ಸೋಮವಾರಪೇಟೆ, ಜ. ೧೭: ಚಾಲಕನ ನಿಯಂತ್ರಣ ತಪ್ಪಿದ ಓಮ್ನಿ ಕಾರು ರಸ್ತೆ ಬದಿಯಲ್ಲಿರುವ ಕೆರೆಗೆ ಬಿದ್ದು, ಕಾರಿನಲ್ಲಿದ್ದ ೮ ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಂದು ಸಂಜೆ ಪಟ್ಟಣ ಸಮೀಪದ ಯಡೂರು ಗ್ರಾಮದಲ್ಲಿ ನಡೆದಿದೆ.

ಹಾನಗಲ್ಲು ಗ್ರಾಮದ ನಿವಾಸಿ ಶಿವಣ್ಣ ಎಂಬವರು ಚಾಲಿಸುತ್ತಿದ್ದ ಮಾರುತಿ ಕಾರು, ಸೋಮವಾರ ಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಯಡೂರು ಕೆರೆಗೆ ಬಿದ್ದಿದ್ದು, ಕಾರಿನೊಳಗಿದ್ದವರು ಕಿಟಕಿಗಳನ್ನು ಒಡೆದು ಹೊರಬರುವ ಮೂಲಕ ಜೀವ ಉಳಿಸಿಕೊಂಡಿದ್ದಾರೆ.

ಶಿವಣ್ಣ ಅವರಿಗೆ ಬೆಂಕಳ್ಳಿಯಲ್ಲಿ ಕಾಫಿ ತೋಟವಿದ್ದು, ಮದಲಾಪುರ ದಿಂದ ಕಾರ್ಮಿಕರನ್ನು ತೋಟಕ್ಕೆ ಕರೆದೊಯ್ದು, ಸಂಜೆ ವೇಳೆಗೆ ಕಾರಿನಲ್ಲಿ ವಾಪಸ್ ಕರೆತರುತ್ತಿದ್ದ ಸಂದರ್ಭ ಯಡೂರು ಕೆರೆ ಸಮೀಪ ನಿಯಂತ್ರಣ ಕಳೆದುಕೊಂಡಿದೆ.

ಪರಿಣಾಮ ಎಡಬದಿಯಿಂದ ಬಲಬದಿಗೆ ನುಗ್ಗಿದ ಕಾರು, ಏಕಾಏಕಿ ಕೆರೆಯೊಳಗೆ ಧುಮುಕಿದೆ. ಕಾರಿನ ಒಳಗಡೆ ಸಿಲುಕಿದ ಶಿವಣ್ಣ ಹಾಗೂ ಅವರ ಪತ್ನಿ ಲೀಲಾವತಿ ಸೇರಿದಂತೆ ೮ ಮಂದಿ ಕಾರ್ಮಿಕ ಮಹಿಳೆಯರು ಕಾರಿನ ಕಿಟಕಿ ಗಾಜು ಒಡೆದು ಹೊರ ಬಂದಿದ್ದಾರೆ.

ಇವರುಗಳ ಪೈಕಿ ಮದಲಾ ಪುರ ಗ್ರಾಮದ ಜ್ಯೋತಿ ಲಕ್ಷಿö್ಮÃ, ಮನು, ರತಿ, ಸೀತಮ್ಮ ಅವರು ಗಳಿಗೆ ಸಣ್ಣಪುಟ್ಟ ಪೆಟ್ಟಾಗಿದ್ದು, ಸೋಮವಾರಪೇಟೆ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿ ಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ಕಳುಹಿಸಲಾಯಿತು.