ಮಡಿಕೇರಿ, ಜ. ೧೬: ನಗರದ ಗೌಳಿಬೀದಿಯ ಲಾಡ್ಜ್ವೊಂದರಲ್ಲಿ ತಂಗಿದ್ದ ಯುವಕನೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ.
ಮೂಲತಃ ಮೈಸೂರಿನ ಸಾತಗಳ್ಳಿ ಗ್ರಾಮದ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ಐಟಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಟೆಕ್ಕಿ ಸಂದೇಶ್ (೩೧) ಆತ್ಮಹತ್ಯೆ ಮಾಡಿಕೊಂಡ ಯುವಕ.
೮ ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ ಸಂದೇಶ್ ಅವಿವಾಹಿತನಾಗಿದ್ದು, ಎರಡು ದಿನಗಳ ಹಿಂದೆ ಬಂದು ಲಾಡ್ಜ್ನಲ್ಲಿ ರೂಂ ಪಡೆದಿದ್ದ. ಇಂದು ಬೆಳಿಗ್ಗೆ ರೂಂ ಖಾಲಿ ಮಾಡಬೇಕಿತ್ತು. ಅದರಂತೆ ಬೆಳಿಗ್ಗೆ ರೂಂನಿAದ ಹೊರಬಂದು ಖಾಲಿ ಮಾಡುವುದಾಗಿ ಲಾಡ್ಜ್ ಸಿಬ್ಬಂದಿಗೆ ತಿಳಿಸಿ, ರೂಂಗೆ ತೆರಳಿ ಬಾಗಿಲು ಹಾಕಿಕೊಂಡಿದ್ದು, ಲಾಡ್ಜ್ ಸಿಬ್ಬಂದಿ ಹಲವಾರು ಬಾರಿ ರೂಂನ ಬಾಗಿಲು ಬಡಿದರೂ ತೆರೆಯಲಿಲ್ಲ. ಇದರಿಂದ ಸಂಶಯ ಗೊಂಡ ಸಿಬ್ಬಂದಿ ಮಾಲೀಕರಿಗೆ ವಿಚಾರ ತಿಳಿಸಿದ್ದು, ಮಾಲೀಕರು ಬಂದು ವೆಂಟಿಲೇಟರ್ ಮೂಲಕ ನೋಡಿದಾಗ ಸಂದೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಈ ಬಗ್ಗೆ ಮಾಲೀಕರು ನೀಡಿದ ದೂರಿನನ್ವಯ ಮಡಿಕೇರಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಡೆತ್ನೋಟ್ ಸಿಕ್ಕಿದ್ದು, ಅದರಲ್ಲಿ ‘ಜೀವನದಲ್ಲಿ ಏನನ್ನು ಸಾಧಿಸ ಲಾಗಲಿಲ್ಲ. ಇದರಿಂದ ಬೇಸರವಾಗಿದೆ ಎಂದು ಮನೆಯವರ ಹೆಸರು ಉಲ್ಲೇಖಿಸಿ ನನ್ನನ್ನು ಕ್ಷಮಿಸಿ’ ಎಂದು ಬರೆಯಲಾಗಿತ್ತು. ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.