್ಡ ಅನಿಲ್ ಎಚ್.ಟಿ.
ಅಯೋಧ್ಯೆ - ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಐತಿಹಾಸಿಕ ನಿರ್ಣಯ ಶ್ರೀ ರಾಮಮಂದಿರ ನಿರ್ಮಾಣ ತೀರ್ಥಕ್ಷೇತ್ರ ಟ್ರಸ್ಟ್ನಿಂದ ಹೊರಬಿದ್ದಿದೆ. ಶ್ರೀ ರಾಮ ಮಂದಿರದ ಗರ್ಭಗೃಹದಲ್ಲಿ ಪ್ರತಿಷ್ಠಾಪನೆಗೆ ಮೈಸೂರಿನ ಅರುಣ್ ಯೋಗಿರಾಜ್ ರೂಪಿಸಿದ್ದ ಬಾಲರಾಮನ ಶಿಲ್ಪವೇ ಆಯ್ಕೆಯಾಗಿದೆ. ಈ ಮೂಲಕ ಮೈಸೂರಿನ ಶಿಲ್ಪಕಲೆ ವಿಶ್ವಖ್ಯಾತಿಗೆ ಪಾತ್ರವಾಗಲು ಕಾರಣವಾಗಿದೆ. ಅಯೋಧ್ಯೆಯಲ್ಲಿ ಭಕ್ತರು ಕೈಮುಗಿಯುವ ಬಾಲರಾಮನ ವಿಗ್ರಹ ಕನ್ನಡಿಗನಿಂದ ಕೆತ್ತಲ್ಪಟ್ಟಿದ್ದು ಎಂಬ ವಿಶೇಷ ಇತಿಹಾಸದಲ್ಲಿ ದಾಖಲಾಗಲಿದೆ.
ಮಡಿಕೇರಿಯಲ್ಲಿ ಸರ್ಕಾರಿ ಬಸ್ ಡಿಕ್ಕಿಯಾಗಿ ಹಾನಿಗೊಳಗಾದ ಜನರಲ್ ತಿಮ್ಮಯ್ಯ ಪ್ರತಿಮೆಗೂ ಅರುಣ್ ಯೋಗಿರಾಜ್ ಕಾಯಕಲ್ಪ ನೀಡಿರುವುದು ಮತ್ತೊಂದು ವಿಶೇಷ. ದಶಕಗಳ ಕಾಲ ್ಡ ಅನಿಲ್ ಎಚ್.ಟಿ.
ಅಯೋಧ್ಯೆ - ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಐತಿಹಾಸಿಕ ನಿರ್ಣಯ ಶ್ರೀ ರಾಮಮಂದಿರ ನಿರ್ಮಾಣ ತೀರ್ಥಕ್ಷೇತ್ರ ಟ್ರಸ್ಟ್ನಿಂದ ಹೊರಬಿದ್ದಿದೆ. ಶ್ರೀ ರಾಮ ಮಂದಿರದ ಗರ್ಭಗೃಹದಲ್ಲಿ ಪ್ರತಿಷ್ಠಾಪನೆಗೆ ಮೈಸೂರಿನ ಅರುಣ್ ಯೋಗಿರಾಜ್ ರೂಪಿಸಿದ್ದ ಬಾಲರಾಮನ ಶಿಲ್ಪವೇ ಆಯ್ಕೆಯಾಗಿದೆ. ಈ ಮೂಲಕ ಮೈಸೂರಿನ ಶಿಲ್ಪಕಲೆ ವಿಶ್ವಖ್ಯಾತಿಗೆ ಪಾತ್ರವಾಗಲು ಕಾರಣವಾಗಿದೆ. ಅಯೋಧ್ಯೆಯಲ್ಲಿ ಭಕ್ತರು ಕೈಮುಗಿಯುವ ಬಾಲರಾಮನ ವಿಗ್ರಹ ಕನ್ನಡಿಗನಿಂದ ಕೆತ್ತಲ್ಪಟ್ಟಿದ್ದು ಎಂಬ ವಿಶೇಷ ಇತಿಹಾಸದಲ್ಲಿ ದಾಖಲಾಗಲಿದೆ.
ಮಡಿಕೇರಿಯಲ್ಲಿ ಸರ್ಕಾರಿ ಬಸ್ ಡಿಕ್ಕಿಯಾಗಿ ಹಾನಿಗೊಳಗಾದ ಜನರಲ್ ತಿಮ್ಮಯ್ಯ ಪ್ರತಿಮೆಗೂ ಅರುಣ್ ಯೋಗಿರಾಜ್ ಕಾಯಕಲ್ಪ ನೀಡಿರುವುದು ಮತ್ತೊಂದು ವಿಶೇಷ. ದಶಕಗಳ ಕಾಲ ಬಿದ್ದಿದ್ದು, ಆ ಪೈಕಿ ಮೈಸೂರಿನ ಅರುಣ್ ಯೋಗಿರಾಜ್ ಕೂಡ ಒಬ್ಬರಾಗಿದ್ದರು.
ರಾಮಮಂದಿರ ನಿರ್ಮಾಣ ತೀರ್ಥ ಕ್ಷೇತ್ರ ಟ್ರಸ್ಟ್ ನೀಡಿದ್ದ ಗಡುವಿಗಿಂತ ನಾಲ್ಕು ದಿನ ಮುಂಚಿತವಾಗಿಯೇ ಅರುಣ್ ಯೋಗಿರಾಜ್ ಅವರು ಮಂದಿರದಲ್ಲಿ ಪ್ರತಿಷ್ಠಾಪಿಸುವ ‘ರಾಮ ಲಲ್ಲಾ’ ಪ್ರತಿಮೆ ಕೆತ್ತುವ ಕಾರ್ಯವನ್ನು ಪೂರ್ಣಗೊಳಿಸಿದ್ದರು.
ಬೆಂಗಳೂರಿನ ಜಿ.ಎಲ್. ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಸೇರಿದಂತೆ ದೇಶದ ಮೂವರು ಶಿಲ್ಪಿಗಳಲ್ಲಿ ಅರುಣ್ ಒಬ್ಬರಾಗಿದ್ದು, ಅವರಿಗೆ ರಾಮ್ ಲಲ್ಲಾನ ಪ್ರತಿಮೆಗಳನ್ನು ಕೆತ್ತಿಸುವ ಕೆಲಸವನ್ನು ನೀಡಲಾಗಿತ್ತು.
ನುರಿತ ಶಿಲ್ಪಕಲಾ ಶಾಸ್ತçಜ್ಞರು, ಇತಿಹಾಸ ತಜ್ಞರು, ಧರ್ಮಧಿಕಾರಿಗಳನ್ನು ಒಳಗೊಂಡ ಸಮಿತಿಯು ಮೂರು ವಿಗ್ರಹಗಳ ಪೈಕಿ ಅಂತಿಮವಾಗಿ ಮೈಸೂರಿನ ಅರು ಅರುಣ್ ಯೋಗಿರಾಜ್ ಅವರ ಮೂರ್ತಿಯನ್ನು ಆಯ್ಕೆ ಮಾಡಿದೆ.
ರಾಮಮಂದಿರದ ಮೂಲ ವಿಗ್ರಹವನ್ನು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಬುಜ್ಜೇಗೌಡನಪುರ ಗ್ರಾಮದಲ್ಲಿ ದೊರೆತ ಕೃಷ್ಣಶಿಲೆಯಲ್ಲಿ ನಿರ್ಮಾಣ ಮಾಡಲಾಗಿದೆ.
ಪ್ರತಿಮೆಯು ಅಡಿಯಿಂದ ಹಣೆಯವರೆಗೆ ೫೧ ಇಂಚು ಎತ್ತರವಿದೆ. ಇಡೀ ಪ್ರತಿಮೆಯು "ಪ್ರಭಾವಳಿ" ಸೇರಿದಂತೆ ಎಂಟು ಅಡಿ ಎತ್ತರ ಮತ್ತು ಮೂರೂವರೆ ಅಡಿ ಅಗಲವಿದೆ. ಐದು ವರ್ಷದ ಮಗುವಿನಂತೆ ಬಿಲ್ಲು ಮತ್ತು ಬಾಣವನ್ನು ಹಿಡಿದಿರುವ ಭಗವಾನ್ ರಾಮನ ಪ್ರತಿಮೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳುತ್ತಿರುವ ಅರುಣ್ ಯೋಗಿರಾಜ್ ಅವರ ಮೂರನೇ ಪ್ರತಿಮೆ ಇದಾಗಿದೆ. ಇದಕ್ಕೂ ಮುನ್ನ, ಕೇದಾರನಾಥದಲ್ಲಿ ಸ್ಥಾಪಿಸಲಾದ ಶ್ರೀ ಆದಿಶಂಕರಾಚಾರ್ಯರ ಪ್ರತಿಮೆ ಮತ್ತು ದೆಹಲಿಯ ಇಂಡಿಯಾ ಗೇಟ್ ಅಥವಾ ಕರ್ತವ್ಯ ಪಥ್ನಲ್ಲಿ ಸ್ಥಾಪಿಸಲಾದ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಪ್ರಧಾನಿ ಉದ್ಘಾಟಿಸಿದ್ದರು.
೨೦೨೪ರ ಜನವರಿ ೨೨ ರಂದು ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಗೆ ಆಹ್ವಾನಿಸಲಾದ ೨,೦೦೦ ಗಣ್ಯರಲ್ಲಿ ಅರುಣ್ ಕೂಡ ಒಬ್ಬರಾಗಿದ್ದಾರೆ.
ತಮ್ಮ ಪೂರ್ವಜರಿಂದ ಶಿಲ್ಪ ಕಲೆಯನ್ನು ಬಳುವಳಿಯೆಂಬAತೆ ಪಡೆದಿರುವ ಅರುಣ್, ಬಿಎ ಪದವೀಧರ. ಆ ಕುಟುಂಬದ ಐದನೇ ತಲೆಮಾರಿನ ಶಿಲ್ಪಿ, ೪೦ ವರ್ಷದ ಅರುಣ್, ೨೦೦೮ರಲ್ಲಿ ಪ್ರತಿಮೆಗಳನ್ನು ಕೆತ್ತುವ ಸಂಪ್ರದಾಯವನ್ನು ಮುಂದುವರಿಸಲು ಕಾರ್ಪೊರೇಟ್ ಉದ್ಯೋಗವನ್ನು ತೊರೆದರು ಮತ್ತು ೧,೦೦೦ಕ್ಕೂ ಹೆಚ್ಚು ಪ್ರತಿಮೆಗಳನ್ನು ಈವರೆಗೆ ಸಿದ್ಧಪಡಿಸಿದ್ದಾರೆ.