವೈ.ಎಸ್ ಕಡಂಗ ಸರ್ಕಲ್ ಕಾರ್ಯದರ್ಶಿ ರಜಾಕ್ ಸಿ.ಎ ,ಯೂನಿಟ್ ಎಸ್ ವೈ ಎಸ್ ಜೊತೆ ಕಾರ್ಯದರ್ಶಿ ಶಂಸುದ್ದಿನ್, ಸರ್ಕಲ್ ಇಶಾಬ ಕಾರ್ಯದರ್ಶಿ ಕಬೀರ್, ರಾಝಿಕ್ ಪಿ.ಎ, ಉಸ್ಮಾನ್ ಸಿ.ಇ., ಎಸ್.ಎಸ್.ಎಫ್.ನ ಮುರ್ಷಿದ್, ಸುಫೈದ್, ಆಜ್ಮಿಲ್, ಝಹಿದ್, ಮುಸ್ಲಿಂ ಜಮಾಅತ್‌ನ ಸಮದ್ ಎ.ಎ. ಹಾಗೂ ಎಸ್.ಬಿ.ಎಸ್ ವಿದ್ಯಾರ್ಥಿಗಳು ಮತಿತ್ತರರು ಇದ್ದರು.