ಕರಿಕೆ, ಜ. ೧೬: ಕೊಡಗಿನ ಗಡಿ ಗ್ರಾಮ ಕರಿಕೆಯಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು, ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿರುವ ಗಡಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ಅಂತಿಮ ಹಂತದ ಪೂರ್ವ ತಯಾರಿ ಕುರಿತು ವಿವಿಧ ಸಮಿತಿಗಳ ಜಂಟಿ ಸಭೆ ಎಳ್ಳುಕೊಚ್ಚಿ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಬಾಲಚಂದ್ರ ನಾಯರ್ ಅಧ್ಯಕ್ಷತೆಯಲ್ಲಿ ನಡೆಯಿತು.
ತಾ.೨೬ ರಂದು ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮೆರವಣಿಗೆ ನಡೆಸಿ ನಂತರ ಗಡಿ ಉತ್ಸವದ ಪ್ರಯುಕ್ತ ಸಾರ್ವಜನಿಕರಿಗೆ, ಗ್ರಾಮದ ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ನಡೆಸಲು ತೀರ್ಮಾನಿಸಲಾಯಿತು. ಸ್ವಾಗತ, ಆಹಾರ, ಪ್ರಚಾರ ಮತ್ತು ಮಾಧ್ಯಮ, ಸಾಂಸ್ಕೃತಿಕ, ಕುಡಿಯುವ ನೀರು ನೈರ್ಮಲ್ಯ, ವೇದಿಕೆ ಸೇರಿದಂತೆ ಇತರ ಸಮಿತಿಗಳ ಅಧ್ಯಕ್ಷರು, ಸಂಚಾಲಕರು, ಪದಾಧಿಕಾರಿಗಳನ್ನು ಘೋಷಣೆ ಮಾಡಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಕಾರ್ಯ ಕ್ರಮದ ರೂಪುರೇಷೆಯ ಕುರಿತು ಮಾತನಾಡಿ, ಸರಕಾರದ ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಒಂದು ಲಕ್ಷ ಅನುದಾನ ಸಿಗಲಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕಾದರೆ ಅಗತ್ಯ ಪೂರ್ವ ತಯಾರಿ ಹಾಗೂ ದಾನಿಗಳಿಂದ ವಂತಿಗೆ ಸಂಗ್ರಹದ ಅಗತ್ಯವಿದೆ. ಮೆರವಣಿಗೆ, ವೇದಿಕೆ, ಸ್ವಾಗತ ಸೇರಿದಂತೆ ವಿವಿಧ ಕಾರ್ಯಕ್ರಮ ಗಳಿಗೆ ಅನುಭವಿ ನಿರೂಪಕರು, ನಿರ್ವಾಹಕರು, ಸ್ವಯಂ ಸೇವಕರನ್ನು ನೇಮಿಸಿಕೊಳ್ಳಬೇಕು. ರಾಷ್ಟçಗೀತೆ, ನಾಡಗೀತೆಗೆ ಸಮವಸ್ತçಧಾರಿ ವಿದ್ಯಾರ್ಥಿಗಳನ್ನು ತಯಾರಿ ಮಾಡಬೇಕು. ಗ್ರಾಮ ದಲ್ಲಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸ ಬೇಕು. ಯಾವುದೇ ಕುಂದುಕೊರತೆ ಉಂಟಾಗದAತೆ ಕಾರ್ಯಕ್ರಮ ಆಯೋಜಿಸುವತ್ತ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೋಡಿ ಪೊನ್ನಪ್ಪ ಮಾತನಾಡಿ, ಗ್ರಾಮದಲ್ಲಿ ಗಡಿ ಸಾಂಸ್ಕೃತಿಕ ಉತ್ಸವವನ್ನು ಗಡಿ ಗ್ರಾಮದಲ್ಲಿ ನಡೆಸುವುದರಿಂದ ಪರಸ್ಪರ ಬಾಂಧವ್ಯ ವೃದ್ಧಿಸುತ್ತದೆ. ರಾಜಕೀಯ ಮರೆತು ಗ್ರಾಮಸ್ಥರು ಕಾರ್ಯಕ್ರಮದ ಯಶಸ್ವಿಗಾಗಿ ಸಹಕಾರ ನೀಡುವಂತೆ ಮನವಿ ಮಾಡಿದರು. ಸಭೆಯಲ್ಲಿ ಸಾಹಿತ್ಯ ಪರಿಷತ್ತಿನ ಸಂಪತ್ ಕುಮಾರ್ ಸರಳಾಯ, ರೇವತಿ ರಮೇಶ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೇಕಲ್ ದೇವ ರಾಜ್, ಪಂಚಾಯಿತಿ ಉಪಾಧ್ಯಕ್ಷೆ ಕಲ್ಪನಾ ಜಗದೀಶ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೊಸಮನೆ ಹರೀಶ್, ಆಯುಷ್ ವೈದ್ಯಾಧಿಕಾರಿ ಡಾ.ಪಲ್ಲವಿ, ವಿ.ಎಸ್.ಎಸ್.ಎನ್. ವ್ಯವಸ್ಥಾಪಕ ಎನ್.ಸಿ. ಗಂಗಾಧರ, ಪಂಚಾಯಿತಿ ಸದಸ್ಯರು, ಶಿಕ್ಷಕರು, ಆಶಾ, ಅಂಗನವಾಡಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು. ವೇದಿಕೆ ಸಮಿತಿ ಅಧ್ಯಕ್ಷ ಬೇಕಲ್ ದೇವರಾಜ್ ನಿರೂಪಿಸಿ, ಸ್ವಾಗ ತಿಸಿದರು. -ಸುಧೀರ್ ಹೊದ್ದೆಟ್ಟಿ