ಗೋಣಿಕೊಪ್ಪಲು, ಜ. ೧೬: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಯುವಜನೋತ್ಸವದ ‘ಯುವ ಝೇಂಕಾರ’ ಕಾರ್ಯಕ್ರಮದ ಅಂಗವಾಗಿ ಲಾಂಛನ ಬಿಡುಗಡೆಗೊಳಿಸಲಾಯಿತು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತಿಮ ಸುತ್ತಿನ ಸಭೆಯ ನಂತರ ಕಾಲೇಜಿನ ಡೀನ್ ಡಾ. ಜಿ.ಎಂ. ದೇವಗಿರಿ ಮುಂದಾಳತ್ವದಲ್ಲಿ ಅಧ್ಯಾಪಕ ವರ್ಗ ಲಾಂಛನವನ್ನು ಬಿಡುಗಡೆಗೊಳಿಸಿತು.

ತಾ. ೧೮ ರಿಂದ ೨೦ರವರೆಗೆ ೩ ದಿನಗಳ ಕಾಲ ೯ನೇ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವವನ್ನು ಯಶಸ್ವಿಯಾಗಿ ನಡೆಸಲು ಸಕಲ ವ್ಯವಸ್ಥೆಗಳು ಬಿರುಸಿನಿಂದ ಸಾಗಿವೆ.

ಈ ಸಂದರ್ಭ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ಸತೀಶ್ ಬಿ.ಎನ್., ಡಾ. ಹರೀಶ್ ಟಿ.ಎಸ್. ಡಾ. ಬಿ.ಜಿ. ನಾಯಕ್, ಡಾ. ಟಿ.ಎಸ್. ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.