*ಗೋಣಿಕೊಪ್ಪಲು, ಜ. ೧೬: ಕೊಡಗು ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಮತ್ತು ಮೈಸೂರು ರೇಸ್ ಕ್ಲಬ್ ಚಾರಿಟೇಬಲ್ ಟ್ರಸ್ಟ್ ಕಣ್ಣಿನ ಆಸ್ಪತ್ರೆ ವತಿಯಿಂದ ಸಾರ್ವಜನಿಕರಿಗಾಗಿ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಶಸ್ತçಚಿಕಿತ್ಸಾ ಶಿಬಿರವನ್ನು ತಾ.೧೮ ರಂದು ತಿತಿಮತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಶಿಬಿರದಲ್ಲಿ ಅಗತ್ಯವಿದ್ದವರಿಗೆ ಉಚಿತವಾಗಿ ಲೆನ್ಸ್ ಅಳವಡಿಸಲಾಗುವುದು.

ಶಿಬಿರಕ್ಕೆ ಬರುವವರು ಶುದ್ಧವಾಗಿ ಬರಬೇಕು. ಬರುವಾಗ ರೋಗಿಗಳ ಹೆಸರು, ದೂರವಾಣಿ ಸಂಖ್ಯೆ ಮತ್ತು ಪೂರ್ಣ ವಿಳಾಸವನ್ನು ಬಿಳಿಯ ಹಾಳೆಯಲ್ಲಿ ಬರೆದು ತರಬೇಕು. ಜೊತೆಯಲ್ಲಿ ತಮ್ಮ ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ಮತದಾನದ ಗುರುತಿನ ಚೀಟಿ ಮತ್ತು ಪಾನ್ ಕಾರ್ಡ್ನ ಜೆರಾಕ್ಸ್ ಪ್ರತಿಯನ್ನು ತರಬೇಕು. ಶಿಬಿರದಲ್ಲಿ ತಪಾಸಣೆ ನಡೆಸಿ ಕಣ್ಣಿನಲ್ಲಿ ಪೊರೆಯಿದೆ ಎಂದು ದೃಢಪಟ್ಟರೆ ಅದೇ ದಿನ ಮೈಸೂರಿನಲ್ಲಿರುವ ಎಂ.ಆರ್.ಸಿ. ಕಣ್ಣಿನ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತçಚಿಕಿತ್ಸೆ ಮಾಡಲಾಗುವುದು.

ತಪಾಸಣೆಗೆ ಬರುವ ಎಲ್ಲಾ ರೋಗಿಗಳು ಕಡ್ಡಾಯವಾಗಿ ಮಾಸ್ಕನ್ನು ಧರಿಸಿರಬೇಕು. ಶಸ್ತçಚಿಕಿತ್ಸೆ ಅಗತ್ಯವಿದೆ ಎನ್ನುವ ರೋಗಿಗಳು ತಮಗೆ ಹೃದಯ, ರಕ್ತದೊತ್ತಡ, ಅಸ್ತಮಾ, ಸಕ್ಕರೆ ಕಾಯಿಲೆಗಳಿದ್ದರೆ ಈ ಕುರಿತು ಸಂಬAಧಿಸಿದ ವೈದ್ಯರಿಂದ ಕಣ್ಣಿನ ಶಸ್ತçಚಿಕಿತ್ಸೆ ನಡೆಸಲು ಯಾವುದೇ ಅಭ್ಯಂತರವಿಲ್ಲ ಎಂಬ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತರಬೇಕು. ಶಿಬಿರದ ಕುರಿತು ಹೆಚ್ಚಿನ ಮಾಹಿತಿಗಾಗಿ ೦೮೨೧೨೪೭೨೧೦೨, ೯೬೬೩೮೮೪೫೪೪ ಸಂಪರ್ಕಿಸಬಹುದು.