ಮಡಿಕೇರಿ, ಜ. ೧೭: ಗೋಣಿಕೊಪ್ಪ ಉಪವಿಭಾಗದಲ್ಲಿ ತಲೆದೋರಿರುವ ವಿದ್ಯುತ್ ಸಂಬAಧಿತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಸಾರ್ವಜನಿಕ ಹಿತರಕ್ಷಣಾ ಸಮಿತಿ ಪ್ರಮುಖರು ಗೋಣಿಕೊಪ್ಪ ಚೆಸ್ಕಾಂಗೆ ನೂತನವಾಗಿ ನೇಮಕಗೊಂಡ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಡಬ್ಲ್ಯೂಇ) ವಿವೇಕಾನಂದ ಪೊನ್ನಪ್ಪ ಅವರಿಗೆ ಮನವಿ ಮಾಡಿದರು.

ಅಧಿಕಾರಿಯನ್ನು ಭೇಟಿಯಾದ ಸಂಘಟನೆ ಪ್ರಮುಖರು, ಕೃಷಿಗೆ ನೀರಾವರಿ ಸಮಯವಾಗಿರುವ ಕಾರಣ ವಿದ್ಯುತ್ ಅಭಾವ ಸೃಷ್ಟಿಯಾಗದಂತೆ ಕ್ರಮಕೈಗೊಳ್ಳಬೇಕು. ಬೇಡಿಕೆ ಅನುಸಾರ ವಿದ್ಯುತ್ ಪೂರೈಸುವಂತೆ ಕೋರಿದರು.

ಈ ಸಂದರ್ಭ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ, ಕಾರ್ಯಾಧ್ಯಕ್ಷ ಬಾಚೀರ ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ, ಸಹ ಕಾರ್ಯದರ್ಶಿ ಕೋಳೇರ ನರೇಂದ್ರ ಹಾಜರಿದ್ದರು.