ಸೋಮವಾರಪೇಟೆ, ಜ. ೧೬: ಐಗೂರು ಗ್ರಾಮ ಪಂಚಾಯಿತಿಯಲ್ಲಿ ರೂ. ೧೫ ಲಕ್ಷಕ್ಕೂ ಅಧಿಕ ಹಣ ದುರುಪಯೋಗವಾಗಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು. ಸಾಕ್ಷö್ಯಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪಂಚಾಯಿತಿಯನ್ನು ತಕ್ಷಣ ಸೂಪರ್‌ಸೀಡ್ ಮಾಡಬೇಕೆಂದು ಸ್ಥಳೀಯ ಪ್ರಮುಖರು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್‌ಎಂಸಿ ಮಾಜೀ ಸದಸ್ಯ ಮಚ್ಚಂಡ ಅಶೋಕ್, ಐಗೂರು ಗ್ರಾ.ಪಂ. ಕಂಪ್ಯೂಟರ್ ಆಪರೇಟರ್‌ವೋರ್ವರು ಪಂಚಾಯಿತಿಯ ಸುಮಾರು ೧೫ ಲಕ್ಷಕ್ಕೂ ಅಧಿಕ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿರುವ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಬೇಕು. ಇದರಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯೂ ಹೊಣೆಯಾ ಗಿದ್ದು, ಇವರುಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪಂಚಾಯಿತಿಯ ಎಲ್ಲಾ ಹಣ ವಹಿವಾಟುಗಳಿಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಹೆಬ್ಬೆಟ್ಟಿನ ಗುರುತು ನೀಡಬೇಕು. ಹಣದ ಲೆಕ್ಕಪತ್ರವನ್ನು ಪ್ರತಿ ಸಾಮಾನ್ಯ ಸಭೆಯಲ್ಲಿ ಆಡಳಿತ ಮಂಡಳಿ ಪರಿಶೀಲಿಸಬೇಕು. ಆದರೆ ಐಗೂರು ಗ್ರಾ.ಪಂ.ನಲ್ಲಿ ಆಡಳಿತ ಮಂಡಳಿ ಈ ಬಗ್ಗೆ ಪರಿಶೀಲನೆಯನ್ನೇ ನಡೆಸಿಲ್ಲ. ಪಿಡಿಓ ಅವರ ಹೆಬ್ಬೆಟ್ಟಿನ ಗುರುತು ಬಳಸಿಕೊಂಡು ಭಾರೀ ಮೊತ್ತದ ಹಣ ದುರುಪಯೋಗ ಆಗಿದ್ದರೂ ಕೂಡ ಪಿಡಿಓ ವಿರುದ್ಧ ಈವರೆಗೆ ಕ್ರಮ ಜರುಗಿಲ್ಲ. ತಕ್ಷಣ ಪಿಡಿಓ ಅವರನ್ನು ಅಮಾನತುಗೊಳಿಸಿ, ಪಂಚಾಯಿತಿ ಯನ್ನು ಸೂಪರ್ ಸೀಡ್ ಮಾಡ ಬೇಕೆಂದು ಆಗ್ರಹಿಸಿದರು.

ಕಳೆದ ೧೫ ವರ್ಷಗಳಿಂದಲೂ ಪಂಚಾಯಿತಿಯಲ್ಲಿ ಅನೇಕ ಅವ್ಯವಹಾರ, ಹಣ ದುರುಪಯೋಗ ಆಗಿರುವ ಬಗ್ಗೆ ಸಂಶಯವಿದ್ದು, ಶಾಸಕರು ತಕ್ಷಣ ತನಿಖಾಧಿಕಾರಿ ಯನ್ನು ನೇಮಿಸಬೇಕೆಂದು ಒತ್ತಾಯಿಸಿದ ಅಶೋಕ್ ಅವರು, ಮುಂದಿನ ೧೫ ದಿನಗಳ ಒಳಗೆ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದಲ್ಲಿ ತಾ.ಪಂ. ಎದುರು ಪ್ರತಿಭಟನೆ ನಡೆಸಲಾಗು ವುದು. ಪ್ರಕರಣದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದರು.

ಇದರೊAದಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲೆಗಳ ಹೂಳೆತ್ತುವ ಕಾಮಗಾರಿ, ಇಂಗು ಗುಂಡಿ, ದನದ ಕೊಟ್ಟಿಗೆ, ಹಂದಿಗೂಡು, ಆಶ್ರಯ ಮನೆಗಳ ನಿರ್ಮಾಣದಲ್ಲೂ ಭಾರೀ ಅವ್ಯವಹಾರ ನಡೆದಿದೆ. ಮನೆ ನಿರ್ಮಿಸಲು ಎನ್‌ಓಸಿ ಪಡೆಯುವ ಸಂದರ್ಭ ಹಣ ನೀಡುವ ಸ್ಥಿತಿ ನಿರ್ಮಾಣವಾಗಿದೆ. ಅಮೃತ ಗ್ರಾಮ ಯೋಜನೆಯಡಿ ದುರುಪಯೋಗ ನಡೆದಿರುವ ಶಂಕೆಯಿದೆ ಎಂದು ಅಶೋಕ್ ಹೇಳಿದರು.

ಇದೀಗ ೧೫ ಲಕ್ಷ ದುರುಪಯೋಗವಾಗಿರುವ ಹಿನ್ನೆಲೆ ಹಿಂದಿನ ದಾಖಲೆಗಳನ್ನು ನಾಶಗೊಳಿಸುವ ಸಾಧ್ಯತೆಯಿದ್ದು, ತಕ್ಷಣ ಪಂಚಾಯಿತಿಯನ್ನು ಸೂಪರ್ ಸೀಡ್ ಮಾಡಿ ಸಾಕ್ಷö್ಯಗಳನ್ನು ವಶಪಡಿಸಿ ಕೊಳ್ಳಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಸ್ಥಳೀಯರಾದ ಎ.ಪಿ. ಸುಬ್ಬಯ್ಯ, ಎಂ.ಪಿ. ಧರ್ಮಪ್ಪ, ಸಿ.ಪಿ.ಲವಕುಮಾರ್, ಗರಗಂದೂರು ಲಕ್ಷö್ಮಣ್ ಉಪಸ್ಥಿತರಿದ್ದರು.